"ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾದವರು"- ಭಾರತ ತೊರೆಯುವ ವದಂತಿ ಮಧ್ಯೆಯೇ ಕ್ರಿಕೆಟ್‌ ದಿಗ್ಗಜ ಸ್ಟೀವ್ ಸ್ಮಿತ್ ಶಾಕಿಂಗ್‌ ಹೇಳಿಕೆ! : ಫ್ಯಾಬ್-4ರಲ್ಲಿ ವಿರಾಟ್ ಕೊಹ್ಲಿಯನ್ನು ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಏಕದಿನ ಮಾದರಿಯಲ್ಲಿ ವಿರಾಟ್ ಕೊಹ್ಲಿ ಹತ್ತಿರ ಯಾರೂ ಬರಲು ಸಾಧ್ಯವಿಲ್ಲವೇನೋ... ಏಕದಿನ ಮಾದರಿಯಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆ ಶ್ಲಾಘನೀಯವಾಗಿದೆ. :ಪ್ರಸ್ತುತ ಕ್ರಿಕೆಟ್‌ ಜಗತ್ತಿನಲ್ಲಿ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್ ಮತ್ತು ಜೋ ರೂಟ್ ಅವರನ್ನು ಫ್ಯಾಬ್-4 ಎಂದು ಕರೆಯಲಾಗುತ್ತದೆ. ಈ ನಾಲ್ವರು ಬ್ಯಾಟ್ಸ್‌ʼಮನ್‌ʼಗಳು ಮೈದಾನಕ್ಕಿಳಿದರೆ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟೋದು ಖಂಡಿತ. ಇದನ್ನೂ ಓದಿ: ಈ ಫ್ಯಾಬ್-4ರಲ್ಲಿ ವಿರಾಟ್ ಕೊಹ್ಲಿಯನ್ನು ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಏಕದಿನ ಮಾದರಿಯಲ್ಲಿ ವಿರಾಟ್ ಕೊಹ್ಲಿ ಹತ್ತಿರ ಯಾರೂ ಬರಲು ಸಾಧ್ಯವಿಲ್ಲವೇನೋ... ಏಕದಿನ ಮಾದರಿಯಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆ ಶ್ಲಾಘನೀಯವಾಗಿದೆ. ಇದೀಗ ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟ್ಸ್‌ʼಮನ್ ಸ್ಟೀವ್ ಸ್ಮಿತ್ ವಿರಾಟ್ ಕೊಹ್ಲಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ವಿರಾಟ್ ಕೊಹ್ಲಿ ಬಗ್ಗೆ ಸ್ಟೀವ್ ಸ್ಮಿತ್ ಹೇಳಿದ್ದೇನು? ವಿರಾಟ್ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್, ಇದರಲ್ಲಿ ಯಾವುದೇ ಅನುಮಾನವಿಲ್ಲ. ಇದರ ಹೊರತಾಗಿ ಅವರು ಅದ್ಭುತ ವ್ಯಕ್ತಿ. ನಾವಿಬ್ಬರು ಆಗಾಗ್ಗೆ ಮೆಸೇಜ್‌ ಮಾಡಿಕೊಂಡು ಕ್ಷೇಮ ವಿಚಾರಿಸಿಕೊಳ್ಳುತ್ತೇವೆ. ಇನ್ನು ವಿರಾಟ್ ಕೊಹ್ಲಿಯ ಆಲೋಚನೆಗಳು ಮತ್ತು ಕ್ರಿಯೆಗಳು ಆಸ್ಟ್ರೇಲಿಯನ್ನರಿಗೆ ಹೋಲುತ್ತದೆ. ಮೈದಾನದಲ್ಲಿ ತೊಡಗಿಕೊಳ್ಳುವ ರೀತಿ, ಸವಾಲಿಗೆ ಸಿಲುಕುವ ಮತ್ತು ಎದುರಾಳಿಗಳನ್ನು ಎದುರಿಸುವ ರೀತಿ ಎಲ್ಲವೂ ಆಸ್ಟ್ರೇಲಿಯಾದವರಂತೆ. ಅವರು ಬಹುಶಃ ಭಾರತೀಯ ಆಟಗಾರರ ನಡುವೆ ಇರುವ ಆಸ್ಟ್ರೇಲಿಯನ್ ಎಂದು ಸ್ಮಿತ್ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...