4 ವರ್ಷದ ಪದವಿ, 75% ಅಂಕಗಳನ್ನು ಹೊಂದಿರುವ ವಿದ್ಯಾರ್ಥಿಗಳು ನೇರವಾಗಿ ಪಿಎಚ್‌ಡಿ : ಯುಜಿಸಿ : ನಾಲ್ಕು ವರ್ಷಗಳ ಪದವಿಪೂರ್ವ ಪದವಿ ಹೊಂದಿರುವ ವಿದ್ಯಾರ್ಥಿಗಳು ಈಗ ನೇರವಾಗಿ ನೆಟ್‌ಗೆ ಹಾಜರಾಗಬಹುದು ಮತ್ತು ಪಿಎಚ್‌ಡಿ ಮಾಡಬಹುದು ಎಂದು ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಜಗದೇಶ್ ಕುಮಾರ್ ಹೇಳಿದರು. ನಾಲ್ಕು ವರ್ಷಗಳ ಪದವಿಪೂರ್ವ ಪದವಿ ಹೊಂದಿರುವ ವಿದ್ಯಾರ್ಥಿಗಳು ಈಗ ನೇರವಾಗಿ ನೆಟ್‌ಗೆ ಹಾಜರಾಗಬಹುದು ಮತ್ತು ಪಿಎಚ್‌ಡಿ ವ್ಯಾಸಂಗ ಮಾಡಬಹುದು ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಜಗದೇಶ್ ಕುಮಾರ್ ಹೇಳಿದ್ದಾರೆ. ಇದನ್ನು ಓದಿ : ಜೂನಿಯರ್ ರಿಸರ್ಚ್ ಫೆಲೋಶಿಪ್ ಜೊತೆಗೆ ಅಥವಾ ಇಲ್ಲದೆಯೇ ಪಿಎಚ್‌ಡಿ ಮಾಡಲು, ಅಭ್ಯರ್ಥಿಗಳು ತಮ್ಮ ನಾಲ್ಕು ವರ್ಷಗಳ ಪದವಿಪೂರ್ವ ಕೋರ್ಸ್‌ನಲ್ಲಿ ಕನಿಷ್ಠ 75 ಶೇಕಡಾ ಅಂಕಗಳು ಅಥವಾ ಸಮಾನ ಶ್ರೇಣಿಗಳನ್ನು ಹೊಂದಿರಬೇಕು. ಇಲ್ಲಿಯವರೆಗೆ, ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ ಅಭ್ಯರ್ಥಿಗೆ ಕನಿಷ್ಠ 55 ಶೇಕಡಾ ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಅಗತ್ಯವಿತ್ತು ಆದರೆ ಇದೀಗ ಯುಜಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ನಾಲ್ಕು ವರ್ಷಗಳ ಪದವಿಪೂರ್ವ ಪದವಿ ಹೊಂದಿರುವ ವಿದ್ಯಾರ್ಥಿಗಳು ಈಗ ನೇರವಾಗಿ ನೆಟ್‌ಗೆ ಹಾಜರಾಗಬಹುದು ಮತ್ತು ಪಿಎಚ್‌ಡಿ ಮಾಡಬಹುದು ಎಂದು ತಿಳಿಸಿದೆ. “ನಾಲ್ಕು ವರ್ಷಗಳ ಪದವಿಪೂರ್ವ ಪದವಿ ಹೊಂದಿರುವ ಅಭ್ಯರ್ಥಿಗಳು ಈಗ ನೇರವಾಗಿ ಪಿಎಚ್‌ಡಿ ಮಾಡಬಹುದು ಮತ್ತು ನೆಟ್‌ಗೆ ಬರೆಯಬಹುದಾಗಿದೆ. ಅಂತಹ ಅಭ್ಯರ್ಥಿಗಳು ಅವರು ನಾಲ್ಕು ವರ್ಷಗಳ ಸ್ನಾತಕೋತ್ತರ ಪದವಿಯನ್ನು ಪಡೆಯದೇ ಪಿಎಚ್‌ಡಿ ಮಾಡಲು ಬಯಸುವ ವಿಷಯದಲ್ಲಿ ಪರೀಕ್ಷೆ ಬರೆಯಬಹುದಾಗಿದೆ ಮತ್ತು ಈ ವರ್ಷ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಬದಲಿಗೆ ಆಫ್‌ಲೈನ್ ಮೋಡ್‌ನಲ್ಲಿ ನಡೆಸಲಾಗುತ್ತದೆ. ಜೂನ್ 16 ರಂದು ಎಲ್ಲಾ ವಿಷಯಗಳಿಗೆ ಪರೀಕ್ಷೆಗಳನ್ನು ನಡೆಸಲಾಗುವುದು. ಇದನ್ನು ಓದಿ : ಯುಜಿಸಿಯ ನಿರ್ಧಾರದ ಪ್ರಕಾರ ಎಸ್‌ಸಿ, ಎಸ್‌ಟಿ, ಒಬಿಸಿ, ವಿಕಲಚೇತನರು, ಆರ್ಥಿಕವಾಗಿ ದುರ್ಬಲ ವರ್ಗಗಳು ಮತ್ತು ಇತರ ವರ್ಗದ ಅಭ್ಯರ್ಥಿಗಳಿಗೆ ಐದು ಶೇಕಡಾ ಅಂಕಗಳ ಸಡಿಲಿಕೆ ಅಥವಾ ಅದರ ಸಮಾನ ಶ್ರೇಣಿಯನ್ನು ಅನುಮತಿಸಬಹುದು ಎಂದು ತಿಳಿಸಿದರು. ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶನಿವಾರ ಆರಂಭಗೊಂಡಿದ್ದು, ಮೇ 10ಕ್ಕೆ ಮುಕ್ತಾಯವಾಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...