"ಅಲ್ಪಸಂಖ್ಯಾತರಿಗೆ ನೀಡುತ್ತಿರುವ ಮೀಸಲಾತಿ ಸಾಮಾಜಿಕ ನ್ಯಾಯವನ್ನು ಹೊಂದಿದೆ ಹೊರತು ಓಲೈಕೆಯಲ್ಲ"-ಟಿಡಿಪಿ ನರ ಲೋಕೇಶ್ ಮುಸ್ಲಿಂ ಸಮುದಾಯಕ್ಕೆ ನೀಡುತ್ತಿರುವ ಮೀಸಲಾತಿ ಸಾಮಾಜಿಕ ನ್ಯಾಯದ ನೆಲೆಯಲ್ಲಿ ನೀಡಲಾಗುತ್ತಿದೆಯೇ ಹೊರತು ಓಲೈಕೆ ದೃಷ್ಟಿಯಿಂದಲ್ಲ ಎಂದು ಟಿಡಿಪಿ ನಾಯಕ ಮತ್ತು ಚಂದ್ರಬಾಬು ನಾಯ್ಡು ಅವರ ಪುತ್ರ ನರಾ ಲೋಕೇಶ್ ಹೇಳಿದ್ದಾರೆ. ನವದೆಹಲಿ:ಮುಸ್ಲಿಂ ಸಮುದಾಯಕ್ಕೆ ನೀಡುತ್ತಿರುವ ಮೀಸಲಾತಿ ಸಾಮಾಜಿಕ ನ್ಯಾಯದ ನೆಲೆಯಲ್ಲಿ ನೀಡಲಾಗುತ್ತಿದೆಯೇ ಹೊರತು ಓಲೈಕೆ ದೃಷ್ಟಿಯಿಂದಲ್ಲ ಎಂದು ಟಿಡಿಪಿ ನಾಯಕ ಮತ್ತು ಚಂದ್ರಬಾಬು ನಾಯ್ಡು ಅವರ ಪುತ್ರ ನರಾ ಲೋಕೇಶ್ ಹೇಳಿದ್ದಾರೆ. ಈ ಕುರಿತಾಗಿ ಖಾಸಗಿವಾಹಿನಿಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು 'ಮುಸ್ಲಿಮರಿಗೆ ಕಳೆದ 2 ದಶಕಗಳಿಂದ ಮೀಸಲಾತಿಯನ್ನು ನೀಡಲಾಗುತ್ತಿದೆ, ಅದರ ಪರವಾಗಿ ನಾವು ನಿಲ್ಲುತ್ತೇವೆ. ಅಷ್ಟೇ ಅಲ್ಲದೆ ಅದನ್ನು ನಾವು ಮುಂದುವರೆಸಲು ಯೋಜಿಸಿದ್ದೇವೆ ಎಂದು ಅವರು ಹೇಳಿದರು. ಇದನ್ನೂ ಓದಿ: "ಅಲ್ಪಸಂಖ್ಯಾತರು ನಿರಂತರವಾಗಿ ನರಳುತ್ತಿದ್ದಾರೆ ಮತ್ತು ಅವರು ಅತ್ಯಂತ ಕಡಿಮೆ ತಲಾ ಆದಾಯವನ್ನು ಹೊಂದಿದ್ದಾರೆ ಎಂಬುದು ಸತ್ಯವಾದ ಸಂಗತಿ.ಸರ್ಕಾರವಾಗಿ ಅವರನ್ನು ಬಡತನದಿಂದ ಹೊರತರುವುದು ನನ್ನ ಜವಾಬ್ದಾರಿಯಾಗಿದೆ.ಹಾಗಾಗಿ ನಾವು ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳು ಸಮಾಧಾನಕ್ಕಾಗಿ ಅಲ್ಲ, ಆದರೆ ಅವರನ್ನು ಬಡತನದಿಂದ ಹೊರಗೆ ತರುವುದಕ್ಕಾಗಿ" ಎಂದು ಹೇಳಿದರು. "ನಮ್ಮ ರಾಷ್ಟ್ರವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಬಯಸಿದರೆ, ನಾವು ಯಾರನ್ನೂ ಬಿಡಲು ಸಾಧ್ಯವಿಲ್ಲ, ಹಾಗಾಗಿ ನಾವು ಅದನ್ನು ಒಟ್ಟಿಗೆ ಮಾಡಬೇಕು ಮತ್ತು ಅದನ್ನು ಮಾಡಲು ಈಗ ನಮಗೆ ಉತ್ತಮ ಅವಕಾಶವಿದೆ. ಹಾಗಾಗಿ ಈಗ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು.ಇದು ಟಿಡಿಪಿಯ ಟ್ರೇಡ್‌ಮಾರ್ಕ್ ಆಗಿದೆ 'ಎಂದುಹೇಳಿದರು. ಇದನ್ನೂ ಓದಿ: ಇನ್ನೂ ಮುಂದುವರೆದು ಮಾತನಾಡಿದ ಅವರು ಇಂದು ಆಂಧ್ರಪ್ರದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಶೋಷಿತರನ್ನು ಮೇಲಕ್ಕೆತ್ತುವುದಕ್ಕೆ ಪಕ್ಷವು ಗಮನ ಹರಿಸಲಿದೆ ಎಂದು ಅವರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...