: ಇಬ್ಬರ ಜೊತೆಗೆ ʼಲೇಡಿ ಡಾಕ್ಟರ್‌ʼ ರೋಮ್ಯಾನ್ಸ್..!‌ ಪತಿ ಮಾಡಿದ್ದೇನು? : ವೈದ್ಯೆಯೊಬ್ಬರು ಇಬ್ಬರು ಪ್ರೇಮಿಗಳೊಂದಿಗೆ ಹೋಟೆಲ್‌ನಲ್ಲಿ ರೊಮ್ಯಾನ್ಸ್ ಮಾಡುತ್ತಿದ್ದ ವೇಳೆ ಗಂಡನ ಕೈಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾಳೆ. ಇದರಿಂದ ಆಕ್ರೋಶಗೊಂಡ ಪತಿ ಆಕೆ ಮತ್ತು ಆಕೆಯ ಇಬ್ಬರು ಪ್ರೇಮಿಗಳಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನವದೆಹಲಿ:ವೈದ್ಯೆಯೊಬ್ಬಳು ಹೋಟೆಲ್​​ವೊಂದರಲ್ಲಿ ಇಬ್ಬರು ಪ್ರೇಮಿಗಳೊಂದಿಗೆ ರೊಮ್ಯಾನ್ಸ್ ಮಾಡುತ್ತಿದ್ದ ವೇಳೆ ಫಿಲ್ಮಿ ಸ್ಟೈಲ್​​ನಲ್ಲಿ ಆಕೆಯ ಪತಿ ಎಂಟ್ರಿ ಕೊಟ್ಟಿದ್ದಾನೆ. ತನ್ನ ಪತ್ನಿ ಪರಪುರುಷರ ತೆಕ್ಕೆಯಲ್ಲಿದ್ದನ್ನು ಕಂಡು ಪತಿ ಆಘಾತಕ್ಕೊಳಗಾಗಿದ್ದಾನೆ. ಪತ್ನಿ ಸೇರಿದಂತೆ ಆಕೆಯ ಇಬ್ಬರು ಪ್ರೇಮಿಗಳಿಗೂ ಆತ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಪೊಲೀಸರ ಪ್ರಕಾರ, ವೈದ್ಯ ವೃತ್ತಿ ಮಾಡುತ್ತಿದ್ದ ಗಂಡ-ಹೆಂಡತಿಯದಲ್ಲಿ ಬಿರುಕು ಮೂಡಿತ್ತು. ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವೆ ಇದೇ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಹೀಗಾಗಿ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರಂತೆ. ವೈದ್ಯರ ಪತ್ನಿ ಕಾಸ್ಗಂಜ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಅನೇಕ ದಿನಗಳಿಂದ ಪತ್ನಿಯ ಮೇಲೆ ಅನುಮಾನ ಹೊಂದಿದ್ದ ಪತಿ ಈ ಬಗ್ಗೆ ಪೊಲೀಸರಿಗೂ ತಿಳಿಸಿದ್ದನಂತೆ. ಇದನ್ನೂ ಓದಿ: ಪತ್ನಿಯ ಗುಟ್ಟು ರಟ್ಟು ಮಾಡಲು ಆಕೆಯ ಮೇಲೆ ಕಣ್ಣಿಟ್ಟಿದ್ದನಂತೆ. ಅದರಂತೆ ಆಕೆಯ ಚಲವಲನದ ಮೇಲೆ ನಿಗಾ ಇಟ್ಟಿದ್ದ ಪತಿ ಆಕೆ ತೆರಳಿದ್ದ ಹೋಟೆಲ್​​​​ಗೆ ಹೋಗಿದ್ದಾನೆ. ಆಗ ವೈದ್ಯೆ ಇಬ್ಬರು ಪುರುಷರ ಜೊತೆಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾಳೆ. ಹೋಟೆಲ್​​​ಗೆ ವೈದ್ಯೆಯ ಪತಿ ಜೊತೆಗೆ ಆತನ ಕುಟುಂಬಸ್ಥರು ಸಹ ಬಂದಿದ್ದರು. ಈ ವೇಳೆ ಮೂವರಿಗೂ ಎಲ್ಲರೂ ಸೇರಿ ಮನಂಬಂದಂತೆ ಥಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಮಹಿಳೆ ಮತ್ತು ಇಬ್ಬರು ಪ್ರೇಮಿಗಳನ್ನು ಬಂಧಿಸಿದ್ದಾರೆ. ಅಂದಹಾಗೆ 2013ರಲ್ಲಿ ಮದುವೆಯಾದ ಈ ಇಬ್ಬರು ವೈದ್ಯ ದಂಪತಿ ನಡುವೆ ಬಿರುಕು ಉಂಟಾಗಿದೆ. ತನ್ನ ಪತ್ನಿ ಯುವಕರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಅಂತಾ ಪತಿ ಆರೋಪಿಸಿದ್ದ. ಇದೇ ಈ ವಿಚಾರವಾಗಿ ಅವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ ಮನೆಯವರು ಇಬ್ಬರು ಸೇರಿ ಜೀವನ ನಡೆಸುವಂತೆ ಬುದ್ಧೀವಾದ ಹೇಳಿದ್ದರಂತೆ. ಆದರೆ ಯಾರ ಮಾತಿಗೂ ಸೊಪ್ಪು ಹಾಕದ ಲೇಡಿ ಡಾಕ್ಟರ್‌, ತನ್ನ ಪತಿ ಮತ್ತು ಆತ ತಾಯಿ ಮೇಲೆಯೇ ಪೊಲೀಸರಿಗೆ ದೂರು ನೀಡಿದ್ದಳಂತೆ. ಪತಿಯಿಂದ ಬೇರೆಯಾಗಿ ಸುಮಾರು ಎರಡು ವರ್ಷಗಳಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಳಂತೆ. ಆದರೆ ಈ ಇಬ್ಬರಿಗೂಆಗಿರಲಿಲ್ಲ. ಹೆಂಡತಿಯ ವರ್ತನೆಯಿಂದ ಬೇಸತ್ತು ಹೋಗಿದ್ದ ಗಂಡ ಪೊಲೀಸರಿಗೆ ದೂರು ನೀಡಿದ್ದನಂತೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...