: ಪಿಎಂ ಕಿಸಾನ್ 17ನೇ ಕಂತು ಬಿಡುಗಡೆ: ಖಾತೆಗೆ ಹಣ ಜಮೆಯಾಗಿದೆಯೇ ಎಂದು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ : 9.26 ಕೋಟಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ 20 ಸಾವಿರ ಕೋಟಿಗೂ ಹೆಚ್ಚು ಹಣವನ್ನು ನೇರವಾಗಿ ಮೋದಿ ಜಮಾ ಮಾಡಲಿದ್ದಾರೆ. ಇದೇ ವೇಳೆ ವಾಟ್ಸ್‌ಆ್ಯಪ್ ಗ್ರೂಪ್‌’ಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. :ಜೂನ್ 18ರಂದು ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮಾ ಆಗಲಿದೆ. 17ನೇ ಕಂತಿನ ಹಣಕ್ಕಾಗಿ ಹಲವರು ಕಾಯುತ್ತಿದ್ದು, ವಾರಣಾಸಿಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್‌’ಗೆ ಸಂಬಂಧಿಸಿದ 17 ನೇ ಕಂತಿನ ನಿಧಿಯನ್ನು ಬಿಡುಗಡೆ ಮಾಡಲಿದ್ದಾರೆ. 9.26 ಕೋಟಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ 20 ಸಾವಿರ ಕೋಟಿಗೂ ಹೆಚ್ಚು ಹಣವನ್ನು ನೇರವಾಗಿ ಮೋದಿ ಜಮಾ ಮಾಡಲಿದ್ದಾರೆ. ಇದೇ ವೇಳೆ ವಾಟ್ಸ್‌ಆ್ಯಪ್ ಗ್ರೂಪ್‌’ಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ವಾಟ್ಸಾಪ್ ಗ್ರೂಪ್‌’ಗಳಲ್ಲಿರುವ ಪ್ರತಿಯೊಂದು ಲಿಂಕ್ ಅನ್ನು ಕ್ಲಿಕ್ ಮಾಡದಂತೆ ಸೂಚಿಸಲಾಗಿದೆ. ನಿಮ್ಮ ಕೈಯಲ್ಲಿ ಮೊಬೈಲ್ ಇದೆ ಎಂದು ಗ್ರೂಪ್ ನಲ್ಲಿರುವ ಬರುವ ಲಿಂಕ್ ಗಳನ್ನು ಕ್ಲಿಕ್ ಮಾಡುತ್ತಲೇ ಇದ್ದರೆ ಹ್ಯಾಕ್ ಆಗುವುದು ಖಚಿತ. ಇದಲ್ಲದೆ, ನಮ್ಮ ಫೋನ್ ಸಂಖ್ಯೆಯೊಂದಿಗೆ ಇತರರಿಗೆ ಸಂದೇಶಗಳನ್ನು ಕಳುಹಿಸುವ ಅಪಾಯವಿದೆ. ಇತ್ತೀಚೆಗಷ್ಟೇ ಅದಿಲಾಬಾದ್ ಜಿಲ್ಲೆಯ ಸಿರಿಕೊಂಡ ಮಂಡಲದ ಸೊಂಪೆಲ್ಲಿ ಗ್ರಾಮದಲ್ಲಿ ಇಂತಹದ್ದೇ ಘಟನೆ ನಡೆದಿದೆ. ಸೊಂಪೆಲ್ಲಿ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮಂದಿಯ ವಾಟ್ಸ್‌ಆ್ಯಪ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎನ್ನಲಾಗಿದೆ. ಆ ಹಳ್ಳಿಯ ಯುವಕರು ತಮ್ಮ ಗ್ರೂಪ್‌’ಗಳಲ್ಲಿ ಬಂದ ಪಿಎಂ ಕಿಸಾನ್ ಆ್ಯಪ್ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ. ಸ್ವಲ್ಪ ಸಮಯದಲ್ಲೇ ಅವರ ವಾಟ್ಸಾಪ್ ಸಂಪೂರ್ಣ ಹ್ಯಾಕ್ ಆಗಿತ್ತು. ಈ ಕುರಿತು ಸೈಬರ್ ಕ್ರೈಂ ಡಿಎಸ್ಪಿ ವಿವರಣೆ ನೀಡಿದ್ದಾರೆ. ಮೊಬೈಲ್ ನಲ್ಲಿ ಬರುವ ಆ್ಯಪ್’ಗಳ ಬಗ್ಗೆ ಎಲ್ಲರೂ ಎಚ್ಚರದಿಂದ ಇರುವಂತೆ ಎಚ್ಚರಿಕೆ ನೀಡಲಾಗಿದೆ. ಯಾವುದೇ ಸಂದರ್ಭದಲ್ಲೂ ಪಿಎಂ ಕಿಸಾನ್ ಆ್ಯಪ್‌’ಗಳನ್ನು ಕ್ಲಿಕ್ ಮಾಡಬೇಡಿ. ಯಾವುದೇ ಸೈಬರ್ ವಂಚನೆಯ ಸಂದರ್ಭದಲ್ಲಿ, ತಕ್ಷಣವೇ 1930 ಟೋಲ್ ಫ್ರೀ ಸಂಖ್ಯೆಯನ್ನು ಸಂಪರ್ಕಿಸಿ. ಫಲಾನುಭವಿಯಸ್ಟೇಟಸ್ ಪರಿಶೀಲನೆ ಪ್ರಕ್ರಿಯೆ -ಆಧಾರಿತ - ಗಾಗಿ ಅನುಸರಿಸಬೇಕಾದ ಹಂತಗಳು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...