ಬರ್ತಡೇ ಸಂಭ್ರಮದಲ್ಲಿ ಸಖತ್ ಪೋಸ್ ಕೊಟ್ಟ ಮಿಸ್ಟರ್ ಫರ್ಪೆಕ್ಟ್! ರಮೇಶ್ ಅರವಿಂದ್ ಸ್ಟೈಲೀಶ್ ಕಾಸ್ಟ್ಯೂಮ್ ಹಿಂದಿನ ಮಾಸ್ಟರ್ ಮೈಂಡ್ ಇವರೇ ನೋಡಿ ! ತ್ಯಾಗರಾಜನ ರೆಟ್ರೋ ಪೋಸ್.ಭರತ್ ರಾಮದಾಸ್ ಕಾಸ್ಟ್ಯೂಮ್ ನಲ್ಲಿ ಮಿಂಚಿದ ರಮೇಶ್ ಅರವಿಂದ್. ಬೆಂಗಳೂರು :ರಮೇಶ್ ಅರವಿಂದ್ ಪ್ರತಿಭಾನ್ವಿತ ಕಲಾವಿದ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕ, ನಿರೂಪಕ, ವ್ಯಕ್ತಿತ್ವ ವಿಕಸನ ಉಪನ್ಯಾಸಕ ಹೀಗೆ ಹೇಳುತ್ತಾ ಹೋದರೆ ಅವರೊಬ್ಬ ಬಹುಮುಖ ಪ್ರತಿಭೆ.ಪ್ರತಿಭಾನ್ವಿತ ಸಜ್ಜನ ನಟ ಎನಿಸಿಕೊಂಡಿರುವ ಮಿಸ್ಟರ್ ಫರ್ಪೆಕ್ಟ್ ರಮೇಶ್ ಅರವಿಂದ್‍ ಜನುಮದಿನದ ಸಂಭ್ರಮದಲ್ಲಿದ್ದಾರೆ.ರಮೇಶ್ ಅರವಿಂದ್ ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಅವರ ಭಾವಪೂರ್ಣ ನಟನೆ. ತ್ಯಾಗಮಯಿ ಪಾತ್ರಗಳಿಂದಲೇ ಜನಪ್ರಿಯರಾದ ಅವರು ಇಂದಿಗೂ ಬಹು ಬೇಡಿಕೆಯ ನಟ.ರಮೇಶ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ನಾಳೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.ಬರ್ತಡೇ ಮುನ್ನ ದಿನವಾದ ಇಂದು ರೆಟ್ರೋ ಲುಕ್ ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಖ್ಯಾತ ಕಾಸ್ಟ್ಯೂಮ್ ಡಿಸೈನರ್ ಭರತ್ ರಾಮದಾಸ್ ವಿನ್ಯಾಸಗೊಳಿಸಿದ ಧಿರಿಸಿನಲ್ಲಿ ರಮೇಶ್ ಚಿರಯುವಕನಂತೆ ಕಂಗೊಳಿಸಿದ್ದಾರೆ. ಇದನ್ನೂ ಓದಿ : ಯಾರು ಈ ಭರತ್?ಅಭಿನಯ ಚಕ್ರವರ್ತಿತೊಡುವ ಸ್ಟೈಲೀಶ್ ಕಾಸ್ಟ್ಯೂಮ್ ಗಳನ್ನು ನೀವೆಲ್ಲಾ ನೋಡಿರುತ್ತೀರಿ. ಆ ವಿನ್ಯಾಸಗಳನ್ನು ಖಂಡಿತವಾಗಿಯೂ ಮೆಚ್ಚಿರುತ್ತೀರಿ. ವೀಕೆಂಡ್ ನಲ್ಲಿ ಸಖತ್ ಡಿಫರೆಂಟ್ ಕಾಸ್ಟ್ಯೂಮ್ ನಲ್ಲಿ ಕಿಚ್ಚ ರತಿ ಬಾರಿ ಕಂಗೊಳಿಸುತ್ತಾರೆ. ಕಿಚ್ಚನ ಆ ಸ್ಟೈಲೀಶ್ ಅವತಾರದ ಹಿಂದಿನ ರೂವಾರಿ ಕೂಡಾ ಈ ಭರತ್. ಭರತ್ ಕಿಚ್ಚನಿಗೆ ಮಾತ್ರವಲ್ಲ ಸಾಕಷ್ಟು ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಕಾಸ್ಟ್ಯೂಮ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...