ನಾನು ʼಕಂಗ್ರಾಂಟ್ಸ್‌ʼ ಅಂತಾ ಮೆಸೇಜ್‌ ಮಾಡಿದ್ರೆ ರಾಹುಲ್‌ ಗಾಂಧಿ ರಿಪ್ಲೈ ಮಾಡಿಲ್ಲವೆಂದ ದೀದಿ! 2024: ಮಂಗಳವಾರ ಫಲಿತಾಂಶ ಪ್ರಕಟಗೊಂಡ ನಂತರ ನಾನು ರಾಹುಲ್ ಗಾಂಧಿ ಅವರಿಗೆ ಅಭಿನಂದನೆಯ ಸಂದೇಶವನ್ನು ಕಳುಹಿಸಿದ್ದೇನೆ. ಆದರೆ ರಾಹುಲ್ ನನ್ನ ಮೆಸೇಜ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 2024:ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಪ್ರಧಾನಿ ಮೋದಿಯವರ ʼಚಾರ್‌ ಸೌ ಪಾರ್‌ʼ ಕನಸಾಗಿಯೇ ಉಳಿದಿದೆ. ಕಳೆದ ಬಾರಿಗಿಂತಲೂ ೬೩ ಸ್ಥಾನಗಳನ್ನು ಕಳೆದುಕೊಂಡಿರುವ ಬಿಜೆಪಿ ೨೪೦ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಏಕಾಂಗಿಯಾಗಿ ಸರ್ಕಾರ ರಚಿಸಲು ವಿಫಲವಾಗಿದೆ. ಮೈತ್ರಿಕೂಟವು 292 ಸ್ಥಾನಗಳನ್ನು ಪಡೆದುಕೊಂಡಿದ್ದು, ಸರ್ಕಾರ ರಚಿಸುವ ಕಸರತ್ತು ನಡೆಯುತ್ತಿದೆ. ಇನ್ನುನೇತೃತ್ವದ ಇಂಡಿಯಾ ಮೈತ್ರಿಕೂಟ 234 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ್ದು, ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿದೆ. ಹೀಗಾಗಿ ಯಾರು ಸರ್ಕಾರ ರಚಿಸುತ್ತಾರೆ? ಯಾರು ಪ್ರಧಾನಿಯಾಗುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ೩ನೇ ಅವಧಿಗೂ ನರೇಂದ್ರ ಮೋದಿಯವರೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆಂದು ಬಿಜೆಪಿ ಹೇಳಿಕೊಂಡಿದೆ. ಇದರ ನಡುವೆ ಪಶ್ಚಿಮ ಬಂಗಾಳದ ಸಿಎಂಮಮತಾ ಬ್ಯಾನರ್ಜಿ ನೀಡಿರುವ ಒಂದೇ ಒಂದು ಹೇಳಿಕೆ ಸಂಚಲವನ್ನು ಮೂಡಿಸಿದೆ. ಇದನ್ನೂ ಓದಿ: ಮಂಗಳವಾರ ಫಲಿತಾಂಶ ಪ್ರಕಟಗೊಂಡ ನಂತರ ನಾನು ರಾಹುಲ್ ಗಾಂಧಿ ಅವರಿಗೆ ಅಭಿನಂದನೆಯ ಸಂದೇಶವನ್ನು ಕಳುಹಿಸಿದ್ದೇನೆ. ಆದರೆ ರಾಹುಲ್ ನನ್ನ ಮೆಸೇಜ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ʼಬಹುಶಃ ಅವರು ಚುನಾವಣಾ ಫಲಿತಾಂಶದಲ್ಲಿ ನಿರತರಾಗಿದ್ದರು ಅನ್ನಿಸುತ್ತದೆ. ಅವರು ಇಲ್ಲಿಯವರೆಗೂ ನನ್ನನ್ನು ಸಂಪರ್ಕಿಸಿಲ್ಲ. ಅವರು ನನ್ನನ್ನು ಸಂಪರ್ಕಿಸದಿದ್ದರೂ ನಾನು ಹೆದರುವುದಿಲ್ಲʼ ಅಂತಾ ದೀದಿ ಹೇಳಿದ್ದಾರೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷವು ಬರೋಬ್ಬರಿ 29 ಸ್ಥಾನಗಳನ್ನು ಗೆದ್ದಿದ್ದು, ಇಂಡಿಯಾದ ಸರ್ಕಾರ ರಚನೆ ಮಾಡಬೇಕಾದರೆ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಇದೀಗ ದೀದಿಯವರ ಮೆಸೇಜ್‌ಗೆ ರಾಹುಲ್‌ ಗಾಂಧಿ ರಿಪ್ಲೈ ಮಾಡದಿರುವುದರಿಂದ ಅವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...