: ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಸೋಂಕಿನ ವಿರುದ್ಧ ಹೋರಾಡುವ ರಕ್ತದ ಘಟಕವನ್ನು ಹೆಸರಿಸಿ? ಉತ್ತರ: (ಬಿಳಿ ರಕ್ತ ಕಣಗಳು) ಪ್ರಶ್ನೆ 2:ಚೌರಿಚೌರಾ ಗ್ರಾಮವು ಭಾರತದ ಯಾವ ರಾಜ್ಯದಲ್ಲಿದೆ? ಉತ್ತರ: ಉತ್ತರ ಪ್ರದೇಶ ಪ್ರಶ್ನೆ 3:ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ () ಪ್ರಧಾನ ಕಛೇರಿ ಎಲ್ಲಿದೆ? ಉತ್ತರ: ನೈರೋಬಿ, ಕೀನ್ಯಾ ಪ್ರಶ್ನೆ 4:ಕ್ರಾಂತಿಕಾರಿ ಭಗತ್ ಸಿಂಗ್ ಅವರನ್ನು ಯಾವಾಗ ಗಲ್ಲಿಗೇರಿಸಲಾಯಿತು? ಉತ್ತರ: 23 ಮಾರ್ಚ್ 1931 ಪ್ರಶ್ನೆ 5:ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಯಾರು? ಉತ್ತರ: ಚಂದ್ರಗುಪ್ತ ಮೌರ್ಯ ಇದನ್ನೂ ಓದಿ: ಪ್ರಶ್ನೆ 6:ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ ()ಅನ್ನು ಯಾವಾಗ ಸ್ಥಾಪಿಸಲಾಯಿತು? ಉತ್ತರ: 5 ಜೂನ್ 1972 ಪ್ರಶ್ನೆ 7:ವಿಶ್ವಪ್ರಸಿದ್ಧ ನಳಂದ ವಿಶ್ವವಿದ್ಯಾಲಯವನ್ನು ಯಾರು ನಾಶಪಡಿಸಿದರು? ಉತ್ತರ: 1193ರಲ್ಲಿ ಭಕ್ತಿಯಾರ್ ಖಿಲ್ಜಿ ನಾಶಪಡಿಸಿದ ಪ್ರಶ್ನೆ 8:ಹೆಮಿಸ್ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ? ಉತ್ತರ: ಜಮ್ಮು ಮತ್ತು ಕಾಶ್ಮೀರ ಪ್ರಶ್ನೆ 9:ಅರುಂಧತಿ ರಾಯ್ ಯಾವ ವರ್ಷದಲ್ಲಿ ಬೂಕರ್ ಪ್ರಶಸ್ತಿಯನ್ನು ಗೆದ್ದರು? ಉತ್ತರ: 1997ರಲ್ಲಿ "ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್" ಕಾದಂಬರಿಗೆ ಬೂಕರ್‌ ಪ್ರಶಸ್ತಿ ಪಡೆದುಕೊಂಡರು ಪ್ರಶ್ನೆ10:ವಿದ್ಯುತ್ ಬಲ್ಬ್‌ನಲ್ಲಿ ಯಾವ ಅನಿಲ ತುಂಬಿರುತ್ತದೆ? ಉತ್ತರ: ನೈಟ್ರೋಜನ್ ಅನಿಲ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...