ಉತ್ತರ ಪ್ರದೇಶದಲ್ಲಿ ವಧುವಿಗೆ ಕಿಸ್ ಕೊಟ್ಟಿದ್ದಕ್ಕೆ ವರನಿಗೆ ಬಿತ್ತು ಗೂಸಾ...! ವರನ ಕೃತ್ಯದಿಂದ ಕುಪಿತಗೊಂಡ ಎರಡು ಕಡೆಯವರ ನಡುವೆ ವಾಗ್ವಾದ ನಡೆದಿದೆ. ಇದಾದ ಬಳಿಕ ವಧುವಿನ ಕುಟುಂಬಸ್ಥರು ದೊಣ್ಣೆ ಹಿಡಿದು ವೇದಿಕೆ ಮೇಲೆ ಏರಿ ವರನ ಮನೆಯವರಿಗೆ ಥಳಿಸಿದ್ದಾರೆ. ಘರ್ಷಣೆಯಲ್ಲಿ ವಧುವಿನ ತಂದೆ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.ಈಗ ಪೊಲೀಸರು ಎರಡೂ ಕುಟುಂಬಗಳ ಏಳು ಜನರನ್ನು ಬಂಧಿಸಿದ್ದಾರೆ. ನವದೆಹಲಿ:ಉತ್ತರ ಪ್ರದೇಶದಲ್ಲಿ ಸೋಮವಾರ ನಡೆದ ತಮ್ಮ ವಿವಾಹದ ಸಂದರ್ಭದಲ್ಲಿ ವರನೊಬ್ಬ ತನ್ನ ವಧುವಿನ ಮೇಲಿನ ಪ್ರೀತಿಯನ್ನು ಸಾರ್ವಜನಿಕವಾಗಿ ಚುಂಬಿಸಿದ ನಂತರ ಅವರ ಕುಟುಂಬಗಳ ನಡುವೆ ಘರ್ಷಣೆಗೆ ಕಾರಣವಾಯಿತು. ವರ್ಮಲಾ ಸಮಾರಂಭದಲ್ಲಿ ನವವಿವಾಹಿತರು ಪರಸ್ಪರ ಕಿಸ್ ಕೊಟ್ಟಿದ್ದರಿಂದಾಗಿ ವಧುವಿನ ಕುಟುಂಬವು ವರನ ಸಂಬಂಧಿಕರನ್ನು ವೇದಿಕೆಯಲ್ಲಿ ಥಳಿಸಿದ ಘಟನೆ ಹಾಪುರದ ಅಶೋಕ್ ನಗರದಲ್ಲಿ ನಡೆದಿದೆ. ಈ ಘಟನೆಯಿಂದಾಗಿ ಈಗ ಮದುವೆ ಸ್ಥಳ ರಣರಂಗವಾಗಿ ಮಾರ್ಪಟ್ಟಿದೆ. ಇದನ್ನೂ ಓದಿ: ವರನ ಕೃತ್ಯದಿಂದ ಕುಪಿತಗೊಂಡ ಎರಡು ಕಡೆಯವರ ನಡುವೆ ವಾಗ್ವಾದ ನಡೆದಿದೆ. ಇದಾದ ಬಳಿಕ ವಧುವಿನ ಕುಟುಂಬಸ್ಥರು ದೊಣ್ಣೆ ಹಿಡಿದು ವೇದಿಕೆ ಮೇಲೆ ಏರಿ ವರನ ಮನೆಯವರಿಗೆ ಥಳಿಸಿದ್ದಾರೆ. ಘರ್ಷಣೆಯಲ್ಲಿ ವಧುವಿನ ತಂದೆ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.ಈಗ ಪೊಲೀಸರು ಎರಡೂ ಕುಟುಂಬಗಳ ಏಳು ಜನರನ್ನು ಬಂಧಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಪೊಲೀಸರ ಪ್ರಕಾರ, ಸೋಮವಾರ ರಾತ್ರಿ ವಧುವಿನ ತಂದೆ ತನ್ನ ಇಬ್ಬರು ಹೆಣ್ಣುಮಕ್ಕಳ ಮದುವೆಯನ್ನು ಏರ್ಪಡಿಸಿದ್ದರು. ಮೊದಲ ಮದುವೆ ಯಾವುದೇ ತೊಂದರೆಯಿಲ್ಲದೆ ಮುಕ್ತಾಯಗೊಂಡರೆ, ಎರಡನೇ ಸಮಾರಂಭವು ತೀವ್ರ ಗಲಭೆಗೆ ಕಾರಣವಾಯಿತು. ಇದನ್ನೂ ಓದಿ: ವಧುವಿನ ಕುಟುಂಬವು ವರನು ವೇದಿಕೆಯ ಮೇಲೆ ಬಲವಂತವಾಗಿ ಚುಂಬಿಸಿದ್ದಾನೆ ಎಂದು ಆರೋಪಿಸಿದರು, ಆದರೆ ವರ್ಮಲಾ ಸಮಾರಂಭದ ನಂತರ ವಧು ಚುಂಬಿಸುವಂತೆ ಒತ್ತಾಯಿಸಿದರು ಎಂದು ವರ ಹೇಳಿದ್ದಾನೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಲಿಖಿತ ದೂರು ಬಂದಿಲ್ಲ ಮತ್ತು ದೂರಿನ ಸ್ವೀಕೃತಿಯ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹಾಪುರ್ ಹಿರಿಯ ಪೊಲೀಸ್ ಅಧಿಕಾರಿ ರಾಜ್‌ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 151 ರ ಅಡಿಯಲ್ಲಿ ಸಾರ್ವಜನಿಕ ಶಾಂತಿ ಕದಡುವ ಆರೋಪದಡಿ ಆರು ಜನರ ಮೇಲೆ ಆರೋಪ ಹೊರಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...