2024: ಮುಂದಿನ ಪ್ರಧಾನಿ ನಿತೀಶ್ ಕುಮಾರ್? ಕಿಂಗ್ ಮೇಕರ್ ಆಗ್ತಾರಾ ನಿತೀಶ್ ಕುಮಾರ್..?...! ಇತ್ತ ಬಿಜೆಪಿ ಮ್ಯಾಜಿಕ್ ನಂಬರ್ 272 ತಲುಪಲು ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಸೋಶಿಯಲ್ ಮಿಡಿಯಾದಲ್ಲಿ ಮುಂದಿನ ಪ್ರಧಾನಿ ನಿತೀಶ್ ಕುಮಾರ್ ಎನ್ನುವ ಮೀಮ್ಸ್ ಗಳು ವೈರಲ್ ಆಗಿವೆ. ನವದೆಹಲಿ:ಇತ್ತ ಬಿಜೆಪಿ ಮ್ಯಾಜಿಕ್ ನಂಬರ್ 272 ತಲುಪಲು ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಸೋಶಿಯಲ್ ಮಿಡಿಯಾದಲ್ಲಿ ಮುಂದಿನ ಪ್ರಧಾನಿ ನಿತೀಶ್ ಕುಮಾರ್ ಎನ್ನುವ ಮೀಮ್ಸ್ ಗಳು ವೈರಲ್ ಆಗಿವೆ. ಚುನಾವಣೆಗೂ ಮುನ್ನ ಅಬ್ ಕಿ ಬಾರ್ 400 ಪಾರ್ ಎನ್ನುವ ಘೋಷಣೆಯೊಂದಿಗೆ ಚುನಾವಣೆ ಎದುರಿಸಿದ್ದ ಬಿಜೆಪಿ ಬಣಕ್ಕೆ ಈಗ ತೀವ್ರ ಹಿನ್ನೆಡೆಯಾಗಿದೆ.ಬಹುತೇಕ ಮಾಧ್ಯಮಗಳ ಚುನಾವಣೋತ್ತರ ಸಮೀಕ್ಷೆಯಲ್ಲಿ 350 ಕ್ಕೂ ಅಧಿಕ ಸ್ಥಾನಗಳನ್ನು ನೀಡಿದ್ದವು. ಹೀಗಾಗಿ ಈ ಬಾರಿಯು ಬಿಜೆಪಿ ಸುಲಭ ಬಹುಮತವನ್ನು ಪಡೆಯಬಹುದು ಎನ್ನಲಾಗಿತ್ತು, ಆದರೆ ಈಗ ಆಗಿದ್ದೆ ಬೇರೆ. ಇದನ್ನೂ ಓದಿ: ಸಾಮಾನ್ಯವಾಗಿ ಮೈತ್ರಿಕೂಟ ಬದಲಾಯಿಸುವುದರಲ್ಲಿ ಹೆಸರುವಾಸಿಯಾಗಿರುವ ನಿತೀಶ್ ಕುಮಾರ್ ಕುರಿತಾದ ಮೀಮ್ಸ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ, ಬಹುತೇಕರು ಈಗ ಬಿಜೆಪಿ ಪಾಳಯವನ್ನು ತೊರೆದು ನಿತೀಶ್ ಕುಮಾರ್ ಕಾಂಗ್ರೆಸ್ ಪಕ್ಷದ ಮೈತ್ರಿಕೂಟದ ಜೊತೆ ಸೇರಿ ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸುತ್ತಾರೆ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. — 🇮🇳 (@) 'ನಿತೀಶ್ ಜೀ, ಆಯೀ, ಆಪ್ಕೋ ಪಿಎಂ ಬನಾಯೇಂಗೆ' ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಕ್ಕೆ ತಕ್ಷಣ ಅವರು ಕಾಂಗ್ರೆಸ್ ಕಡೆ ಹೋಗುತ್ತಾರೆ ಎಂದು ಅವರು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬರು “ಎನ್‌ಡಿಎ ಸಂಖ್ಯೆಗಳು ಅರ್ಥಹೀನ. ಬಿಜೆಪಿಗೆ 272 ಬರದಿದ್ದರೆ, ನಿತೀಶ್ ಕುಮಾರ್, ಅಜಿತ್ ಪವಾರ್, ಚಂದ್ರಬಾಬು ನಾಯ್ಡು, ಕುಮಾರಸ್ವಾಮಿ ಅವರಂತಹವರು ಪಕ್ಷವನ್ನು ಬದಲಾಯಿಸುವುದಿಲ್ಲ ಎಂದು ನೀವು ಭಾವಿಸುತ್ತೀರಾ?" ಎಂದು ಬರೆದಿದ್ದಾರೆ. :- , :- — 🇮🇳 (@sarcaster_) “ಬಿಜೆಪಿ ಈಗ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರ ಹಿಡಿತದಲ್ಲಿದೆ.ಇಂಡಿಯಾ ಮೈತ್ರಿಕೂಟವು ಅವರಲ್ಲಿ ಯಾರಿಗಾದರೂ ಪ್ರಧಾನ ಮಂತ್ರಿ ಹುದ್ದೆಯನ್ನು ನೀಡಿದರೆ, ಅವರು ಬದಲಾಯಿಸಬಹುದೇ?" ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...