ಭಾರೀ ಗಾಳಿಗೆ ನದಿಯಲ್ಲಿ ಮಗುಚಿದ ದೋಣಿ :ವಿಹಾರಕ್ಕೆ ತೆರಳಿದ್ದ 6 ಜನ ನೀರು ಪಾಲು! ಮಹಾರಾಷ್ಟ್ರದ ಪುಣೆ ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ ದೋಣಿ ಮುಗುಚಿ 6 ಜನರು ನೀರು ಪಾಲಾಗಿದ್ದಾರೆ. ಬೆಳಗಾವಿ:ಮಹಾರಾಷ್ಟ್ರದಲ್ಲಿ ಭಾರೀ ಗಾಳಿ ಬೀಸಿ ದೋಣಿ ಮುಗುಚಿ ಭೀಕರ ಅವಘಡ ಸಂಭವಿಸಿದೆ . ಘಟನೆಯಲ್ಲಿ ಒಂದು ವರ್ಷದ ಮಗು ಸೇರಿ 6ಜನ‌ ನೀರು ಪಾಲಾಗಿದ್ದಾರೆ. ಪುಣೆ ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ ಈ ದುರ್ಘಟನೆ ನಡೆದಿದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ6 ಜನರು ನೀರು ಪಾಲಾಗಿದ್ದಾರೆ.ಉಜ್ಜನಿ ಜಲಾಶಯದ ಹಿನ್ನೀರಿನಲ್ಲಿ ಕುಟುಂಬಸ್ಥರು ದೋಣಿ ವಿಹಾರಕ್ಕೆ ತೆರಳಿದ್ದರು. ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಉಜ್ಜನಿ ಜಲಾಶಯದಲ್ಲಿ ಗೋಕುಳ ಜಾಧವ್(೩೦) ಕೋಮಲ್ ಜಾಧವ್(೨೬) ಶುಭ ಜಾಧವ್(೧) ಮಾಹಿ ಜಾಧವ್(೩) ನೀರು ಪಾಲಾಗಿದ್ದಾರೆ. ಇದನ್ನೂ ಓದಿ : ಇನ್ನೂ ಅದೇ ದೋಣಿಯಲ್ಲಿ ಮತ್ತಿಬ್ಬರು ವಿಹಾರಿಗಳು ಸಹ ಪಯಣಿಸುತ್ತಿದ್ದು ಅವರೂ ನೀರು ಪಾಲಾಗಿದ್ದಾರೆ.ಕುಗ್ಗಾಂವ್ ಗ್ರಾಮದ ಅನುರಾಗ್ ಅವಘಡೆ, ಗೌರವ್ ಡೋಂಗರೆ.ನೀರುಪಾಲಾಗಿರುವರ ಹುಡುಕಾಟಕ್ಕೆ ಎನ್ ಡಿ ಆರ್ ಎಫ್ ತಂಡದ ಸಿಬ್ಬಂದಿಗಳು ಆಗಮಿಸಿದೆ.ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಎನ್ ಡಿ ಆರ್ ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಹುಡುಕಾಟ ಮುಂದುವರೆಸಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...