: ಗಾಯವನ್ನು ಗುಣಪಡಿಸಲು ಯಾವ ವಿಟಮಿನ್ ಸಹಾಯ ಮಾಡುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಗೌತಮ ಬುದ್ಧನಿಗೆ ಯಾವ ವಯಸ್ಸಿನಲ್ಲಿ ನಿರ್ವಾಣ ಸಿಕ್ಕಿತು? ಉತ್ತರ: 35 ಪ್ರಶ್ನೆ 2:ವಿಶ್ವದ ಅತ್ಯಂತ ವೇಗದ ಮನುಷ್ಯ ಯಾರು? ಉತ್ತರ: ಉಸೇನ್ ಬೋಲ್ಟ್ ಪ್ರಶ್ನೆ 3:ಗಾಯವನ್ನು ಗುಣಪಡಿಸಲು ಯಾವ ವಿಟಮಿನ್ ಸಹಾಯ ಮಾಡುತ್ತದೆ? ಉತ್ತರ: ವಿಟಮಿನ್ ಸಿ ಪ್ರಶ್ನೆ 4:ಇತಿಹಾಸದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಹೆರೊಡೋಟಸ್ ಪ್ರಶ್ನೆ 5:ಜಗತ್ತಿನಲ್ಲಿ 'ಗ್ರೇಟ್ ಬೇರ್ ಲೇಕ್' ಎಲ್ಲಿದೆ..? ಉತ್ತರ: ಕೆನಡಾ ಇದನ್ನೂ ಓದಿ: ಪ್ರಶ್ನೆ 6:"ಮಾಡು ಇಲ್ಲವೇ ಮಡಿ" ಎಂಬ ಘೋಷಣೆಯನ್ನು ನೀಡಿದವರು ಯಾರು? ಉತ್ತರ: ಮಹಾತ್ಮ ಗಾಂಧಿ ಪ್ರಶ್ನೆ 7:ಶುಷ್ಕ ವಾತಾವರಣದಲ್ಲಿ ಬೆಳೆಯುವ ಸಸ್ಯಗಳನ್ನು ಏನೆಂದು ಕರೆಯುತ್ತಾರೆ? ಉತ್ತರ: ಜೆರೋಫೈಟ್ಸ್ ಪ್ರಶ್ನೆ 8:ಹೊಟ್ಟೆಯಲ್ಲಿ ಸ್ರವಿಸುವ ಆಮ್ಲ ಯಾವುದು..? ಉತ್ತರ: ಹೈಡ್ರೋಕ್ಲೋರಿಕ್ ಆಮ್ಲ ಪ್ರಶ್ನೆ 9:ಭಾರತ ಗಣರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾವುದು? ಉತ್ತರ: ಭಾರತ ರತ್ನ ಪ್ರಶಸ್ತಿ ಪ್ರಶ್ನೆ 10:ಬೆಳಕಿನ ಬಲ್ಬ್ ಅನ್ನು ಕಂಡುಹಿಡಿದವರು ಯಾರು? ಉತ್ತರ: ಥಾಮಸ್ ಅಲ್ವಾ ಎಡಿಸನ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...