: 550 ಮಕ್ಕಳಿಗೆ ಈತ ತಂದೆ! ಹಲವು ಬಾರಿ ಸ್ಪರ್ಮ್ ಡೊನೇಟ್ ಮಾಡಿದ ಈತನಿಗೆ ಈಗ ಕೋರ್ಟ್ ಹೇಳಿದ್ದೇನು ಗೊತ್ತಾ? : ಆತನ ಕುರಿತು ಲಿಖಿತ ತೀರ್ಪು ಪ್ರಕಟಿಸಿದ ನ್ಯಾಯಾಲಯ ಹಲವಾರು ಡಚ್ ಫರ್ಟಿಲಿಟಿ ಕ್ಲಿನಿಕ್ ಗಳು ಮತ್ತು ಡ್ಯಾನಿಷ್ ಕ್ಲಿನಿಕ್ ಗಳಿಗೆ ಆತ ತನ್ನ ವೀರ್ಯವನ್ನು ನೀಡಿದ್ದಾನೆ ಎನ್ನಲಾಗಿದೆ. ಇದಲ್ಲದೆ ಜಾಹೀರಾತುಗಳು ಮತ್ತು ಆನ್ಲೈನ್ ಮಾಧ್ಯಮಗಳ ಮೂಲಕ ಈತ ಹಲವರಿಗೆ ವೀರ್ಯ ಡೊನೇಟ್ ಮಾಡಿದ್ದಾನೆ ಎಂದು ಹೇಳಿದೆ. ಇದೀಗ ನ್ಯಾಯಾಲಯ ಆತನ ವೀರ್ಯದಾನದ ಮೇಲೆ ನಿಷೇಧ ವಿಧಿಸಿದ್ದು, ವೀರ್ಯ ದಾನ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಆದೇಶಿಸಿದೆ. :ವೀರ್ಯ ದಾನ ಮಾಡುವುದರ ಕುರಿತು ಹಲವಾರು ಕಡೆಗಳಲ್ಲಿ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಎಲ್ಲಾ ತಜ್ಞರು ಅದರ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಹೇಳುತ್ತಲೇ ಇರುತ್ತಾರೆ. ಏತನ್ಮಧ್ಯೆ, ಇತ್ತೀಚೆಗೆ ನೆದರ್ಲ್ಯಾಂಡ್ಸ್ನ ವೀರ್ಯ ದಾನಿಯೊಬ್ಬ ತನ್ನ ಜೀವನದಲ್ಲಿ 550 ಕ್ಕೂ ಹೆಚ್ಚು ಬಾರಿ ವೀರ್ಯವನ್ನು ದಾನ ಮಾಡಿದ ಪ್ರಕರಣವು ಬೆಳಕಿಗೆ ಬಂದಿದೆ. ಇದಕ್ಕಿಂತ ಹೆಚ್ಚು ವೀರ್ಯ ದಾನ ಮಾಡುವಂತಿಲ್ಲ ಎಂದು ಇತ್ತೀಚೆಗೆ ನ್ಯಾಯಾಲಯ ಆತನ ಮೇಲೆ ನಿಷೇಧ ವಿಧಿಸಿದೆ. ನ್ಯಾಯಾಲಯದ ಈ ಆದೇಶದ ನಂತರ, ಈ ವಿಷಯ ಇದೀಗ ವಿಶ್ವಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ವೀರ್ಯ ದಾನ ಮಾಡದಂತೆ ನಿಷೇಧವಾಸ್ತವದಲ್ಲಿ, ಈ ಘಟನೆ ನೆದರ್ಲ್ಯಾಂಡ್ಸ್ನಿಂದ ವರದಿಯಾಗಿದೆ. ನೆದರ್ಲ್ಯಾಂಡ್ ನ ಈಹೆಸರು ಜೋನಾಥನ್ ಮೇಯರ್. ಅಂತರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ನೆದರ್ಲೆಂಡ್ಸ್‌ನ ವಿಶೇಷ ನ್ಯಾಯಾಲಯವು 41 ವರ್ಷದ ಜೊನಾಥನ್ ಮೇಯರ್ ಅವನ ಮೇಲೆ ವೀರ್ಯ ದಾನ ಮಾಡದಂತೆ ನಿಷೇಧ ವಿಧಿಸಿದೆ. ಇನ್ನು ಮುಂದೆ ಅವರು ಹೆಚ್ಚಿನ ವೀರ್ಯವನ್ನು ದಾನ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಜೊನಾಥನ್ ಒಬ್ಬ ವೀರ್ಯ ದಾನಿ. ಅವರು ನೆದರ್ಲ್ಯಾಂಡ್ಸ್ನ ಅನೇಕ ಚಿಕಿತ್ಸಾಲಯಗಳಲ್ಲಿ ವೀರ್ಯವನ್ನು ದಾನ ಮಾಡುತ್ತಾನೆ ಮತ್ತು ಸಾಕಷ್ಟು ಹಣವನ್ನು ಗಳಿಸುತ್ತಾರೆ. ಈಗ ಇದನ್ನೆಲ್ಲ ಮಾಡದಂತೆ ಆತನ ಮೇಲೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ- ಸುಳ್ಳು ಒಪ್ಪಂದನೆದರ್ಲ್ಯಾಂಡ್ಸ್ ನಿಯಮಗಳ ಪ್ರಕಾರ ವೀರ್ಯ ದಾನಿಗಳು ಗರಿಷ್ಠ 25 ಮಕ್ಕಳಿಗೆ ಜನ್ಮ ನೀಡಲು 12 ತಾಯಂದಿರಿಗೆ ವೀರ್ಯವನ್ನು ದಾನ ಮಾಡಬಹುದು, ಇದೇ ಕಾರಣದಿಂದ ಆತನ ಮೇಲೆ ಈ ನಿಷೇಧ ವಿಧಿಸಲಾಗಿದೆ. ಆತ ಈ ಮಿತಿಯನ್ನು ಈಗಾಗಲೇ ದಾತಿದ್ದಾನೆ. ಪೋಷಕರಿಗೆ ಸುಳ್ಳು ಹೇಳುವ ಮೂಲಕ ಆತ ಹೆಚ್ಚಿನ ಪ್ರಮಾಣದಲ್ಲಿ ವೀರ್ಯವನ್ನು ದಾನ ಮಾಡುವ ಒಪ್ಪಂದವನ್ನು ಆತ ಮಾಡಿಕೊಳ್ಳುತ್ತಿದ್ದ. ಇದೀಗ ಅದರ ಮೇಲೂ ಕೂಡ ನಿಷೇಧವಿಧಿಸಲಾಗಿದೆ. ಇದನ್ನೂ ಓದಿ- ಈ ವ್ಯಕ್ತಿ 550ಕ್ಕೂ ಹೆಚ್ಚು ಬಾರಿ ವೀರ್ಯ ದಾನ ಮಾಡಿದ್ದಾನೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ತಿಳಿಸಲಾಗಿದೆ. ವಿಷಯ ಮುನ್ನೆಲೆಗೆ ಬಂದ ನಂತರ, ಈ ವ್ಯಕ್ತಿ ನಿಜವಾಗಿಯೂ 550 ಮಕ್ಕಳ ತಂದೆಯಾಗಿದ್ದಾನೆಯೇ ಎಂಬ ಚರ್ಚೆಯೂ ಇದೀಗ ಹುಟ್ಟಿಕೊಂಡಿದೆ. ಪ್ರತ್ಯಕ್ಷವಾಗಿ ಅಲ್ಲ, ಪರೋಕ್ಷವಾಗಿ ಅವರೇ ಆ ಮಕ್ಕಳ ತಂದೆ ಎಂಬುದು ಇದರರ್ಥ! ಅದೇನೇ ಇದ್ದರೂ ಪ್ರಸ್ತುತ ಆತನನ್ನು ಹಾಗೆ ಮಾಡದಂತೆ ನ್ಯಾಯಾಲಯ ತಡೆದಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...