ಪುರಿಯಲ್ಲಿ ಚಂದನ್ ಯಾತ್ರೆ ವೇಳೆ ಪಟಾಕಿ ಸ್ಫೋಟ: 20 ಮಂದಿಗೆ ಗಾಯ, ಕೆಲವರ ಸ್ಥಿತಿ ಚಿಂತಾಜನಕ : ಒಡಿಶಾದ ಪೂರಿಯಲ್ಲಿ ಭಗವಾನ್ ಜಗನ್ನಾಥನ ಚಂದನ್ ಯಾತ್ರೆಯ ವೇಳೆ ಪಟಾಕಿ ಸಿಡಿದು ಸುಮಾರು 20ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ. :ಪುರಿಯಲ್ಲಿ ಬುಧವಾರ (ಮೇ 29) ಭಗವಾನ್ ಜಗನ್ನಾಥನ ಚಂದನ್ ಯಾತ್ರೆಯ ಸಂದರ್ಭದಲ್ಲಿ ಪಟಾಕಿಗಳು ಸ್ಫೋಟಗೊಂಡಿದ್ದು ( ) 20ಕ್ಕೂ ಹೆಕ್ಕು ಮಂದಿ ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇವಿ ಘಾಟ್ ಕೊಳದ ದಂಡೆಯಲ್ಲಿ ಪಟಾಕಿ ಸ್ಫೋಟ:( ) ವೇಳೆ ದೇವಿ ಘಾಟ್ ದಡದಲ್ಲಿ ಪಟಾಕಿ ಸಿಡಿಸುವ ವ್ಯವಸ್ಥೆಯೂ ಇತ್ತು. ಪಟಾಕಿ ಸಿಡಿಸಿದ ಕಿಡಿ ಪುಣ್ಯ ಕೊಳದಲ್ಲಿ ಜಲಕ್ರೀಡೆ ವೀಕ್ಷಿಸಲು ನೆರೆದಿದ್ದ ಭಕ್ತರ ಮೇಲೆ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ದುರ್ಘಟನೆಯಲ್ಲಿ ಗಾಯಗೊಂಡಿರುವವರಲ್ಲಿ ಸುಮಾರು ಆರು ಜನರ ಸ್ಥಿತಿ ಗಂಭೀರವಾಗಿದೆ. ಒಂದು ಮಗುವಿನ ಕೈ ತೀವ್ರವಾಗಿ ಸುಟ್ಟುಹೋಗಿದೆ ಎಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ- ಜಗನ್ನಾಥನ ಚಂದನ್ ಯಾತ್ರೆಯ ( ) ವೇಳೆ ಸಂಭವಿಸಿರುವ ಈ ದುರ್ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವಅವರು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ತಮ್ಮ ಮುಖ್ಯ ಆಡಳಿತ ಕಾರ್ಯದರ್ಶಿ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ( ), ''ಪುರಿ ನರೇಂದ್ರ ಕೊಳದ ಬಳಿ ನಡೆದ ಅಪಘಾತದ ಬಗ್ಗೆ ಕೇಳಿ ವಿಷಾದವಿದೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ವ್ಯವಸ್ಥೆ ಬಗ್ಗೆ ನಿಗಾ ವಹಿಸುವಂತೆ ಮುಖ್ಯ ಆಡಳಿತ ಕಾರ್ಯದರ್ಶಿ ಹಾಗೂ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಗಾಯಾಳುಗಳ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಮುಖ್ಯಮಂತ್ರಿಗಳ ಪರಿಹಾರದಿಂದ ಭರಿಸಲಾಗುವುದು. ಎಲ್ಲರಿಗೂ ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ" ಎಂದು ಬರೆದಿದ್ದಾರೆ. ಇದನ್ನೂ ಓದಿ- ಘಟನೆ ಕುರಿತಂತೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ( ) ಕೂಡ ಬೇಸರ ವ್ಯಕ್ತಪಡಿಸಿದ್ದು, "ಪುರಿ ಚಂದನ ಯಾತ್ರೆಯ ವೇಳೆ ನರೇಂದ್ರ ಪುಷ್ಕರಿಣಿ ದೇವಿಘಾಟ್‌ನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿರುವ ಸುದ್ದಿ ಕೇಳಿ ಬೇಸರವಾಗಿದೆ.ಭಗವಂತನ ಆಶೀರ್ವಾದದಿಂದ ಚಿಕಿತ್ಸೆ ಪಡೆಯುತ್ತಿರುವವರು ಬೇಗ ಗುಣಮುಖರಾಗಿ ಮನೆಗೆ ಹಿಂತಿರುಗಲಿ ಎಂದು ಹಾರೈಸುತ್ತೇನೆ" ಎಂದವರು 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...