: ಕೇಂದ್ರದಲ್ಲಿ ಮೋದಿ ಜಯಭೇರಿ, ರಾಜ್ಯದಲ್ಲಿ ಯಾರಿಗೆ ಹೆಚ್ಚು ಸ್ಥಾನ ಗೊತ್ತಾ? : ಎಕ್ಸಿಟ್ ಪೋಲ್‌ ಪ್ರಕಾರ, ಒಟ್ಟು 543 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಬರೋಬ್ಬರಿ 310 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಅದೇ ರೀತಿ ಕಾಂಗ್ರೆಸ್‌ ನೇತೃತ್ವದ 188 ಮತ್ತು45 ಸ್ಥಾನಗಳಲ್ಲಿ ಇತರರು ಗೆಲುವು ಸಾಧಿಸಲಿದ್ದಾರೆಂದು ಭವಿಷ್ಯ ನುಡಿಯಲಾಗಿದೆ. :ಲೋಕಸಭಾ ಚುನಾವಣೆಯ ಏಳು ಹಂತಗಳ ಮತದಾನ ಮುಕ್ತಾಯಗೊಂಡಿದ್ದು, ಜೂನ್ 4ರ ಫಲಿತಾಂಶಕ್ಕಾಗಿ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಯಾರಿಗೆ ಬಹುಮತ ಒಲಿಯಲಿದೆ ಎಂಬ ಕುತೂಹಲ ಗರಿಗೆದರಿದೆ. ಇದರ ಬನ್ನಲ್ಲೇ ಮತಗಟ್ಟೆ ಸಮೀಕ್ಷೆ ವರದಿಗಳು ಪ್ರಕಟಗೊಂಡಿವೆ. ಈ ಎಕ್ಸಿಟ್‌ ಪೋಲ್‌ ಭವಿಷ್ಯ ನಿಜವಾಗಲಿದೆಯೇ ಅನ್ನೋದರ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. ಈ ನಡುವೆ ಇದೇ ಮೊದಲ ಬಾರಿಗೆ ಭಾನುವಾರಎಕ್ಸಿಟ್ ಪೋಲ್‌ ಪ್ರಕಟವಾಗಿದೆ. ಈ ಎಕ್ಸಿಟ್‌ ಪೋಲ್‌ನ ಡೇಟಾ ಸಂಗ್ರಹಣೆಗೆ ತಂತ್ರಜ್ಞಾನವನ್ನು ಬಳಸಲಾಗಿದೆ. ಕೃತಕ ಬುದ್ಧಿಮತ್ತೆ ಬಳಸುವ ಮೂಲಕ ನಡೆಸಲಾದ ಈ ಎಕ್ಸಿಟ್ ಪೋಲ್‌ಗೆ 10 ಕೋಟಿ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಈ ಫಲಿತಾಂಶವು ಕೇವಲ ಎಕ್ಸಿಟ್ ಪೋಲ್ ಮುನ್ಸೂಚನೆಯಾಗಿದ್ದು, ನಿಜವಾದ ಫಲಿತಾಂಶವಲ್ಲ. ಎಕ್ಸಿಟ್ ಪೋಲ್‌ ಪ್ರಕಾರ, ಒಟ್ಟು 543 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಬರೋಬ್ಬರಿ 310 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಅದೇ ರೀತಿ ಕಾಂಗ್ರೆಸ್‌ ನೇತೃತ್ವದ 188 ಮತ್ತು45 ಸ್ಥಾನಗಳಲ್ಲಿ ಇತರರು ಗೆಲುವು ಸಾಧಿಸಲಿದ್ದಾರೆಂದು ಭವಿಷ್ಯ ನುಡಿಯಲಾಗಿದೆ. ಇದನ್ನೂ ಓದಿ: पर एग्जिट पोल : एग्जिट पोल का अनुमान.. तीसरी बार मोदी सरकार! 🔸 : 305-315🔸.... : 180-195🔸 : 38-52 देखिए - — (@) ಉತ್ತರಪ್ರದೇಶದಲ್ಲಿ ಗೆಲುವು ಸಾಧ್ಯತೆ: ಎಕ್ಸಿಟ್ ಪೋಲ್‌ ಪ್ರಕಾರ, 80 ಸ್ಥಾನಗಳ ಪೈಕಿ ಉತ್ತರ ಪ್ರದೇಶದಲ್ಲಿ ಮೈತ್ರಿಕೂಟ 52-58 ಸ್ಥಾನಗಳನ್ನು ಪಡೆಯಲಿದ್ದು, ಇಂಡಿಯಾ ಮೈತ್ರಿಕೂಟವು 22-26 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಇತರರು 1 ಸ್ಥಾನಗಳಲ್ಲಿ ಜಯ ಸಾಧಿಸಲಿದ್ದಾರೆಂದು ಹೇಳಲಾಗಿದೆ. ಆಂಧ್ರಪ್ರದೇಶದಲ್ಲಿ ಯಾರಿಗೆ ವಿಜಯ..?: ಎಕ್ಸಿಟ್ ಪೋಲ್‌ ಪ್ರಕಾರ, 25 ಸ್ಥಾನಗಳ ಪೈಕಿ ಆಂಧ್ರಪ್ರದೇಶದಲ್ಲಿ ಮೈತ್ರಿಕೂಟಕ್ಕೆ 12-15 ಸ್ಥಾನಗಳು ಲಭಿಸಿದರೆ, ಇಂಡಿಯಾ ಮೈತ್ರಿಕೂಟಕ್ಕೆ 2-4 ಸ್ಥಾನಗಳು ಮತ್ತು ಇತರರಿಗೆ 6-10 ಸ್ಥಾನಗಳು ದೊರೆಯಲಿದೆ ಎಂದು ಹೇಳಲಾಗಿದೆ. ಬಿಹಾರದಲ್ಲಿ ಯಾರಿಗೆ ಹೆಚ್ಚು ಸ್ಥಾನ?: ಎಕ್ಸಿಟ್ ಪೋಲ್‌ ಪ್ರಕಾರ, 40 ಸ್ಥಾನಗಳ ಪೈಕಿ ಬಿಹಾರದಲ್ಲಿ ಮೈತ್ರಿಕೂಟಕ್ಕೆ 15-25 ಸ್ಥಾನಗಳು ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 15-25 ಸ್ಥಾನಗಳ ಲಭಿಸಲಿವೆ ಎಂದು ಹೇಳಲಾಗಿದೆ. ಕರ್ನಾಟಕ: ಎಕ್ಸಿಟ್ ಪೋಲ್‌ ಪ್ರಕಾರ, 28 ಸ್ಥಾನಗಳ ಪೈಕಿ ಕರ್ನಾಟಕದಲ್ಲಿ ಮೈತ್ರಿಕೂಟಕ್ಕೆ 10-14 ಸ್ಥಾನಗಳು ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 12-20 ಸ್ಥಾನಗಳು ಲಭಿಸಲಿವೆ ಎಂದು ಹೇಳಲಾಗಿದೆ. ಮಧ್ಯಪ್ರದೇಶ: ಎಕ್ಸಿಟ್ ಪೋಲ್‌ ಪ್ರಕಾರ, 29 ಸ್ಥಾನಗಳ ಪೈಕಿ ಮಧ್ಯಪ್ರದೇಶದಲ್ಲಿ ಮೈತ್ರಿಕೂಟಕ್ಕೆ 16-22 ಸ್ಥಾನಗಳು ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 8-12 ಸ್ಥಾನಗಳು ಲಭಿಸಲಿವೆ. ಮಹಾರಾಷ್ಟ್ರ: ಎಕ್ಸಿಟ್ ಪೋಲ್‌ ಪ್ರಕಾರ, 48 ಸ್ಥಾನಗಳ ಪೈಕಿ ಮಹಾರಾಷ್ಟ್ರದಲ್ಲಿ ಮೈತ್ರಿಕೂಟಕ್ಕೆ 26-34 ಸ್ಥಾನಗಳು ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 15-21 ಸ್ಥಾನಗಳು ಲಭಿಸಲಿವೆ. ರಾಜಸ್ಥಾನ: ಎಕ್ಸಿಟ್ ಪೋಲ್‌ ಪ್ರಕಾರ, 25 ಸ್ಥಾನಗಳ ಪೈಕಿ ರಾಜಸ್ಥಾನದಲ್ಲಿ ಮೈತ್ರಿಕೂಟಕ್ಕೆ 15-19 ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 6-10 ಸ್ಥಾನಗಳು ಲಭಿಸಲಿವೆ ಎಂದು ಹೇಳಲಾಗಿದೆ. ತಮಿಳುನಾಡು: ಎಕ್ಸಿಟ್ ಪೋಲ್‌ ಪ್ರಕಾರ, 39 ಸ್ಥಾನಗಳ ಪೈಕಿ ತಮಿಳುನಾಡಿನಲ್ಲಿ ಮೈತ್ರಿಕೂಟಕ್ಕೆ 19-12, ಇಂಡಿಯಾ ಮೈತ್ರಿಕೂಟಕ್ಕೆ 21-27 ಮತ್ತು ಇತರರು 3-5 ಸ್ಥಾನಗಳು ಲಭಿಸಲಿವೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳ: ಎಕ್ಸಿಟ್ ಪೋಲ್‌ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಮೈತ್ರಿಕೂಟ 20-24 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಮತ್ತು ಟಿಎಂಸಿ 16-22 ಸ್ಥಾನಗಳನ್ನು ಪಡೆಯಬಹುದು.ವು 0-1 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...