ಇನ್ಮುಂದೆ ಯಾವತ್ತೂ ಕೂಡ ಭಾರತದ ಈ ಕ್ರೀಡಾಂಗಣಕ್ಕೆ ನಾವು ಬರಲ್ಲ: ಬಿಸಿಸಿಐ ವಿರುದ್ಧ ಅಫ್ಘನ್ ಕ್ರಿಕೆಟ್ ಮಂಡಳಿ ಶಾಕಿಂಗ್‌ ನಿರ್ಧಾರ : ಇನ್ಮುಂದೆ ಯಾವತ್ತೂ ಕೂಡ ಈ ಮೈದಾನಕ್ಕೆ ನಾವು ಬರಲು ಬಯಸುವುದಿಲ್ಲ ಎಂದು ಎಸಿಬಿ ಅಧಿಕಾರಿ ತಿಳಿಸಿದ್ದಾರೆ. ಶಹೀದ್ ವಿಜಯ್ ಸಿಂಗ್ ಪಥಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ʼನಲ್ಲಿ ಒಳಚರಂಡಿ, ಒದ್ದೆಯಾದ ಔಟ್‌ ಫೀಲ್ಡ್ ಮತ್ತು ಶೋಚನೀಯ ಸೌಲಭ್ಯಗಳ ಬಗ್ಗೆ ಎಸಿಬಿ ಅಧಿಕಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. :ಒಂದೇ ಒಂದು ಹನಿ ಮಳೆ ಬಿದ್ದಿಲ್ಲವಾದರೂ ಗ್ರೇಟರ್ ನೋಯ್ಡಾ ಸ್ಟೇಡಿಯಂನಲ್ಲಿ ನಡೆಯಬೇಕಾಗಿದ್ದ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದ ಮೊದಲ ದಿನವನ್ನು ರದ್ದುಗೊಳಿಸಲಾಗಿದೆ. ಅಷ್ಟೇ ಅಲ್ಲದೆ, ಈ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸಿದ್ಧತೆಗಳ ಬಗ್ಗೆ ಅಫ್ಘಾನಿಸ್ತಾನ ತಂಡ ಮತ್ತು ಅಧಿಕಾರಿಗಳು ಅತೃಪ್ತರಾಗಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಯಾವತ್ತೂ ಕೂಡ ಈ ಮೈದಾನಕ್ಕೆ ನಾವು ಬರಲು ಬಯಸುವುದಿಲ್ಲ ಎಂದು ಎಸಿಬಿ ಅಧಿಕಾರಿ ತಿಳಿಸಿದ್ದಾರೆ. ಶಹೀದ್ ವಿಜಯ್ ಸಿಂಗ್ ಪಥಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ʼನಲ್ಲಿ ಒಳಚರಂಡಿ, ಒದ್ದೆಯಾದ ಔಟ್‌ ಫೀಲ್ಡ್ ಮತ್ತು ಶೋಚನೀಯ ಸೌಲಭ್ಯಗಳ ಬಗ್ಗೆ ಎಸಿಬಿ ಅಧಿಕಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಅನೇಕ ಗೊಂದಲಗಳಿವೆ ಮತ್ತು ಆಟಗಾರರು ಇಲ್ಲಿ ಸೌಲಭ್ಯಗಳ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಹೇಳಿದ್ದಾರೆ ಸಾಮಾನ್ಯವಾಗಿ ಮಳೆಯ ನಂತರ ಪಿಚ್ ಒದ್ದೆಯಾಗುತ್ತದೆ. ಆದರೆ ಗ್ರೇಟರ್ ನೋಯ್ಡಾ ಸ್ಟೇಡಿಯಂ ಮೈದಾನವು ಹಲವು ಸ್ಥಳಗಳಲ್ಲಿ ತೇವವನ್ನು ಹೊಂದಿದೆ. ವರದಿಯ ಪ್ರಕಾರ, ಅಂಪೈರ್‌‌ʼಗಳು ದಿನವಿಡೀ ಆರು ಬಾರಿ ಮೈದಾನವನ್ನು ಪರಿಶೀಲಿಸಿದ್ದಾರೆ. ಜೊತೆಗೆ ನಾಯಕ ಟಿಮ್ ಸೌಥಿ, ಆಲ್ ರೌಂಡರ್ ಮಿಚೆಲ್ ಸ್ಯಾಂಟ್ನರ್ ಮತ್ತು ರಚಿನ್ ರವೀಂದ್ರ ಸೇರಿದಂತೆ ಹಲವಾರು ನ್ಯೂಜಿಲೆಂಡ್ ಆಟಗಾರರು ಮೈದಾನವನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಗ್ರೇಟರ್ ನೋಯ್ಡಾ ಸ್ಟೇಡಿಯಂನಲ್ಲಿ ಬಿಸಿಸಿಐ ಆಶ್ರಯದಲ್ಲಿ ಯಾವುದೇ ಪಂದ್ಯಗಳು ನಡೆದಿಲ್ಲ. 2016ರಲ್ಲಿ ಕೊನೆಯ ಬಾರಿ ಈ ಮೈದಾನದಲ್ಲಿ ದುಲೀಪ್ ಟ್ರೋಫಿ ಪಂದ್ಯ ನಡೆದಿತ್ತು. ಕಾರ್ಪೊರೇಟ್ ಪಂದ್ಯಗಳ ಸಮಯದಲ್ಲಿ ಮ್ಯಾಚ್ ಫಿಕ್ಸಿಂಗ್ ಕಾರಣ ಸೆಪ್ಟೆಂಬರ್ 2017 ರಲ್ಲಿ ಇದನ್ನು ನಿಷೇಧಿಸಿತು. ಅಂದಿನಿಂದ ಇಲ್ಲಿ ಬಿಸಿಸಿಐ ಸಂಬಂಧಿತ ಪಂದ್ಯಗಳು ನಡೆದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...