ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದ ಮಮತಾ ಬ್ಯಾನರ್ಜಿಗೆ ಗಾಯ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ದುರ್ಗಾಪುರದಲ್ಲಿ ಹೆಲಿಕಾಪ್ಟರ್‌ ಹತ್ತುವಾಗ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆ. : ಶನಿವಾರ ದುರ್ಗಾಪುರದಲ್ಲಿ ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದು ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಗಾಯಗೊಂಡಿದ್ದಾರೆ. ಇದನ್ನು ಓದಿ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೆಲಿಕಾಪ್ಟರ್‌ನ ಮುಂದೆ ಇರಿಸಿದ್ದ ಮೆಟ್ಟಿಲು ಮೇಲಿಂದ ಹತ್ತಿ, ಅದರೊಳಗೆ ಕುಳಿತುಕೊಳ್ಳಲು ಹೊರಟಾಗ ಈ ಘಟನೆ ನಡೆದಿದೆ. ಟೆಕ್ಆಫ್ ಆಗಲು ಕಾಯುತ್ತಿದ್ದ ಹೆಲಿಕಾಪ್ಟರ್ ಮಮತಾ ಬ್ಯಾನರ್ಜಿ ಹತ್ತಿದ್ದ ಮೇಲೆ ಹೊರಡಲಿತ್ತು. ಆದರೆ ಇದೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. | , . . . — (@) ಈ ಘಟನೆ ನಡೆದ ತಕ್ಷಣವೇ ಅಲ್ಲಿದ್ದ ಭಧ್ರತಾ ಸಿಬ್ಬಂದಿ ಅವರಿಗೆ ಸಹಾಯ ಮಾಡಿದರು. ಆದರೆ ಮಮತಾ ಬ್ಯಾನರ್ಜಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆದರೆ ಅವರು ತಮ್ಮ ನಿಗದಿಯಾಗಿದ್ದ ಪ್ರವಾಸವನ್ನು ಮುಂದುವರೆಸಿದರು. ಇದನ್ನು ಓದಿ : ಇದಕ್ಕೂ ಮುಂಚೆ ಮಮತಾ ಬ್ಯಾನರ್ಜಿ ಕಳೆದ ವರ್ಷ ಮೇ ತಿಂಗಳಲ್ಲಿ ಕೋಲ್ಕತ್ತಾದ ತಮ್ಮ ಮನೆಯ ಸಮೀಪದಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಹಣೆಯ ಮೇಲೆ ಆಳವಾದ ಕಟ್‌ನಿಂದ ಆಕೆಯ ಮುಖದ ಕೆಳಗೆ ರಕ್ತ ಹರಿಯುತ್ತಿರುವುದನ್ನು ದೃಶ್ಯಗಳು ತೋರಿಸಿದ್ದರು ಮತ್ತು ಆಕೆಯನ್ನು ಸರ್ಕಾರಿ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಮತ್ತೆ ಹೆಲಿಕಾಪ್ಟರ್ ಹತ್ತಿ ಆಸನದಲ್ಲಿ ಕುಳಿತುಕೊಳ್ಳುವಾಗ ಮಮತಾ ಬ್ಯಾನರ್ಜಿ ಕಾಲು ಜಾರಿ ಬಿದ್ದಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...