2000 : ನಾಲ್ಕು ಕಂಟೈನರ್ ಗಳಲ್ಲಿ ಕಂತೆ ಕಂತೆ ನೋಟಿನ ಕಟ್ಟುಗಳು.. ಒಂದೆರಡಲ್ಲ 2000 ಸಾವಿರ ಕೋಟಿ ಹಣ ಪತ್ತೆ ! 2024: ಇದೀಗ ಇಲ್ಲೊಂದು ಕಡೆ ಪೊಲೀಸರಿಗೆ ಅನುಮಾನ ಚೆಕ್‌ ಮಾಡಿದಾಗ ಬೆಚ್ಚಿ ಬಿದ್ದಿದ್ದಾರೆ. ನಾಲ್ಕು ಕಂಟೈನರ್ ಗಳಲ್ಲಿ ನೋಟಿನ ಕಟ್ಟುಗಳ ರಾಶಿ ಕಂಡು ಬೆರಗಾಗಿದ್ದಾರೆ. 2024:ಲೋಕಸಭೆ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದೆ. ಅದರಲ್ಲೂ ಚುನಾವಣಾ ಸಂದರ್ಭದಲ್ಲಿ ಪೊಲೀಸರು ನಿರಂತರ ತಪಾಸಣೆ ನಡೆಸುತ್ತಾರೆ. ವಿಶೇಷವಾಗಿ ರಸ್ತೆ ಮತ್ತು ಹೆದ್ದಾರಿಗಳಲ್ಲಿ ಯಾವುದೇ ಅನುಮಾನಾಸ್ಪದ ವಾಹನಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿರುತ್ತಾರೆ. ಅಲ್ಲದೆ, ಅಪಾರ ಪ್ರಮಾಣದ ನಗದು ಪತ್ತೆಯಾದರೆ, ಸೂಕ್ತ ದಾಖಲೆಗಳಿಗಾಗಿ ಪೊಲೀಸರು ವಿಚಾರಣೆ ನಡೆಸುತ್ತಾರೆ. ಸಿಕ್ಕ ಹಣಕ್ಕೆ ಸರಿಯಾಗಿ ದಾಖಲೆ ನೀಡದಿದ್ದರೆ ಪೊಲೀಸರು ಹಣ ವಶಪಡಿಸಿಕೊಳ್ಳುತ್ತಾರೆ. ಇದನ್ನೂ ಓದಿ: ಇದೀಗ ಇಲ್ಲೊಂದು ಕಡೆ ಪೊಲೀಸರಿಗೆ ಅನುಮಾನ ಚೆಕ್‌ ಮಾಡಿದಾಗ ಬೆಚ್ಚಿ ಬಿದ್ದಿದ್ದಾರೆ. ನಾಲ್ಕು ಕಂಟೈನರ್ ಗಳಲ್ಲಿ ನೋಟಿನ ಕಟ್ಟುಗಳ ರಾಶಿ ಕಂಡು ಬೆರಗಾಗಿದ್ದಾರೆ. ಸುಮಾರು 2000 ಸಾವಿರ ಕೋಟಿ ಹಣ ಸಿಕ್ಕಿದೆ ಎನ್ನಲಾಗಿದೆ. ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಠೇವಣಿ ಇಡಲು ಕೇರಳದ ಕೊಚ್ಚಿಯಿಂದ ಹೈದರಾಬಾದ್ ಗೆ ನಾಲ್ಕು ಕಂಟೈನರ್ ಗಳು ಹಣ ತುಂಬಿಕೊಂಡು ಹೋಗುತ್ತಿದ್ದವು ಎಂದು ತಿಳಿದುಬಂದಿದೆ. ಇದರಿಂದ ಪೊಲೀಸರು ಹಾಗೂ ಉನ್ನತಾಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಮೊದಲಿಗೆ ಇದು ರಾಜಕಾರಣಿಗಳ ಹಣವೋ, ಯಾರದೋ ಕಪ್ಪುಹಣವೋ ಎಂದು ಹಲವು ರೀತಿಯಲ್ಲಿ ಶಂಕಿಸಲಾಗಿತ್ತು. ಕೊನೆಗೆ ಬ್ಯಾಂಕ್ ಗೆ ಹಣ ಜಮಾ ಮಾಡಬೇಕಾಗಿದ್ದ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿ ವಾಹನಗಳನ್ನು ಕಳುಹಿಸಿದ್ದಾರೆ. ಆಂಧ್ರ ಪ್ರದೇಶದ ಅನಂತಪುರ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...