: ಚುನಾವಣಾ ಪ್ರಚಾರದಲ್ಲಿ ಶಾರುಖ್ ಖಾನ್! ಯಾವ ಪಕ್ಷದ ಪರ ಇವರ ನಡೆ ? : ಮಹಾರಾಷ್ಟ್ರದ ಸೋಲಾಪುರದಲ್ಲಿ ಚುನಾವಣಾ ಪ್ರಚಾರದಲ್ಲಿ ಶಾರುಖ್ ಖಾನ್ ಅವರು ತೊಡಗಿದ್ದು, ಯಾವ ಪಕ್ಷದ ಪರ ಶಾರುಖ್ ಖಾನ್ ಪ್ರಚಾರ ಮಾಡಿದ್ದಾರೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ ತಿಳಿಯಿರಿ. :ಮಹಾರಾಷ್ಟ್ರದ ಸೊಲ್ಲಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಶಾರುಖ್ ಖಾನ್ ಭಾಗಿಯಾಗಿದ್ದರೂ ಎನ್ನುವದು ಕೇಳಿಬಂದಿದೆ ಆದರೆ ಸೋಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಣಿತಿ ಶಿಂಧೆ ಪರ ಶಾರುಖ್ ಖಾನ್ ಅವರನ್ನೇ ಹೋಲುವಂತಹ ವ್ಯಕ್ತಿಯನ್ನು ಕರೆತಂದು ಚುನಾವಣಾ ಪ್ರಚಾರ ಮಾಡಿಸಿದ್ದಾರೆ ಇದೊಂದು ಹಗರಣ ಎಂದು ಬಿಜೆಪಿ ಹೇಳಿದೆ ಇದನ್ನು ಓದಿ : ಶಾರುಖ್​ ಖಾನ್​ ಅವರನ್ನೇ ಹೋಲುವಂತಹ ವ್ಯಕ್ತಿಯನ್ನು ಕರೆತಂದು ಕಾಂಗ್ರೆಸ್ ಅಭ್ಯರ್ಥಿ ಪ್ರಣಿತಿ ಶಿಂಧೆ ಪರ ಚುನಾವಣಾ ಪ್ರಚಾರ ಮಾಡಿಸಿದ ಘಟನೆ ಮಹಾರಾಷ್ಟ್ರದ ಸೊಲ್ಲಾಪುರ ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ ನಟ ಶಾರುಖ್‌ ಖಾನ್‌ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ. ನಟ ಯಾವಾಗಲೂ ರಾಜಕೀಯ ಮತ್ತು ರಾಜಕಾರಣಿಗಳಿಂದ ದೂರ ಇರುತ್ತಿದ್ದರು. ಆದ್ರೆ ಈ ಬಾರಿ ಪ್ರಣಿತಿ ಶಿಂಧೆ ಪರ ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಎಲ್ಲಾರೂ ಆಶ್ಚರ್ಯ ವ್ಯಕ್ತಪಡಿಸಿದ್ದರು. ಆದರೆ ಇವರು ರಿಯಲ್ ಶಾರುಖ್ ಖಾನ್ ಅಲ್ಲ. ಶಾರುಖ್​ ಖಾನ್​ ಅವರನ್ನೇ ಹೋಲುವಂತಹ ವ್ಯಕ್ತಿಯನ್ನು ಕಾಂಗ್ರೆಸ್ ಕರೆತಂದು ಪ್ರಣಿತಿ ಶಿಂಧೆ ಪರ ಚುನಾವಣಾ ಪ್ರಚಾರ ಮಾಡಿಸಿದ್ದಾರೆ. ಚುನಾವಣಾ ಪ್ರಚಾರ ಮಾಡಿರುವ ವಿಡಿಯೋ ಸದ್ಯಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. — (@) ಭಾರತದ ಚುನಾವಣಾ ಆಯೋಗ ಮತ್ತು ಶಾರುಖ್ ಖಾನ್ ಅವರನ್ನು ಎಕ್ಸ್‌ನಲ್ಲಿ ಟ್ಯಾಗ್ ಮಾಡಿ, ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಪ್ರಚಾರದ ಕುರಿತು ಕೆಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ತಮ್ಮ ಎಕ್ಸ್ ಖಾತೆಯಲ್ಲಿ " ಜನರನ್ನು ಎಷ್ಟು ನಿರ್ಲಜ್ಜವಾಗಿ ಮತ್ತು ಬಹಿರಂಗವಾಗಿ ಮರುಳು ಮಾಡಲು ಪಕ್ಷವು ಯಾವ ರೀತಿಯ ಕಾರ್ಯವನ್ನು ಮಾಡುತ್ತವೆ. ಸೆಲೆಬ್ರಿಟಿಗಳನ್ನು ಬಳಸಿಕೊಂಡು ಯಾವ ರೀತಿಯಲ್ಲಿ ಜನರನ್ನು ಮರಳು ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನು ಓದಿ : ಸದ್ಯಕ್ಕೆ ಶಾರುಖ್​ ಖಾನ್​ ಅವರನ್ನೇ ಹೋಲುವಂತಹ ವ್ಯಕ್ತಿಯಿಂದ ಚುನಾವಣಾ ಪ್ರಚಾರ ಮಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಿಜೆಪಿ ಇದನ್ನು ಹಗರಣ ಎಂದು ಕರೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...