: ಬೆಂಗಳೂರಿನ ಬಳಿಕ ಈಗ ತಮಿಳುನಾಡಿನಲ್ಲಿ ನೀರಿನ ಬಿಕ್ಕಟ್ಟು : ಕರ್ನಾಟಕ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ನೀರಿನ ಬಿಕ್ಕಟ್ಟಿನ ಬಳಿಕ ಇದೀಗ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಸಹ ನೀರಿನ ಬಿಕ್ಕಟ್ಟು ತಲೆದೂರಿದೆ. ಅಂತರ್ಜಲ ಮಟ್ಟದಲ್ಲಿ ಭಾರಿ ಕುಸಿತದಿಂದಾಗಿ ರಾಜ್ಯದಲ್ಲಿ ನೀರಿನ ಬಿಕ್ಕಟ್ಟು ಸಂಭವಿಸಿದೆ ಎಂದು ಜಲಸಂಪನ್ಮೂಲ ಇಲಾಖೆಯ (ಡಬ್ಲ್ಯುಆರ್‌ಡಿ) ತಿಳಿಸಿದೆ. :ಕರ್ನಾಟಕದ ರಾಜಧಾನಿ ಬೆಂಗಳೂರಿನ ಬಳಿಕ ಇದೀಗ ತಮಿಳುನಾಡಿನಲ್ಲಿ ನೀರಿನ ಬಿಕ್ಕಟ್ಟು ತಲೆದೂರಿದೆ. ತಮಿಳುನಾಡಿನ ರಾಜಧಾನಿ ಚೆನ್ನೈ ಸೇರಿದಂತೆ ರಾಜ್ಯದ 26 ಜಿಲ್ಲೆಗಳಲ್ಲಿ ನೀರಿನ ಬಿಕ್ಕಟ್ಟಿನ ಸಮಸ್ಯೆ ಕಂಡು ಬಂದಿದೆ ಎಂದು ವರದಿಯಾಗಿದೆ. ತಮಿಳುನಾಡಿನ ಕೆಲವು ಪಶ್ಚಿಮ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿರುವುದರಿಂದ( ) ಸಮಸ್ಯೆ ತಲೆದೂರಿದೆ. ಕಳೆದ ವರ್ಷ ಏಪ್ರಿಲ್‌ಗೆ ಹೋಲಿಸಿದರೆ 26 ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ ( ). ಆದರೆ, ಇತರ 11 ಜಿಲ್ಲೆಗಳಲ್ಲಿ ನೀರಿನ ಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ ಎಂದು ಜಲಸಂಪನ್ಮೂಲ ಇಲಾಖೆಯ (ಡಬ್ಲ್ಯುಆರ್‌ಡಿ) ತಿಳಿಸಿದೆ. ಇದನ್ನೂ ಓದಿ- ತಮಿಳುನಾಡಿನ ಈ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿತ ( ):(ಡಬ್ಲ್ಯುಆರ್‌ಡಿ) ನೀಡಿರುವ ಅಂಕಿ-ಅಂಶಗಳ ಪ್ರಕಾರ, ತಮಿಳುನಾಡಿನ () ಧರ್ಮಪುರಿಯಲ್ಲಿ ಅಂತರ್ಜಲ ಲಭ್ಯವಿರುವ ಸರಾಸರಿ ಆಳವು ಕಳೆದ ಏಪ್ರಿಲ್‌ನಲ್ಲಿ 5.78 ಮೀಟರ್‌ನಿಂದ ಈ ವರ್ಷ 8.98 ಮೀಟರ್‌ಗೆ ಕುಸಿದಿದೆ. ಅದೇ ರೀತಿ ನಾಮಕ್ಕಲ್ ಪ್ರದೇಶದಲ್ಲಿ ನೀರಿನ ಮಟ್ಟ 6.15 ಮೀಟರ್ ನಿಂದ 9.34 ಮೀಟರ್ ಗೆ ಕುಸಿದಿದೆ. ಸೇಲಂ, ಕೃಷ್ಣಗಿರಿ ಮತ್ತು ತಿರುಪ್ಪೂರ್‌ನಂತಹ ಇತರ ಕೆಲವು ಜಿಲ್ಲೆಗಳಲ್ಲಿ ನೀರಿನ ಮಟ್ಟದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ. ತಮಿಳುನಾಡಿನಲ್ಲಿ ನೀರಿನ ಬಿಕ್ಕಟ್ಟು ಪೀಡಿತ ಜಿಲ್ಲೆಗಳು ( : ):ಧರ್ಮಪುರಿ, ನಾಮಕ್ಕಲ್ ಹೊರತುಪಡಿಸಿ ಕೊಯಮತ್ತೂರು ಅತಿ ಹೆಚ್ಚು ಹಾನಿಗೊಳಗಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಮಟ್ಟ 9.4 ಮೀಟರ್‌ನಿಂದ 10.85 ಮೀಟರ್‌ಗೆ ಕುಸಿದಿದೆ. ಚೆನ್ನೈ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟದಲ್ಲಿ 0.5 ಮೀಟರ್ ಕುಸಿತಕ್ಕೆ ಸಾಕ್ಷಿಯಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ- ತಮಿಳುನಾಡು ವಿವಸಾಯಿಗಲ್ ಮುನ್ನೇತ್ರ ಕಳಗಂ ಪ್ರಧಾನ ಕಾರ್ಯದರ್ಶಿ ಕೆ ಬಾಲಸುಬ್ರಮಣಿ, ನೀರಿನ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಶೇಂಗಾ, ತೆಂಗು ಮತ್ತು ಇತರ ವಾಣಿಜ್ಯ ಬೆಳೆಗಳನ್ನು ಸಾಮಾನ್ಯವಾಗಿ ವರ್ಷವಿಡೀ ಬೆಳೆಯುವ ಪಶ್ಚಿಮ ಭಾಗದ ರೈತರ ಮೇಲೆ ನೀರಿನ ಬಿಕ್ಕಟ್ಟು ಹೆಚ್ಚು ಪರಿಣಾಮ ಬೀರಿದೆ. ನೀರಿನ ಕೊರತೆಯಿಂದಾಗಿ ರೈತರು ಬೆಳೆ ಬಿತ್ತನೆಯನ್ನೇ ಮಾಡಿಲ್ಲ. ಮೆಟ್ಟೂರು ಅಣೆಕಟ್ಟೆಯಲ್ಲಿ ನೀರಿಲ್ಲದೆ ಡ್ಯಾಮ್ ಸಂಪೂರ್ಣವಾಗಿ ಬಟ್ಟಿಹೋಗಿದೆ ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...