: ಭಾರತದ ನೆಪೋಲಿಯನ್ ಎಂದು ಯಾರನ್ನು ಕರೆಯಲಾಗುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ವಿನ್ಸೆಂಟ್ ವಾನ್ ಗೋ ಅವರ ಅತ್ಯಂತ ಪ್ರಸಿದ್ಧ ವರ್ಣಚಿತ್ರ ಯಾವುದು? ಉತ್ತರ: ಸ್ಟಾರಿ ನೈಟ್ ಪ್ರಶ್ನೆ 2:ಮಹಾತ್ಮ ಗಾಂಧೀಜಿ ʼಕ್ವಿಟ್ ಇಂಡಿಯಾ ಚಳುವಳಿʼಯನ್ನು ಯಾವ ವರ್ಷದಲ್ಲಿ ಪ್ರಾರಂಭಿಸಿದರು? ಉತ್ತರ: 1942 ಪ್ರಶ್ನೆ 3:ಪ್ರಸಿದ್ಧ ಬಕ್ಸಾರ್ ಕದನ ಯಾವಾಗ ನಡೆಯಿತು? ಉತ್ತರ: 1764 ಪ್ರಶ್ನೆ 4:ಭಾರತದ ನೆಪೋಲಿಯನ್ ಎಂದು ಯಾರನ್ನು ಕರೆಯಲಾಗುತ್ತದೆ? ಉತ್ತರ: ಸಮುದ್ರಗುಪ್ತ ಪ್ರಶ್ನೆ 5:ದೂರದರ್ಶನವನ್ನು ಕಂಡುಹಿಡಿದವರು ಯಾರು? ಉತ್ತರ: ಜಾನ್ ಲೋಗಿ ಬೈರ್ಡ್ (1925 ರಲ್ಲಿ) ಇದನ್ನೂ ಓದಿ: ಪ್ರಶ್ನೆ 6: ʼಪಂಜಾಬ್‌ನ ಕೇಸರಿʼ ಎಂದು ಯಾರನ್ನು ಕರೆಯಲಾಗುತ್ತದೆ..? ಉತ್ತರ: ಲಾಲಾ ಲಜಪತ್ ರಾಯ್‌ ಪ್ರಶ್ನೆ 7:ʼಪಂಚತಂತ್ರʼ ಕೃತಿಯನ್ನು ಬರೆದ ಲೇಖಕರು ಯಾರು..? ಉತ್ತರ: ವಿಷ್ಣು ಶರ್ಮಾ ಪ್ರಶ್ನೆ 8:ವಿಸ್ತೀರ್ಣಕ್ಕೆ ಅನುಗುಣವಾಗಿ ಭಾರತದಲ್ಲಿ ಅತಿದೊಡ್ಡ ರಾಜ್ಯ ಯಾವುದು? ಉತ್ತರ: ರಾಜಸ್ಥಾನ ಪ್ರಶ್ನೆ 9:ವಿಶ್ವದ ಅತಿದೊಡ್ಡ ಜೀವಂತ ಪ್ರಾಣಿ ಯಾವುದು..? ಉತ್ತರ: ಬ್ಲೂ ವೇಲ್ ಪ್ರಶ್ನೆ 10:ಪಂಜಾಬ್‌ನ ಅತ್ಯಂತ ಜನಪ್ರಿಯ ಜಾನಪದ ನೃತ್ಯ ಯಾವುದು..? ಉತ್ತರ: ಭಾಂಗ್ರಾ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...