ಲಗೇಜ್ ಚಾರ್ಜ್‌ ತಪ್ಪಿಸಲೆಂದು 6 ಬಟ್ಟೆ ಧರಿಸಿ ಏರ್‌ಪೋರ್ಟ್‌ಗೆ ಬಂದ ಮಹಿಳೆ : ಮಹಿಳಾ ಪ್ರಯಾಣಿಕರೊಬ್ಬರು ಮೆಲ್ಬೋರ್ನ್‌ನಿಂದ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದರು. ತನ್ನ ಲಗೇಜ್ ಗರಿಷ್ಠ ಮಿತಿಯನ್ನು ಮೀರಿದೆ ಎಂದು ಅವರು ಭಾವಿಸಿದಾಗ, ಹೆಚ್ಚುವರಿ ಚಾರ್ಜ್‌ ತಪ್ಪಿಸಲು 6 ಬಟ್ಟೆಗಳನ್ನು ಧರಿಸಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. :ಹೆಚ್ಚುವರಿ ಲಗೇಜ್ ಶುಲ್ಕ ಪಾವತಿಸುವುದನ್ನು ತಪ್ಪಿಸಲು ವಿಮಾನಯಾನ ಪ್ರಯಾಣಿಕರೊಬ್ಬರು ಕೆಜಿಗಟ್ಟಲೇ ಬಟ್ಟೆ ಧರಿಸಿ ಬಂದಿದ್ದಾರೆ. ತನ್ನ ಸೂಟ್‌ಕೇಸ್‌ನ ತೂಕವನ್ನು ಕಡಿಮೆ ಮಾಡಲು, ಅವರು ಅದರಲ್ಲಿ ಪ್ಯಾಕ್ ಮಾಡಿದ ಹಲವಾರು ಬಟ್ಟೆಗಳನ್ನು ಹಾಕಿದರು. ಆದರೂ ತೂಕ ಹೆಚ್ಚಾಗಿದೆ. ಇದರಿಂದ ಲಗೇಜ್‌ ತೂಕ ಕಡಿಮೆ ಮಾಡಿ ಹೆಚ್ಚುವರಿ ಲಗೇಜ್‌ ಚಾರ್ಜ್‌ ತಪ್ಪಿಸಲು ಈ ಮಹಿಳೆ ಭಾರೀ ಉಪಾಯ ಮಾಡಿದ್ದಾರೆ. ಇದನ್ನೂ ಓದಿ : ಆಡ್ರಿಯಾನಾ ಒಕಾಂಪೊ ಮೆಲ್ಬೋರ್ನ್‌ನಿಂದ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿರುವ ತನ್ನ ಮನೆಗೆ ಜೆಟ್‌ಸ್ಟಾರ್ ಏರ್‌ಲೈನ್‌ನಲ್ಲಿ ಪ್ರಯಾಣಿಸುತ್ತಿದ್ದರು. ತನ್ನ ಕ್ಯಾರಿ-ಆನ್ ಲಗೇಜ್ ಏಳು ಕಿಲೋಗಳ ಗರಿಷ್ಠ ತೂಕದ ಮಿತಿಯನ್ನು ಮೀರಿದೆ ಎಂದು ತಿಳಿದ ನಂತರ, ಹೆಚ್ಚುವರಿ ಲಗೇಜ್ ಶುಲ್ಕವನ್ನು ತಪ್ಪಿಸಲು ತನ್ನ ಎಲ್ಲಾ ಹೆಚ್ಚುವರಿ ಬಟ್ಟೆಗಳನ್ನು ಒಂದರ ಮೇಲೊಂದರಂತೆ ತೊಟ್ಟಿದ್ದಾರೆ. ಟಿ-ಶರ್ಟ್‌, ಜಾಕೆಟ್‌, ಪ್ಯಾಂಟ್‌ ಸೇರಿದಂತೆ ಸುಮಾರು ಆರು ಕೆಜಿ ಬಟ್ಟೆಗಳನ್ನು ರಾಶಿ ಹಾಕಿದ್ದಾರೆ. ಸೌತ್ ವೆಸ್ಟ್ ನ್ಯೂಸ್ ಸೇವೆಯೊಂದಿಗೆ ಮಾತನಾಡಿದ ಒಕಾಂಪೊ, ಅಷ್ಟೊಂದು ಬಟ್ಟೆ ತೊಟ್ಟು ಆಕೆ ಕರಡಿಯ ಹಾಗೆ ಕಾಣುತ್ತಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ : ಒಕಾಂಪೋ, ಬ್ಯಾಗ್‌ನ ತೂಕವನ್ನು ಕಳೆದುಕೊಳ್ಳುವ ಏಕೈಕ ಮಾರ್ಗವೆಂದರೆ ಬ್ಯಾಗ್‌ನ ಬಟ್ಟೆಗಳನ್ನು ನಮ್ಮ ಮೇಲೆ ಹಾಕಿಕೊಳ್ಳುವುದು. ನಾವು ನಮ್ಮ ಜಾಕೆಟ್‌ಗಳು ಮತ್ತು ಕೋಟ್‌ಗಳನ್ನು ಧರಿಸಿದೆವು. ಇಷ್ಟೆಲ್ಲ ಸಾಹಸದ ಬಳಿಕವೂ ಅವರ ಲಗೇಜ್‌ ತೂಕ ಮಿತಿಗಿಂತ ಒಂದು ಕೆಜಿ ಹೆಚ್ಚಿತ್ತು. ಹೀಗಾಗಿ 65 ಡಾಲರ್ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. 2019 ರಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ, ಫಿಲಿಪಿನೋ ವಿಮಾನಯಾನ ಪ್ರಯಾಣಿಕರೊಬ್ಬರು ತಮ್ಮ ಬ್ಯಾಗ್‌ನ ತೂಕವನ್ನು 6.5 ಕೆಜಿಗೆ ತರಲು ಸುಮಾರು 2.5 ಕೆಜಿ ಬಟ್ಟೆಗಳನ್ನು ಧರಿಸಿದ್ದರು. ಅವರು ಫೇಸ್‌ಬುಕ್‌ನಲ್ಲಿ ಆ ಫೋಟೋವನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು ಸುಮಾರು ಐದು ಜೋಡಿ ಪ್ಯಾಂಟ್‌ಗಳು ಮತ್ತು ಹಲವಾರು ಟಿ-ಶರ್ಟ್‌ಗಳು ಮತ್ತು ಜಾಕೆಟ್‌ಗಳನ್ನು ಧರಿಸಿದ್ದರು. ಇದನ್ನೂ ಓದಿ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...