: ನೂಡಲ್ಸ್ ಪಾಕೆಟ್ಗಳಲ್ಲಿ 6 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನ, ವಜ್ರಗಳು ಪತ್ತೆ! : ಮುಂಬೈನಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಭಾರತೀಯ ಪ್ರಯಾಣಿಕನ ಟ್ರಾಲಿ ಬ್ಯಾಗ್‌ನಲ್ಲಿ ನೂಡಲ್ಸ್ ಪಾಕೆಟ್‌ಗಳಲ್ಲಿ ಈ ಬೆಲೆಬಾಳುವ ವಸ್ತುಗಳು ಪತ್ತೆಯಾಗಿದೆ. ಮುಂಬೈ:ನೂಡಲ್ಸ್​ ಪಾಕೆಟ್​​ಗಳಲ್ಲಿ 6 ಕೋಟಿಗೂ ಅಧಿಕ ಮೌಲ್ಯದ ಚಿನ್ನ, ವಜ್ರಗಳು ಪತ್ತೆಯಾಗಿವೆ. ವಾಣಿಜ್ಯ ನಗರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಮಂಗಳವಾರ (ಏಪ್ರಿಲ್​ 23) ಈ ಘಟನೆ ನಡೆದಿದೆ. ಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರೊಬ್ಬರ ಬ್ಯಾಗ್ ಪರಿಶೀಲಿಸಿದ್ದಾರೆ. ಅದರಲ್ಲಿ ನೂಡಲ್ಸ್ ಪ್ಯಾಕೆಟ್​ಗಳು ಪತ್ತೆಯಾಗಿವೆ. ನೂಡಲ್ಸ್​ ಪಾಕೆಟ್‌ಗಳನ್ನು ತೆರೆದು ನೋಡಿದ ಅಧಿಕಾರಿಗಳಿಗೆ ಶಾಕ್‌ ಆಗಿದೆ. ಯಾಕೆಂದರೆ ನೂಡಲ್ಸ್​ ಪಾಕೆಟ್​ನಲ್ಲಿ ಕೋಟಿಗಟ್ಟಲೇ ಮೌಲ್ಯದ ಚಿನ್ನ, ವಜ್ರಗಳು ಪತ್ತೆಯಾಗಿದೆ. ಇದನ್ನೂ ಓದಿ: 4.44 ಕೋಟಿ ಮೌಲ್ಯದ 6.8 ಕೆಜಿ ಚಿನ್ನ ಮತ್ತು 2.02 ಕೋಟಿ ರೂ. ಮೌಲ್ಯದ ವಜ್ರಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮುಂಬೈನಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಭಾರತೀಯ ಪ್ರಯಾಣಿಕನ ಟ್ರಾಲಿ ಬ್ಯಾಗ್‌ನಲ್ಲಿ ನೂಡಲ್ಸ್ ಪಾಕೆಟ್‌ಗಳಲ್ಲಿ ಈ ಬೆಲೆಬಾಳುವ ವಸ್ತುಗಳು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆಪ್ರಯಾಣಿಕನನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಅದೇ ರೀತಿ ಶ್ರೀಲಂಕಾದ ಕೊಲಂಬೊದಿಂದ ಮುಂಬೈಗೆ ಬಂದಿದ್ದ ಮಹಿಳೆಯೊಬ್ಬರು ಚಿನ್ನವನ್ನು ತುಂಡು ಮಾಡಿ ಬಟ್ಟೆಯಲ್ಲಿ ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದದ್ದು ಪತ್ತೆಯಾಗಿದೆ. ಆಕೆಯನ್ನೂ ಸಹ ಕಸ್ಟಮ್ಸ್​ ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...