: ಭಾರತದ ಅತಿ ಹೆಚ್ಚು ಉಪ್ಪು ಉತ್ಪಾದಿಸುವ ರಾಜ್ಯ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪಶ್ನೆ 1:ಜೈನ ಧರ್ಮದ ಮೊದಲ ತೀರ್ಥಂಕರ ಯಾರು? ಉತ್ತರ: ರಿಷಭನಾಥ ಪ್ರಶ್ನೆ 2:ಮೌರ್ಯರ ಆಡಳಿತದಲ್ಲಿ ಆದಾಯದ ಮುಖ್ಯ ಮೂಲ ಯಾವುದು? ಉತ್ತರ: ಭೂ ಕಂದಾಯ ಪ್ರಶ್ನೆ 3:ಯಾವ ವರ್ಷದಲ್ಲಿ, ಮಹಾತ್ಮ ಗಾಂಧಿಯವರು ಸಬರಮತಿ ಆಶ್ರಮವನ್ನು ಸ್ಥಾಪಿಸಿದರು? ಉತ್ತರ: 1917 ಪ್ರಶ್ನೆ 4:ಸತತ ಎರಡು ಅವಧಿಗೆ ಭಾರತದ ಉಪರಾಷ್ಟ್ರಪತಿ ಹುದ್ದೆಯನ್ನು ಯಾರು ಹೊಂದಿದ್ದರು? ಉತ್ತರ: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಪ್ರಶ್ನೆ 5:ಅರಣ್ಯ ಸಂಶೋಧನಾ ಸಂಸ್ಥೆ ಎಲ್ಲಿದೆ? ಉತ್ತರ: ಡೆಹ್ರಾಡೂನ್ ಇದನ್ನೂ ಓದಿ: ಪ್ರಶ್ನೆ 6:ಭಾರತದ ಅತಿ ಹೆಚ್ಚು ಉಪ್ಪು ಉತ್ಪಾದಿಸುವ ರಾಜ್ಯ ಯಾವುದು? ಉತ್ತರ: ಗುಜರಾತ್ ಪ್ರಶ್ನೆ 7:ಯಾವ ರಾಜ್ಯವು ಭಾರತದ ಅತಿದೊಡ್ಡ ಬಾಕ್ಸೈಟ್ ಉತ್ಪಾದಕವಾಗಿದೆ? ಉತ್ತರ: ಒಡಿಶಾ ಪ್ರಶ್ನೆ 8: ʼಹಿಂದ್ ಸ್ವರಾಜ್ʼ ಕೃತಿಯನ್ನು ಬರೆದವರು ಯಾರು? ಉತ್ತರ: ಮಹಾತ್ಮ ಗಾಂಧಿ ಪ್ರಶ್ನೆ 9:ವಿಜಯನಗರ ಸಾಮ್ರಾಜ್ಯದಲ್ಲಿ ಪ್ರಮುಖ ಆಮದು ಉತ್ಪನ್ನ ಯಾವುದಾಗಿತ್ತು..? ಉತ್ತರ: ಕುದುರೆಗಳು ಪ್ರಶ್ನೆ 10:ಯಾವ ಸುಲ್ತಾನನು ಉತ್ತರಪ್ರದೇಶದ ಜೌನ್‌ಪುರ ನಗರವನ್ನು ನಿರ್ಮಿಸಿದನು? ಉತ್ತರ: ಮೊಹಮ್ಮದ್ ಬಿನ್ ತುಘಲಕ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...