ಮದ್ಯ ಪ್ರಿಯರಿಗೆ ಬಿಗ್ ಶಾಕ್..! ಎಲ್ಲಾ ರೀತಿಯ ಬ್ರಾಂಡ್‌ಗಳ ದರದಲ್ಲಿ ಭಾರೀ ಏರಿಕೆ : ಮಧ್ಯ ಪ್ರಿಯರಿಗೆ ಇದೋಂದು ಶಾಕಿಂಗ್‌ ಸುದ್ದಿ, ಈ ಸುದ್ದಿಯನ್ನು ಕೇಳಿದ್ರೆ ನಿಮ್ಮ ಕಿಕ್‌ ಇಳಿದು ಹೋಗುತ್ತದೆ. ಸರ್ಕಾರ ಎಲ್ಲಾ ಬ್ರ್ಯಾಂಡ್‌ನ ಮದ್ಯದ ಮೇಲಿನ ದರವನ್ನು ಹೆಚ್ಚಿಸಲು ನಿರ್ಧರಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.. :ಮಧ್ಯ ವ್ಯಸನಿಗಳಿಗೆ ಬಿಗ್‌ ಶಾಕಿಂಗ್‌ ನ್ಯೂಸ್‌ ಹೊರ ಬಿದ್ದಿದೆ. ಎಲ್ಲಾ ಬ್ರಾಂಡ್‌ನ ಮದ್ಯದ ಬೆಲೆ ಏರಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಮದ್ಯ ವ್ಯಸನಿಗಳು ಶಾಕ್‌ಗೆ ಗುರಿಯಾಗಿದ್ದಾರೆ.. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.. ಮಾದಕ ವ್ಯಸನಿಗಳಿಗೆ ಇದೊಂದು ಕಿಕ್ ಇಳಿಸುವ ಸುದ್ದಿ. ಎರಡು ವರ್ಷಕ್ಕೊಮ್ಮೆ ಮದ್ಯದ ಬೆಲೆ ಏರಿಕೆಯಾಗುವುದು ಸಾಮಾನ್ಯ. ಹಿಂದೆ, ಬಿಆರ್‌ಎಸ್ ಸರ್ಕಾರದ ಆಡಳಿತದಲ್ಲಿ ಅಂದ್ರೆ 2022 ರಲ್ಲಿ ತೆಲಂಗಾಣದಲ್ಲಿ ಮದ್ಯದ ಬೆಲೆಯನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಇತ್ತೀಚೆಗಷ್ಟೇ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು, ಇದೀಗ ಮದ್ಯದ ಬೆಲೆ ಹೆಚ್ಚಿಸಲು ಸರ್ಕಾರ ಸಿದ್ಧತೆ ನಡೆಸಿದೆಯಂತೆ. ಇದನ್ನೂ ಓದಿ: ತೆಲಂಗಾಣದಲ್ಲಿ ಸರ್ಕಾರ ಈಗಾಗಲೇ ಜಾರಿಗೊಳಿಸಿರುವ ಯೋಜನೆಗಳಿಗೆ ಸ್ವಲ್ಪ ಹೆಚ್ಚುವರಿ ಆದಾಯದ ಅಗತ್ಯವಿದೆ. ಈ ಕ್ರಮದಲ್ಲಿ ಪ್ರಸ್ತುತ ಮದ್ಯದ ಬೆಲೆಯನ್ನು ಹೆಚ್ಚಿಸಿದರೆ ಹೆಚ್ಚುವರಿ ಆದಾಯ ಬರಲಿದೆಯಂತೆ. ಹೀಗಾಗಿ ಎಲ್ಲ ಬಗೆಯ ಮದ್ಯದ ಬ್ರ್ಯಾಂಡ್ ಗಳ ಮೇಲೆ ಶೇ.20-25ರಷ್ಟು ಬೆಲೆ ಏರಿಕೆ ಮಾಡಲು ಸರ್ಕಾರ ಸಿದ್ಧವಾಗಿರುವಂತಿದೆ. ಹೆಚ್ಚಿನ ಸರ್ಕಾರಗಳು ಮದ್ಯವನ್ನು ಆದಾಯದ ಮೂಲವೆಂದು ಪರಿಗಣಿಸುತ್ತವೆ. ಅದಕ್ಕಾಗಿ, ಕಾಲಕಾಲಕ್ಕೆ ಹೊಸ ಬ್ರಾಂಡ್‌ಗಳು ಮತ್ತು ಮದ್ಯಗಳ ದರವನ್ನು ಹೆಚ್ಚಿಸುವ ಮೂಲಕ ತಮ್ಮ ಬೊಕ್ಕಸದ ಆದಾಯವನ್ನು ಹೆಚ್ಚಿಸುತ್ತಿವೆ. ಮದ್ಯಪಾನ ಮಾಡುವವರಲ್ಲಿ ಹೆಚ್ಚಿನವರು ಮಧ್ಯಮ ಮಟ್ಟದ ಬ್ರ್ಯಾಂಡ್‌ಗಳನ್ನು ಕುಡಿಯುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...