ಪಾಕ್‌ ಭಾರತ ಟಿ-20 ವರ್ಲ್ಡ್‌ಕಪ್‌: ನ್ಯೂಯಾರ್ಕ್‌ನಲ್ಲಿ ಕೋಹ್ಲಿ ಜೊತೆ ಕಾಣಿಸಿಕೊಂಡ ಅನುಷ್ಕಾ. T20 2024: ಪಾಕ್‌ ಭಾರತ ಹೈವೋಟೇಜ್‌ ಪಂದ್ಯ ಭಾನುವಾರ ರಾತ್ರಿ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಭಾರತ ತಂಡ ಈಗಾಗಲೇ ನ್ಯೂಯಾರ್ಕ್‌ನಲ್ಲಿ ಬಂದಿಳಿದಿದ್ದಾರೆ. ಈ ನಡುವೆ ಕೋಹ್ಲಿ ಹಾಗೂ ವಿರಾಟ್‌ ಜೋಡಿ ನ್ಯೂಯಾರ್ಕ್‌ ನಗರದ ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದಾರೆ. : ಪಾಕಿಸ್ತಾನ ಹಾಗೂ ಭಾರತ ನಡುವಿನ ಹೈ ವೋಲ್ಟೇಜ್‌ ಮ್ಯಾಚ್‌ ಭಾನುವಾರ ರಾತ್ರಿ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಭಾರತ ತಂಡದ ಆಟಗಾರರು ಈಗಾಗಲೇ ನ್ಯೂಯಾರ್ಕ್‌ನಲ್ಲಿ ಬಂದು ಇಳಿದಿದ್ದಾರೆ. ಕಿಂಗ್‌ ಕೋಹ್ಲಿ ಕೂಡ ಈ ಪಂದ್ಯದಲ್ಲಿ ಆಡಲಿದ್ದು ಪತ್ನಿ ಅನುಷ್ಕಾ ಶರ್ಮಾ ಜೊತೆ ನ್ಯೂಯಾರ್ಕ್‌ ರಸ್ತೆಯಲ್ಲಿ ಜೊತೆಯಾಗಿ ಹೆಜ್ಜೆ ಹಾಕುತ್ತಾ ಕಾಣಿಸಿಕೊಂಡಿದ್ದಾರೆ. ಜೋಡಿ ನ್ಯೂಯಾರ್ಕ್‌ನಲ್ಲಿ ಕಣಿಸಿಕೊಂಡಿರುವ ಕ್ಷಣವನ್ನು ಸೋಶಿಯಲ್‌ ಮಿಡಿಯಾ ಬಳಕೆದಾರರು ಒಬ್ಬರು ಸೆರೆ ಹಿಡಿದು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಭೂಷಣ್‌ ಸೇಥಿ ಎಂಬುವವರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಕೋಹ್ಲಿ ಹಾಗೂ ಅನುಷ್ಕಾ ಜೋಡಿ ಕಾಫಿ ಕಪ್‌ ಹಿಡಿದು ಕಾರಿಗೆ ಏರುತ್ತಿರುವ ದೃಶ್ಯ ಸೆರೆಯಾಗಿದೆ. ಟಿಫಿನ್‌ ಮಾಡಲು ಹೋದ ಸಂದರ್ಭದಲ್ಲಿ ದಂಪತಿಯನ್ನು ಭೇಟಿ ಮಾಡಿದ್ದಾಗಿ ಭೂಷಣ್‌ ಸೇಥಿ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. "ಲೆಜೆಂಡ್‌ ಕೋಹ್ಲಿಯವರನ್ನ, ಪತ್ನಿ ಅನುಷ್ಕಾ ಹಾಗೂ ಮಕ್ಕಳ ಜೊತೆಗೆ ರೆಸ್ಟೋರೆಂಟ್‌ನಲ್ಲಿ ಭೇಟಿಯಾದೆ. ಜೊತೆಯಲ್ಲಿಯೇ ನಾವು ಬ್ರೇಕ್‌ಫಾಸ್ಟ್‌ ಸೇವಿಸಿದೆವು. ಕೋಹ್ಲಿ ಹಾಗೂ ಅವರ ಕುಟುಂಬದವರೊಂದಿಗಿನ ಸಂವಾದ ತುಂಬಾ ಚೆನ್ನಾಗಿತ್ತು" ಎಂದು ಭೂಷಣ್‌ ಸೇಥಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. , .😍❤️ — virat_kohli_18_club (@) . (2 ). . 🇮🇳 — (@bhushansethi1) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...