ಲೋಕಸಭೆಯಲ್ಲಿ 'ಶತಕ'ದ ಗಡಿ ತಲುಪಲಿದೆ ಕಾಂಗ್ರೆಸ್..! ಮಂಗಳವಾರದಂದು ಪ್ರಕಟವಾದ ಲೋಕಸಭಾ ಫಲಿತಾಂಶದಲ್ಲಿ 99 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಪಕ್ಷ ಈಗ 100 ರ ಗಡಿ ತಲುಪಲಿದೆ. ನವದೆಹಲಿ:ಮಂಗಳವಾರದಂದು ಪ್ರಕಟವಾದ ಲೋಕಸಭಾ ಫಲಿತಾಂಶದಲ್ಲಿ 99 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಪಕ್ಷ ಈಗ 100 ರ ಗಡಿ ತಲುಪಲಿದೆ. ಹೌದು, ಮಹಾರಾಷ್ಟ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿರುವ ಕಾಂಗ್ರೆಸ್ ಬಂಡಾಯ ವಿಜೇತ ಅಭ್ಯರ್ಥಿ ವಿಶಾಲ್ ಪಾಟೀಲ್ ಗುರುವಾರ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುವುದರ ಮೂಲಕ ತನ್ನ ಸಂಖ್ಯಾಬಲವನ್ನು 100ಕ್ಕೆ ಹೆಚ್ಚಿಸಿದೆ.ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಸಂತದಾದಾ ಪಾಟೀಲ್ ಅವರ ಮೊಮ್ಮಗನಾಗಿರುವ ವಿಶಾಲ್ ಪಾಟೀಲ್ ಅವರು ಸಾಂಗ್ಲಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸಂಜಯ್ಕಾಕ ಪಾಟೀಲ್ ಅವರನ್ನು ಸೋಲಿಸುವ ಮೂಲಕ ಕೆಳಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಪಾಲುದಾರರ ನಡುವೆ ಸೀಟು ಹಂಚಿಕೆ ವ್ಯವಸ್ಥೆಯಲ್ಲಿ ಸಾಂಗ್ಲಿ ಸಂಸದೀಯ ಸ್ಥಾನವನ್ನು ಶಿವಸೇನೆ-ಯುಬಿಟಿಗೆ ನಿಯೋಜಿಸಿದ ನಂತರ ಅವರು ಬಂಡಾಯವೆದ್ದು ಸ್ವತಂತ್ರವಾಗಿ ಸ್ಪರ್ಧಿಸಿದ್ದರು.ಈಗ ಅವರು ಗೆಲುವಿನ ನಂತರ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು "ಸಾಂಗ್ಲಿಯಿಂದ ಚುನಾಯಿತ ಸಂಸದ ಶ್ರೀ ವಿಶಾಲ್ ಪಾಟೀಲ್ ಅವರು ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಬೆಂಬಲವನ್ನು ಸ್ವಾಗತಿಸುತ್ತೇನೆ" ಎಂದು ಹೇಳಿದ್ದಾರೆ. , . , , .… — (@) ವಿಶಾಲ್ ಪಾಟೀಲ್ ಮತ್ತು ವಿಶ್ವಜಿತ್ ಕದಂ ನಿನ್ನೆ ಶ್ರೀ ಖರ್ಗೆ ಮತ್ತು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ತಮ್ಮ ಬೆಂಬಲ ಪತ್ರವನ್ನು ನೀಡಿದರು.ಲೋಕಸಭೆಯ ಸಚಿವಾಲಯ ಒಪ್ಪಿಗೆ ನೀಡಿದರೆ, ವಿಶಾಲ್ ಪಾಟೀಲ್ ಅವರನ್ನು ಕಾಂಗ್ರೆಸ್‌ನ ಸಹ ಸಂಸದ ಎಂದು ಕರೆಯಬಹುದು ಆಗ ಲೋಕಸಭೆಯಲ್ಲಿ ಪಕ್ಷದ ಬಲ 100 ಕ್ಕೆ ತಲುಪಲಿದೆ ಎನ್ನಲಾಗಿದೆ. ಇದನ್ನೂ ಓದಿ: ಬಿಹಾರದ ಪೂರ್ಣೆಯಾದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿರುವ ಮತ್ತೊಬ್ಬ ನಾಯಕ ಪಪ್ಪು ಯಾದವ್ ಕೂಡ ಕಾಂಗ್ರೆಸ್‌ಗೆ ಬೆಂಬಲ ನೀಡುವ ನಿರೀಕ್ಷೆಯಿದೆ. ಚುನಾವಣೆಗೂ ಮುನ್ನ ತಮ್ಮದೇ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿದ್ದರು. ಬಿಹಾರದ ಪ್ರತಿಪಕ್ಷ ಸ್ಥಾನದ ಒಪ್ಪಂದದಲ್ಲಿ ಪೂರ್ಣೆಯಾ ಸ್ಥಾನವು ಆರ್‌ಜೆಡಿ ಪಾಲು ಹೋದಾಗ, ಪಪ್ಪು ಯಾದವ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...