: ಮಾನವ ದೇಹದಲ್ಲಿನ ಅತ್ಯಂತ ಚಿಕ್ಕ ಮೂಳೆ ಯಾವುದು..? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಆಂಧ್ರಪ್ರದೇಶದ ಜಾನಪದ ನೃತ್ಯವನ್ನು ಹೆಸರಿಸಿ? ಉತ್ತರ: ಕೂಚಿಪುಡಿ, ವಿಲಾಸಿನಿ ನಾಟ್ಯಂ, ಆಂಧ್ರನಾಟ್ಯಂ ಇತ್ಯಾದಿ ಪ್ರಶ್ನೆ 2:ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಫೆಬ್ರವರಿ 21 ಪ್ರಶ್ನೆ 3:ಭಾರತೀಯ ಸಂವಿಧಾನದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ..? ಉತ್ತರ: ಡಾ.ಬಿ.ಆರ್.ಅಂಬೇಡ್ಕರ್ ಪ್ರಶ್ನೆ 4:ʼವಿಂಗ್ಸ್ ಆಫ್ ಫೈರ್ʼ ಪುಸ್ತಕವನ್ನು ಬರೆದ ಲೇಖಕರು ಯಾರು? ಉತ್ತರ: ಡಾ. ಎಪಿಜೆ ಅಬ್ದುಲ್ ಕಲಾಂ ಮತ್ತು ಅರುಣ್ ತಿವಾರಿ ಪ್ರಶ್ನೆ 5:ಭಾರತದ ಮೊದಲ ಪ್ರಧಾನ ಮಂತ್ರಿ ಯಾರು? ಉತ್ತರ: ಜವಾಹರಲಾಲ್ ನೆಹರು ಇದನ್ನೂ ಓದಿ: ಪ್ರಶ್ನೆ 6: ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಯಾರು? ಉತ್ತರ: ಇಂದಿರಾ ಗಾಂಧಿ ಪ್ರಶ್ನೆ7: ಅಮೆರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರೀಯ ಪಕ್ಷಿ ಯಾವುದು? ಉತ್ತರ: ಬಾಲ್ಡ್ ಹದ್ದು ( ) ಪ್ರಶ್ನೆ 8:ವಿಶ್ವದ ಅತ್ಯಂತ ಆಳವಾದ ಸಾಗರ ಯಾವುದು..? ಉತ್ತರ: ಪೆಸಿಫಿಕ್ ಸಾಗರ ಪ್ರಶ್ನೆ 9:ಮಾನವ ದೇಹದಲ್ಲಿನ ಅತ್ಯಂತ ಚಿಕ್ಕ ಮೂಳೆ ಯಾವುದು..? ಉತ್ತರ:ಮಧ್ಯದ ಕಿವಿಯಲ್ಲಿರುವ ಮೂಳೆ (ಸ್ಟೇಪ್ಸ್) ಪ್ರಶ್ನೆ 10:ಆಕಾಶಬುಟ್ಟಿಗಳಲ್ಲಿ ತುಂಬುವ ಅನಿಲ ಯಾವುದು..? ಉತ್ತರ: ಹೀಲಿಯಂ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...