ಜುಲೈ 15ರಿಂದ ಮುಂಬೈ-ಹುಬ್ಬಳ್ಳಿ ನಡುವೆ ಇಂಡಿಗೋ ವಿಮಾನಯಾನ ಪುನರಾರಂಭ : ಹುಬ್ಬಳ್ಳಿ ಮತ್ತು ಮುಂಬೈ ನಡುವಿನ ಇಂದಿಗೂ ವಿಮಾನಯಾನ ಜುಲೈ 15 ರಿಂದ ಪುನರಾರಂಭಗೊಳ್ಳಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ. ಹುಬ್ಬಳ್ಳಿ ಮತ್ತು ಮುಂಬೈ ನಡುವಿನ ಇಂದಿಗೂ ವಿಮಾನಯಾನ ಜುಲೈ 15 ರಿಂದ ಪುನರಾರಂಭಗೊಳ್ಳಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹಲ್ಲಾ ಜೋಶಿ ಅವರ 6ಇ ಇಂಡಿಗೋ ವಿಮಾನ ಸಂಚಾರವನ್ನು ಮತ್ತೆ ಶುರು ಮಾಡಬೇಕೆಂಬ ಮನವಿಯ ಮೇರೆಗೆ ನಾಗರಿಕ ವಿಮಾನಯಾನ ಸಚಿವಾಲಯ ಪುನರಾರಂಭಿಸಲು ನಿರ್ಧರಿಸಿದೆ. ಇದನ್ನು ಓದಿ : ಈ ಮನವಿಯ ಮೇರೆಗೆ ಮುಂಬೈ ಮತ್ತು ಹುಬ್ಬಳ್ಳಿ ಮಧ್ಯೆ ಜುಲೈ 15 ರಿಂದ ಇಂಡಿಗೋ 6ಇ ವಿಮಾನಯಾನ ಸೇವೆ ಪುನರಾರಂಭಗೊಳ್ಳಲಿದೆ. ಈ ಹಿಂದೆ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಇಂಡಿಗೋ 6ಇ ವಿಮಾನದ ಪುನರಾರಂಭದ ಕುರಿತು ಸಚಿವ ಸಚಿವ ಪ್ರಲ್ಲಾದ ಜೋಶಿ ಗಮನಕ್ಕೆ ತಂದಿದ್ದರು ಸದ್ಯ ಈ ಹಿನ್ನೆಲೆಯಲ್ಲಿ ವಿಮಾನ ಸಂಚಾರವನ್ನು ಪುನರಾರಂಭಗೊಳಿಸಿದೆ. ಈ ಕುರಿತಂತೆ ಸಚಿವ ಪ್ರಹಲ್ಲಾ ಜೋಶಿ ತಮ್ಮ ಎಕ್ಸ್ ಖಾತೆಯಲ್ಲಿ ಜುಲೈ 15ರಿಂದ ಮುಂಬೈ ಹುಬ್ಬಳ್ಳಿ ನಡುವೆ ಬರುವ ದೈನಂದಿನ ವಿಮಾನಗಳ ಕಾರ್ಯನಿರ್ವಹಿಸುವ ಕುರಿತು ಅಗತ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದನ್ನು ಓದಿ : ಇಂಡಿಗೋ ವಿಮಾನ ಮಧ್ಯಾಹ್ನ 3 ಗಂಟೆಗೆ ಮುಂಬೈಯಿಂದ ಹೊರಟು, ಸಂಜೆ 4.10ಕ್ಕೆ ಹುಬ್ಬಳ್ಳಿ ತಲುಪಲಿದೆ ಮತ್ತು 4.40ಕ್ಕೇ ಹುಬ್ಬಳ್ಳಿಯಿಂದ ಹೊರಟು 5.50ಕ್ಕೆ ಮುಂಬೈ ತಲುಪಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ ಮತ್ತು ಪುನರಾರಂಭ ವ್ಯವಸ್ಥೆ ಕಲ್ಪಿಸಿ ಕೊಟ್ಟಿರುವ ಹಿನ್ನೆಲೆ ಭಾರತೀಯ ನಾಗರಿಕ ವಿಮಾನಯನ ಸಚಿವಾಲಯಕ್ಕೆ ಸಚಿವ ಪ್ರಹ್ಲಾದ್ ಜೋಶಿ ಧನ್ಯವಾದ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...