: ರೇಷನ್ ಕಾರ್ಡ್‌ದಾರರಿಗೆ ಸಿಗಲಿದೆ ಕಾಂಡೋಮ್ ಜೊತೆ ಈ 46 ವಸ್ತುಗಳು! : ಕೇಂದ್ರ ಸರ್ಕಾರದಿಂದ ಉಚಿತವಾಗಿ ಅಕ್ಕಿ, ಗೋಧಿ, ರಾಗಿ, ಬೇಳೆ, ಕಡಲೆಕಾಳು ಮುಂತಾದ ಧಾನ್ಯಗಳು ವಿತರಣೆಯಾಗುತ್ತಿವೆ. ʼಒನ್ ನೇಶನ್ ಒಂದೇ ರೇಷನ್ʼ ಯೋಜನೆಯಡಿ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಕುಟುಂಬದ ಪಾಲಿನ ಪಡಿತರ ಪಡೆಯುವ ಅವಕಾಶ ಲಭ್ಯವಿದೆ. ನವದೆಹಲಿ:ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಸರ್ಕಾರವು ಉಚಿತ ಪಡಿತರದಲ್ಲಿ ಅಕ್ಕಿ, ರಾಗಿ, ಗೋಧಿ ಜೊತೆಗೆ 46 ವಸ್ತುಗಳನ್ನು ವಿತರಿಸಲು ಪಟ್ಟಿ ತಯಾರಿಸಿದೆ. ಈ ಪಟ್ಟಿಯ ಪ್ರಕಾರ ಉತ್ತರಪ್ರದೇಶ ರಾಜ್ಯದ ಜನತೆಗೆ ಉಚಿತವಾಗಿ ಕಾಂಡೋಮ್‌, ಸ್ಯಾನಿಟರಿ ಪ್ಯಾಡ್‌ಗಳು ಸಹ ದೊರೆಯಲಿವೆ. ಯುಪಿ ಸರ್ಕಾರವು ತನ್ನ ರಾಜ್ಯದ ಜನತೆಗೆ ಉಚಿತವಾಗಿ ನೀಡಲಿರುವ 46 ವಸ್ತುಗಳು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ʼಒನ್ ನೇಶನ್ ಒಂದೇ ರೇಷನ್!: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ದೇಶದಾದ್ಯಂತ ಇರುವ ಪ್ರತಿ ಕುಟುಂಬಕ್ಕೆ ಪಡಿತರ ಚೀಟಿ ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಮತ್ತು ಆರ್ಥಿಕವಾಗಿ ಬಹಳ ಹಿಂದುಳಿದ ಕುಟುಂಬಗಳನ್ನು ಗುರುತಿಸಿ // ಎನ್ನುವ 3 ಮಾದರಿಯ ಪಡಿತರ ಚೀಟಿಯನ್ನು ಜನರಿಗೆ ನೀಡಲಾಗುತ್ತಿದೆ. ಈ ಪಡಿತರ ವ್ಯವಸ್ಥೆಗೆ ರಾಜ್ಯ ಸರ್ಕಾರದ ಸಹಭಾಗಿತ್ವ ಕೂಡ ಇರುತ್ತದೆ. ಈ ಪಡಿತರ ಚೀಟಿಯ ಆಧಾರದ ಮೇಲೆ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ವಿಶೇಷ ಸವಲತ್ತುಗಳನ್ನು ನೀಡುತ್ತಿವೆ. ಪ್ರತಿ ತಿಂಗಳು ಕುಟುಂಬಗಳಿಗೆ ಉಚಿತ ಮತ್ತು ಕನಿಷ್ಠ ಬೆಲೆಗೆ ತಿಂಗಳ ಬಳಕೆಯ ಆಹಾರ ಧಾನ್ಯಗಳನ್ನು ನೀಡುವುದು ಇದರ ಉದ್ದೇಶವಾಗಿದೆ. ಸದ್ಯ ಕೇಂದ್ರ ಸರ್ಕಾರದಿಂದ ಉಚಿತವಾಗಿ ಅಕ್ಕಿ, ಗೋಧಿ, ರಾಗಿ, ಬೇಳೆ, ಕಡಲೆಕಾಳು ಮುಂತಾದ ಧಾನ್ಯಗಳು ವಿತರಣೆಯಾಗುತ್ತಿವೆ. ʼಒನ್ ನೇಶನ್ ಒಂದೇ ರೇಷನ್ʼ ಯೋಜನೆಯಡಿ ದೇಶದ ಯಾವುದೇಯಲ್ಲಿ ಕುಟುಂಬದ ಪಾಲಿನ ಪಡಿತರ ಪಡೆಯುವ ಅವಕಾಶ ಈಗ ಲಭ್ಯವಿರುತ್ತದೆ. ಇದು ಕೆಲಸದ ನಿಮಿತ್ತ ವಿವಿಧ ಪ್ರದೇಶಕ್ಕೆ ಹೋಗುವ ಜನರಿಗೆ ಅನುಕೂಲ ಆಗುತ್ತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...