: ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಪೆನ್ಸಿಲಿನ್ ಕಂಡುಹಿಡಿದ ವಿಜ್ಞಾನಿ ಯಾರು? ಉತ್ತರ: ಅಲೆಕ್ಸಾಂಡರ್ ಫ್ಲೆಮಿಂಗ್ ಪ್ರಶ್ನೆ 2:ಯಾವ ಗ್ರಹವನ್ನು "ಬ್ಲೂ ಪ್ಲಾನೆಟ್" ಎಂದು ಕರೆಯಲಾಗುತ್ತದೆ? ಉತ್ತರ: ಭೂಮಿ ಪ್ರಶ್ನೆ 3:ಜಪಾನ್‌ನ ಕರೆನ್ಸಿ ಯಾವುದು? ಉತ್ತರ: ಜಪಾನೀಸ್ ಯೆನ್ ಪ್ರಶ್ನೆ 4:ಯಾವ ಅನಿಲವು ಭೂಮಿಯ ವಾತಾವರಣದ ಬಹುಪಾಲು ಭಾಗವನ್ನು ಹೊಂದಿದೆ? ಉತ್ತರ: ಸಾರಜನಕ ಪ್ರಶ್ನೆ 5:ವಾಟರ್ಲೂ ಕದನ ( ) ಯಾವ ವರ್ಷದಲ್ಲಿ ನಡೆಯಿತು? ಉತ್ತರ: 1815 ಪ್ರಶ್ನೆ 6:ವಿಶ್ವಪ್ರಸಿದ್ಧ "ದಿ ಒಡಿಸ್ಸಿ" ಕೃತಿಯನ್ನು ಬರೆದವರು ಯಾರು? ಉತ್ತರ: ಹೋಮರ್ ಇದನ್ನೂ ಓದಿ: ಪ್ರಶ್ನೆ 7: ಗುರುತ್ವಾಕರ್ಷಣೆಯ ನಿಯಮವನ್ನು ಕಂಡುಹಿಡಿದವರು ಯಾರು? ಉತ್ತರ: ಸರ್ ಐಸಾಕ್ ನ್ಯೂಟನ್ ಪ್ರಶ್ನೆ 8:ಫ್ರೆಂಚ್ ಕ್ರಾಂತಿ ಯಾವ ವರ್ಷದಲ್ಲಿ ಪ್ರಾರಂಭವಾಯಿತು? ಉತ್ತರ: 1789 ಪ್ರಶ್ನೆ 9:ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು? ಉತ್ತರ: ಬರ್ತಾ ವಾನ್ ಸಟ್ನರ್ ಪ್ರಶ್ನೆ 10: "ಜೀವಶಾಸ್ತ್ರದ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಅರಿಸ್ಟಾಟಲ್ ಪ್ರಶ್ನೆ 11:ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು? ಉತ್ತರ: ಮೇರಿ ಕ್ಯೂರಿ ಪ್ರಶ್ನೆ 12:ನಮ್ಮ ಸೌರವ್ಯೂಹದಲ್ಲಿ ಅತಿ ದೊಡ್ಡ ಚಂದ್ರ ಯಾವುದು? ಉತ್ತರ:ಗ್ಯಾನಿಮೀಡ್ (ಗುರುಗ್ರಹದ ಚಂದ್ರ) ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...