ಕೈ ಇಲ್ಲದೇ ಕಾರು ಓಡಿಸ್ತಾರಂತೆ ಈ ಮಹಿಳೆ , ಏಷ್ಯಾದ ಮೊದಲ ಮಹಿಳೆ ಎಂಬ ದಾಖಲೆ : ಎರಡು ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸ್ತಾರಂತೆ ಈ ಮಹಿಳೆ, ಯಾರವರು ಗೊತ್ತಾ ? ಅವರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. :ಕೇರಳದ 32 ವರ್ಷದ ಮಹಿಳೆಯು ಎರಡು ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ ಚಾಲನಾ ಪರವಾನಗಿ ಪಡೆದ ಮೊದಲ ಏಷ್ಯಾದ ಮಹಿಳೆ. ಜಿಲುಮೋಲ್ ಎನ್ನುವ ಮಹಿಳೆ ಚತುರವಾಗಿ ತನ್ನ ಪಾದಗಳನ್ನು ಬಳಸುವ ಮೂಲಕ ಕಾರ್ ಅನ್ನು ಓಡಿಸುತ್ತಾರೆ. ಆರು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಅವರು ಅಂತಿಮವಾಗಿ 2023 ರಲ್ಲಿ ತಮ್ಮ ಪರವಾನಗಿಯನ್ನು ಪಡೆದರು, ಇದನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪಾಲಕ್ಕಾಡ್‌ನಲ್ಲಿ ವೈಯಕ್ತಿಕವಾಗಿ ನೀಡಿದರು. ಇದನ್ನು ಓದಿ : ದೈಹಿಕವಾಗಿ ಸಧೃಡವಾಗಿದ್ದರೂ ಕೆಲವರಿಗೆ ಡ್ರೈವಿಂಗ್ ಅಂದ್ರೆ ಭಯ ಇರುತ್ತದೆ. ಆದರೆ ಕೇರಳ ಮೂಲದ ಮಹಿಳೆ ಎರಡು ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ, ಚಾಲನಾ ಪರವಾನಗಿ ಪಡೆದುಕೊಳ್ಳುವ ಮೂಲಕ ಸ್ಫೂರ್ತಿಯಾಗಿದ್ದಾರೆ. ಈ ಮೂಲಕ ಕೈ ಇಲ್ಲದೇ ಕಾರು ಓಡಿಸುವ ಏಷ್ಯಾದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ವಡುತಲದ ಮರಿಯಾ ಡ್ರೈವಿಂಗ್ ಸ್ಕೂಲ್‌ನಲ್ಲಿ ಡ್ರೈವಿಂಗ್ ಕಲಿತು, ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇಡುಕ್ಕಿ ಜಿಲ್ಲೆಯ ತೊಡುಪುಳ ಆರ್‌ಟಿಒ ಅವರನ್ನು ಸಂಪರ್ಕಿಸಿದಳು. ಆರ್‌ಟಿಒ ಅಧಿಕಾರಿಗಳು ಆಕೆಯ ಅರ್ಜಿಯನ್ನು ತಿರಸ್ಕರಿಸಿದರು, ನಂತರ ಆಕೆ ದೃಢವಾಗಿ ಕೇರಳ ಹೈಕೋರ್ಟ್‌ಗೆ ಮೊರೆ ಹೋಗಿದ್ದಳು. ಆಯೋಗದ ಮೊರೆ ಹೋದ ಜಿಲುಮೋಲ್ ಲೈಸೆನ್ಸ್ ಪಡೆಯುವಲ್ಲಿ ಸಕ್ಸಸ್ ಆಗಿದ್ದಾರೆ. ಈ ಮೂಲಕ ಕೈಗಳಿಲ್ಲದಿದ್ದರೂ ಚಾಲನಾ ಪರವಾನಗಿ ಪಡೆದ ಏಷ್ಯಾದ ಮೊದಲ ಮಹಿಳೆ ಎನ್ನುವ ದಾಖಲೆ ಬರೆದಿದ್ದಾರೆ. ಇದನ್ನು ಓದಿ : "ಚಲನಶೀಲತೆ ನನ್ನ ದೊಡ್ಡ ನ್ಯೂನತೆಯಾಗಿದೆ ಮತ್ತು ಈಗ ನಾನು ಪರವಾನಗಿ ಪಡೆದಿದ್ದೇನೆ ಮತ್ತು ನನ್ನ ದೊಡ್ಡ ಅಡಚಣೆಯನ್ನು ನಿವಾರಿಸಿದ್ದೇನೆ ಎಂದು ಥಾಮಸ್ ಮಾತನಾಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...