3: ಇಂದು ಮೂರನೇ ಹಂತದ ಮತದಾನ ಯಾವ ರಾಜ್ಯದ ಯಾವ ಕ್ಷೇತ್ರಗಳಲ್ಲಿ ವೋಟಿಂಗ್ 3: ಮೇ 07, 2024ರಂದು ದೇಶಾದ್ಯಂತ ಲೋಕಸಭಾ ಚುನಾವಣೆಗೆ ಮೂರನೇ ಹಂತದ ಮತದಾನ ನಡೆಯುತ್ತಿದೆ. ಇಂದು ಯಾವೆಲ್ಲಾ ರಾಜ್ಯಗಳಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ ಎಂದು ತಿಳಿಯಿರಿ. 2024 3:ಲೋಕಸಭೆ ಚುನಾವಣೆ 2024ಕ್ಕಾಗಿ ಇಂದು ದೇಶಾದ್ಯಂತ ಮೂರನೇ ಹಂತದ ಮತದಾನ ನಡೆಯುತ್ತಿದೆ. ಮೇ 07, 2024ರ ಮಂಗಳವಾರದ ದಿನ ಕರ್ನಾಟಕ ಸೇರಿದಂತೆ ದೇಶದ 12 ರಾಜ್ಯಗಳಲ್ಲಿ 93 ಲೋಕಸಭಾ ಕ್ಷೇತ್ರಗಳಲ್ಲಿ ( ) ಮತದಾನ ನಡೆಯುತ್ತಿದೆ. ಮೂರನೇ ಹಂತದ ಮತದಾನ ( )ದಲ್ಲಿ 1,351 ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ. ( ) ನಿಗದಿತ ವೇಳಾಪಟ್ಟಿಯ ಪ್ರಕಾರ, ಇಂದು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 94 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಬೇಕಿತ್ತು. ಆದರೆ, ಬಿಜೆಪಿ ಈಗಾಗಲೇ ಗುಜರಾತ್‌ನ ಸೂರತ್ ಸ್ಥಾನವನ್ನು ಅವಿರೋಧವಾಗಿ ಗೆದ್ದಿರುವುದರಿಂದ ಈಗ 93 ಸ್ಥಾನಗಳಲ್ಲಿ ಮಾತ್ರ ಮತದಾನ ನಡೆಯುತ್ತಿದೆ. ಇದಲ್ಲದೆ, ಮೂರನೇ ಹಂತದಲ್ಲಿ ಮತದಾನ ನಡೆಯಬೇಕಿದ್ದ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಾಜೌರಿ ಕ್ಷೇತ್ರಗಳಲ್ಲಿ ಮತದಾನವನ್ನು ಮೇ 25ಕ್ಕೆ ಮುಂದೂಡಲಾಗಿದೆ. ಎರಡನೇ ಹಂತದಲ್ಲಿ ಮತದಾನ ನಡೆಯಬೇಕಿದ್ದ ಈ ಕ್ಷೇತ್ರದಲ್ಲಿ ಇಂದು ಮತದಾನ:ಇನ್ನೂ ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಬೇಕಿದ್ದ ಮಧ್ಯಪ್ರದೇಶದ ಬೇತುಲ್ ಕ್ಷೇತ್ರದಲ್ಲಿ ಇಂದುನಡೆಯುತ್ತಿವೆ. ವಾಸ್ತವವಾಗಿ, ಈ ಕ್ಷೇತ್ರದಲ್ಲಿ ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಯ ಮರಣದಿಂದಾಗಿ ಮತದಾನವನ್ನು ಮುಂದೂಡಲಾಗಿತ್ತು. ಇದನ್ನೂ ಓದಿ- ಮೂರನೇ ಹಂತದಲ್ಲಿ ಯಾವ ರಾಜ್ಯದ ಎಷ್ಟು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ:ಲೋಕಸಭೆ ಚುನಾವಣೆ 2024 ರ ಮೂರನೇ ಹಂತದ ಚುನಾವಣೆಯಲ್ಲಿ ಕರ್ನಾಟಕದ ( ) 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ರಾಜ್ಯವಾರು ಕ್ಷೇತ್ರಗಳ ಸಂಪೂರ್ಣ ಪಟ್ಟಿಯನ್ನು ನೋಡುವುದಾದರೆ... * ಕರ್ನಾಟಕದ (14 ಸ್ಥಾನಗಳು) * ಅಸ್ಸಾಂ (4 ಸ್ಥಾನಗಳು) * ಬಿಹಾರ (5 ಸ್ಥಾನಗಳು) * ಛತ್ತೀಸ್‌ಗಢ (7 ಸ್ಥಾನಗಳು) * ದಾದ್ರಾ -ನಗರ ಹವೇಲಿ ಮತ್ತು ದಮನ್ - ದಿಯು (2 ಸ್ಥಾನಗಳು) * ಗೋವಾ (2 ಸ್ಥಾನಗಳು) ಇದನ್ನೂ ಓದಿ- * ಗುಜರಾತ್ (25 ಸ್ಥಾನಗಳು) * ಮಧ್ಯಪ್ರದೇಶ (9 ಸ್ಥಾನಗಳು) * ಮಹಾರಾಷ್ಟ್ರ (11 ಸ್ಥಾನಗಳು) * ಉತ್ತರ ಪ್ರದೇಶ (10 ಸ್ಥಾನಗಳು) * ಪಶ್ಚಿಮ ಬಂಗಾಳ (4 ಸ್ಥಾನಗಳು) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...