: ಫ್ಲೈಟ್ ನಲ್ಲಿ ಪ್ರಯಾಣ ಬೆಳೆಸುವ ಮುನ್ನ ತೂಕ ಪರೀಕ್ಷಿಸಿಕೊಳ್ಳಬೇಕು, ಈ ದಿನದಿಂದ ಆರಂಭಗೊಳ್ಳಲಿದೆ ಸಮೀಕ್ಷೆ : ನ್ಯೂಜಿಲೆಂಡ್‌ನ ನಾಗರಿಕ ವಿಮಾನಯಾನವು ವಿಮಾನ ಪ್ರಯಾಣದ ಮೊದಲು ಪ್ರಯಾಣಿತರ ತೂಕ ಪರೀಕ್ಷೆಗೆ ಮುಂದಾಗಿದೆ. ಪ್ರಯಾಣಿಕರ ತೂಕದ ದತ್ತಾಂಶವನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುವುದು ಎಂದು ನಾಗರಿಕ ವಿಮಾನಯಾನ ಇಲಾಖೆ ತಿಳಿಸಿದೆ. ಇದರ ಹಿಂದಿನ ಕಾರಣ ಏನು ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ ​​ತನ್ನ ವಿಮಾನದಲ್ಲಿ ಪ್ರಯಾಣಿಸುವ ಯಾತ್ರಿಗಳ ತೂಕ ಪರಿಶೀಲನೆಗೆ ಮುಂದಾಗಿದೆ. ವಿಮಾನ ಟೇಕ್ ಆಫ್ ಆಗುವ ಮೊದಲು ಈ ತೂಕವನ್ನು ಮಾಡಲಾಗುತ್ತದೆ. ಹೆಚ್ಚಿನ ಜನರು ತಮ್ಮ ಗಮ್ಯಸ್ಥಾನವನ್ನು ತ್ವರಿತವಾಗಿ ತಲುಪಲು ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಈಗ ಹೇಳಿ ವಿಮಾನ ಹತ್ತುವ ಮೊದಲು ನಿಮ್ಮ ತೂಕ ಪರಿಶೀಲನೆ ನಡೆಸಿ ನಿಮ್ಮನ್ನು ವಿಮಾನದಲ್ಲಿ ಕೂರಿಸಿದರೆ ನಿಮಗೆ ಹೇಗೆ ಅನ್ನಿಸಲಿದೆ? ಅನೇಕ ಜನರಿಗೆ ಇದು ಕೇಳಲೂ ಕೂಡ ಅಹಿತಕರವಾಗಿರಬಹುದು, ಆದರೆ ನ್ಯೂಜಿಲೆಂಡ್‌ನ ನಾಗರಿಕ ವಿಮಾನಯಾನವು ಈ ರೀತಿಯ ಕೆಲಸಕ್ಕೆ ಕೈಹಾಕಲಿದೆ. ಈ ಕುರಿತಾದ ಮಾಧ್ಯಮ ವರದಿಗಳನ್ನು ನಂಬುವುದಾದರೆ, ಆಕ್ಲೆಂಡ್ ವಿಮಾನ ನಿಲ್ದಾಣದಿಂದ ವಿಮಾನ ಹತ್ತುವ ಎಲ್ಲಾ ಪ್ರಯಾಣಿಕರನಡೆಯಲಿದೆ. ನ್ಯೂಜಿಲೆಂಡ್‌ನ ನಾಗರಿಕ ವಿಮಾನಯಾನ ಪ್ರಾಧಿಕಾರವು ಜುಲೈ 2 ರಿಂದ ಈ ಸಮೀಕ್ಷೆ ಜಾರಿಗೊಳಿಸಬಹುದು ಎಂದು ವರದಿಯಾಗಿದೆ. ಇದನ್ನೂ ಓದಿ- ವಿಷಯ ಏನು?ನ್ಯೂಜಿಲೆಂಡ್‌ನ ನಾಗರಿಕ ವಿಮಾನಯಾನ ಇಲಾಖೆಯು ಪ್ರಯಾಣಿಕರ ತೂಕದ ದತ್ತಾಂಶವನ್ನು ಸಿದ್ಧಪಡಿಸಲು ಸಮೀಕ್ಷೆಯನ್ನು ನಡೆಸುತ್ತಿದೆ ಎಂಬುದು ಇಲ್ಲಿ ಉಲ್ಲೇಖನೀಯ, ಇದರ ಅಡಿಯಲ್ಲಿ ಕಂಪನಿಯು ತೂಕದ ಹೊರೆ ಮತ್ತು ವಿತರಣೆಯ ದತ್ತಾಂಶವನ್ನು ಸಂಗ್ರಹಿಸಲು ಬಯಸುತ್ತಿದೆ ಎಂದರ್ಥ. ಈ ಸಮೀಕ್ಷೆಗೆ ಪ್ಯಾಸೆಂಜರ್ ಲೋಡ್ ಸಮೀಕ್ಷೆ ಎಂದು ಹೆಸರಿಸಲಾಗಿದೆ. ಈ ದತ್ತಾಂಶದ ಸಹಾಯದಿಂದ ಪೈಲಟ್‌ಗೆ ವಿಮಾನವನ್ನು ಭೂಸ್ಪರ್ಶಿಸಲು ಸಹಾಯ ಮಾಡಲಿದೆ ಎಂದು ಇಲಾಖೆ ಹೇಳಿದೆ. ಡಿಜಿಟಲ್ ಸ್ಕೇಲ್ ಸಹಾಯದಿಂದ ವಿಮಾನ ಹತ್ತುವ ಮೊದಲು ಪ್ರಯಾಣಿಕರು ತಮ್ಮ ತೂಕವನ್ನು ತೂಗಬೇಕಾಗುತ್ತದೆ. ಈ ದತ್ತಾಂಶವನ್ನು ಅತ್ಯಂತ ಗೌಪ್ಯವಾಗಿರಿಸಲಾಗುವುದು ಎಂದು ಹೇಳಲಾಗಿದೆ, ಇದನ್ನು ವಿಮಾನ ನಿಲ್ದಾಣದಲ್ಲಿ ಎಲ್ಲಿಯೂ ಕೂಡ ಬಿತ್ತರಿಸಲಾಗುವುದಿಲ್ಲ ಎಂದೂ ಕೂಡ ಹೇಳಲಾಗಿದೆ. ಇದನ್ನೂ ಓದಿ- ತೂಕವು ಸ್ವಯಂಪ್ರೇರಿತವಾಗಿರುತ್ತದೆನ್ಯೂಜಿಲೆಂಡ್‌ನ ಆರೋಗ್ಯ ವರದಿಯು ಅಲ್ಲಿನ ಜನರು ಹೆಚ್ಚು ಬೊಜ್ಜು ಹೊಂದುತ್ತಿದ್ದಾರೆ ಎಂದು ಹೇಳಿದೆ. ದೇಶದಲ್ಲಿ ಸ್ಥೂಲಕಾಯದ ಪ್ರಮಾಣವು ಸುಮಾರು ಶೇ. 34 ಕ್ಕೆ ತಲುಪಿದೆ ಎನ್ನಲಾಗಿದೆ. ಆದಾಗ್ಯೂ, ವಿಮಾನ ನಿಲ್ದಾಣದಲ್ಲಿ ತೂಕವು ಸ್ವಯಂಪ್ರೇರಿತವಾಗಿರುತ್ತದೆ. ಇದು ಸಂಪೂರ್ಣ ಸುರಕ್ಷಿತವಾಗಿರಲಿದ್ದು, ತೂಕ ಮಾಡಿಸಿಕೊಳ್ಳಲು ಯಾರೂ ಭಯಪಡಬೇಕಾಗಿಲ್ಲ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...