7 ರಾಜ್ಯಗಳಲ್ಲಿನ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ ಜೂನ್ 14 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜೂನ್ 21 ಮತ್ತು ನಾಮಪತ್ರಗಳ ಪರಿಶೀಲನೆ ಜೂನ್ 26 ರಂದು ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಜೂನ್ 26 ಕೊನೆಯ ದಿನವಾಗಿದೆ.ಜುಲೈ 10 ರಂದು ಮತದಾನ ನಡೆಯಲಿದ್ದು, ಜುಲೈ 13 ರಂದು ಮತ ಎಣಿಕೆ ನಡೆಯಲಿದೆ. ನವದೆಹಲಿ:ಏಳು ರಾಜ್ಯಗಳ 13 ಸ್ಥಾನಗಳಿಗೆ ವಿಧಾನಸಭಾ ಉಪಚುನಾವಣೆ ನಡೆಸುವ ದಿನಾಂಕವನ್ನು ಚುನಾವಣಾ ಆಯೋಗ ಇಂದು ಪ್ರಕಟಿಸಿದೆ. ಚುನಾವಣಾ ಆಯೋಗದ ಪ್ರಕಾರ, ಎಲ್ಲಾ ಏಳು ಸ್ಥಾನಗಳಿಗೆ ಜುಲೈ 10 ರಂದು ಉಪಚುನಾವಣೆ ನಡೆಯಲಿದೆ. ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭೆ ಚುನಾವಣೆ 2024 ರಲ್ಲಿ ಸ್ಪರ್ಧಿಸಲು ಹಾಲಿ ಶಾಸಕರು ಹಲವಾರು ಸ್ಥಾನಗಳನ್ನು ತೆರವು ಮಾಡಿದ ನಂತರ ಈ ಘೋಷಣೆ ಬಂದಿದೆ. ಇದನ್ನೂ ಓದಿ: ವಿಧಾನಸಭಾ ಉಪಚುನಾವಣೆ ಪೂರ್ಣ ವೇಳಾಪಟ್ಟಿ: ಜೂನ್ 14 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜೂನ್ 21 ಮತ್ತು ನಾಮಪತ್ರಗಳ ಪರಿಶೀಲನೆ ಜೂನ್ 26 ರಂದು ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಜೂನ್ 26 ಕೊನೆಯ ದಿನವಾಗಿದೆ.ಜುಲೈ 10 ರಂದು ಮತದಾನ ನಡೆಯಲಿದ್ದು, ಜುಲೈ 13 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: 13 ಸ್ಥಾನಗಳಲ್ಲಿ ಬಿಹಾರದ ರುಪೌಲಿ, ರಾಯ್‌ಗಂಜ್ ರಣಘಾಟ್ ದಕ್ಷಿಣ್, ಪಶ್ಚಿಮ ಬಂಗಾಳದ ಬಾಗ್ದಾ ಮತ್ತು ಮಾಣಿಕ್ತಾಲಾ, ತಮಿಳುನಾಡಿನ ವಿಕ್ರವಾಂಡಿ, ಮಧ್ಯಪ್ರದೇಶದ ಅಮರವಾರ, ಉತ್ತರಾಖಂಡದ ಬದರಿನಾಥ್ ಮತ್ತು ಮಂಗಳೌರ್, ಪಂಜಾಬ್‌ನ ಜಲಂಧರ್ ಪಶ್ಚಿಮ ಮತ್ತು ಹಿಮಾಚಲ ಪ್ರದೇಶದ ಡೆಹ್ರಾ, ಹಮೀರ್‌ಪುರ ಮತ್ತು ನಲಗಢ ಕ್ಷೇತ್ರಗಳು ಸೇರಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...