ದೀಪಿಕಾ-ರಣವೀರ್‌ ಮನೆಯ ಮಹಾಲಕ್ಷ್ಮಿಯನ್ನು ನೋಡಲು ಆಸ್ಪತ್ರೆಗೆ ಆಗಮಿಸಿದ ಮುಖೇಶ್‌ ಅಂಬಾನಿ..! ವಿಡಿಯೋ ನೋಡಿ : ಸೆಪ್ಟೆಂಬರ್ 8 ಭಾನುವಾರದಂದು ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅವರ ಹೆರಿಗೆ ಹೆಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ನಡೆದಿದೆ. ದೀಪಿಕಾ ಮತ್ತು ರಣವೀರ್ ಅವರ ಪುಟ್ಟ ದೇವತೆಯನ್ನು ಭೇಟಿ ಮಾಡಲು ಮುಖೇಶ್ ಅಂಬಾನಿ ಆಸ್ಪತ್ರೆಗೆ ಆಗಮಿಸಿದ್ದಾರೆ. :ಸೆಪ್ಟೆಂಬರ್ 8 ಭಾನುವಾರದಂದು ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅವರ ಹೆರಿಗೆ ಹೆಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ನಡೆದಿದೆ. ದೀಪಿಕಾ ಮತ್ತು ರಣವೀರ್ ಅವರ ಪುಟ್ಟ ದೇವತೆಯನ್ನು ಭೇಟಿ ಮಾಡಲು ಮುಖೇಶ್ ಅಂಬಾನಿ ಆಸ್ಪತ್ರೆಗೆ ಆಗಮಿಸಿದ್ದಾರೆ. ದೀಪಿಕಾ ಮತ್ತು ರಣವೀರ್ ಅವರ ಆಪ್ತ ಸ್ನೇಹಿತರು ಮತ್ತು ಹಿತೈಷಿಗಳು ತಮ್ಮ ಹೆಣ್ಣು ಮಗುವನ್ನು ಭೇಟಿಯಾಗಲು ಆಗಮಿಸುತ್ತಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಕೂಡ ದೀಪಿಕಾ ಮಗಳನ್ನು ಭೇಟಿಯಾಗಲು ಬಂದಿದ್ದು ಮುಖೇಶ್‌ ಆಸ್ಪತ್ರೆಯ ಹೊರಗೆ ಕಾಣಿಸಿಕೊಂಡರು. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಯಾದ ಸುಮಾರು ಆರು ವರ್ಷಗಳ ನಂತರ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ದಂಪತಿಗಳು ತಮ್ಮ ಮಗಳು ಹುಟ್ಟಿದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಸುದ್ದಿ ಶೇರ್‌ ಆಗಿದ್ದ ಕೆಲವೇ ಕ್ಷಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಆಲಿಯಾ ಭಟ್‌ನಿಂದ ಹಿಡಿದು ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ಅರ್ಜುನ್ ಕಪೂರ್, ಪರಿಣಿತಿ ಹೀಗೆ ಎಲ್ಲಾ ತಾರೆಯರು ಶುಭ ಹಾರೈಸಿದರು ಮತ್ತು ಪುಟ್ಟ ದೇವತೆಗೆ ಪ್ರೀತಿ ಮತ್ತು ಆಶೀರ್ವಾದವನ್ನು ನೀಡಿದ್ದಾರೆ. ಇದೀಗ ದೀಪಿಕಾ ಹಾಗೂ ರಣವೀರ್‌ ಅವರ ಪುಟ್ಟ ಲಕ್ಕಿಯನ್ನು ಭೇಟಿಯಾಗಲು ಮುಖೇಶ್ ಅಂಬಾನಿ ಕೂಡ ಬಂದಿದ್ದಾರೆ. ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಹೊರಗೆ ಅವರ ಕಾರಿನಿಂದ ಅವರು ಕಾಣಿಸಿಕೊಂಡರು. ಗಣೇಶ ಚತುರ್ಥಿ ಹಬ್ಬದ ಒಂದು ದಿನದ ನಂತರ ದೀಪಿಕಾ ಹೆರಿಗೆಯಾಗಿದೆ. ಈ ಹಿಂದೆ ಮುಖೇಶ್ ಅಂಬಾನಿ ತಮ್ಮ ಸ್ಥಳದಲ್ಲಿ ಗಣೇಶ ಚತುರ್ಥಿಯ ಅದ್ಧೂರಿ ಆಚರಣೆಯನ್ನು ಏರ್ಪಡಿಸಿದ್ದರು. ಗಣಪತಿ ಬಪ್ಪನ ದರ್ಶನ ಪಡೆಯಲು ಹಲವು ಬಾಲಿವುಡ್ ತಾರೆಯರು ಅಂಬಾನಿ ಮನೆಗೆ ಬಂದಿದ್ದರು. ಈ ವೇಳೆ ಅಂಬಾನಿಗಳ ಗಣಪತಿ ಹಬ್ಬದಲ್ಲಿ ದೀಪಿಕಾ ತಂದೆ, ಮಾವ ಕೂಡ ಪಾಲ್ಗೊಂಡಿದ್ದರು. ಅದೇ ದಿನ ಸಂಜೆ ಅಂದರೆ ಶನಿವಾರ ದೀಪಿಕಾ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಮರುದಿನ ಭಾನುವಾರ ಶುಭ ಸುದ್ದಿ ಬಂದಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...