ಸಚಿನ್ ತೆಂಡೂಲ್ಕರ್ ಪುತ್ರನಿಗೆ 'ಕಲ್ಲಿದ್ದಲು' ಎಂದ ಯುವಿ ತಂದೆ ಯೋಗರಾಜ್! : ಯೋಗರಾಜ್ ಸಿಂಗ್ರ ಬಳಿ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಸ್ವಲ್ಪ ಸಮಯದವರೆಗೆ ತರಬೇತಿ ಪಡೆದುಕೊಂಡಿದ್ದರು. ಸಚಿನ್‌ ಪುತ್ರನ ಕ್ರಿಕೆಟ್‌ ಕರಿಯರ್‌ ಬಗ್ಗೆ ಕೇಳಿದ ಪ್ರಶ್ನೆಗೆ ಯೋಗರಾಜ್‌ ಈ ರೀತಿ ಹೇಳಿದ್ದಾರೆ. :ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಆಗಾಗ ಸುದ್ದಿಯಾಗುವ ಟೀಂ ಇಂಡಿಯಾದ ಆಲ್​ರೌಂಡರ್​ ಯುವರಾಜ್​​ ಸಿಂಗ್​ ಅವರ ತಂದೆ ಯೋಗರಾಜ್​ ಸಿಂಗ್, ಇದೀಗ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಸಂದರ್ಶನವೊಂದರಲ್ಲಿನಿಮ್ಮ ಬಳಿ ತರಬೇತಿಗೆ ಬಂದಿದ್ದರು. ಅವರ ಭವಿಷ್ಯದ ಬಗ್ಗೆ ಏನು ಹೇಳುತ್ತೀರಿ? ಅಂತಾ ಯೋಗರಾಜ್​ ಸಿಂಗ್‌ಗೆ ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿರುವ ಅವರು, ʼನೀವು ಕಲ್ಲಿದ್ದಲು ಗಣಿಯಲ್ಲಿ ವಜ್ರವನ್ನು ನೋಡಿದ್ದೀರಾ? ಅವನು ಅಂದರೆ ಅರ್ಜುನ್ ಕೇವಲ ಕಲ್ಲಿದ್ದಲು. ನೀವು ಅದನ್ನು ಕಲ್ಲಿದ್ದಲು ಗಣಿಯಿಂದ ಹೊರತೆಗೆದರೆ ಅದು ಕೇವಲ ಕಲ್ಲು. ಅದನ್ನು ಶಿಲ್ಪಿಯ ಕೈಗೆ ಕೊಟ್ಟರೆ ಬೆಲೆ ಕಟ್ಟಲಾಗದ ಕೋಹಿನೂರಾಗುತ್ತದೆʼ ಎಂದು ಹೇಳಿದ್ದಾರೆ. ಇದನ್ನೂ ಓದಿ: 😭 — 🇮🇳 (@1no_aalsi_) ಇದಲ್ಲದೆ ʼವಜ್ರವು ಅದರ ಮೌಲ್ಯವನ್ನು ತಿಳಿದಿಲ್ಲದವರಿಗೆ ತಲುಪಿದರೆ, ಅವರು ಅದನ್ನು ನಾಶಪಡಿಸುತ್ತಾರೆ. ಯೋಗರಾಜ್ ಸಿಂಗ್ ಮಹಾನ್ ಕುಶಲಕರ್ಮಿ ಅಂತಾ ನಾನು ಹೇಳುವುದಿಲ್ಲ. ನನ್ನ ತಂದೆಯ ಕೈಯಲ್ಲಿ ಮ್ಯಾಜಿಕ್ ಇದೆ ಎಂದು ಸ್ವತಃ ಯುವರಾಜ್ ಸಿಂಗ್ ಹೇಳುತ್ತಾನೆʼ ಅಂತಾ ತಿಳಿಸಿದ್ದಾರೆ. ಯೋಗರಾಜ್ ಸಿಂಗ್​​ರ ಬಳಿ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಸ್ವಲ್ಪ ಸಮಯದವರೆಗೆ ತರಬೇತಿ ಪಡೆದುಕೊಂಡಿದ್ದರು. ಸಚಿನ್‌ ಪುತ್ರನ ಕ್ರಿಕೆಟ್‌ ಕರಿಯರ್‌ ಬಗ್ಗೆ ಕೇಳಿದ ಪ್ರಶ್ನೆಗೆ ಯೋಗರಾಜ್‌ ಈ ರೀತಿ ಹೇಳಿದ್ದಾರೆ. ʼಈ ಹಿಂದೆ ಯುವರಾಜ್​ ಸಿಂಗ್ ನನ್ನನ್ನು ನಿಂದಿಸಿದ್ದರು. ಹಿಟ್ಲರ್, ಡ್ರ್ಯಾಗನ್ ಸಿಂಗ್, ನಾನು ನನ್ನ ತಂದೆಯನ್ನು ದ್ವೇಷಿಸುತ್ತೇನೆ ಎಂದಿದ್ದರು. ನನ್ನ ಮನೆಯಲ್ಲಿ ಎಲ್ಲರೂ ನನ್ನನ್ನು ದ್ವೇಷಿಸುತ್ತಿದ್ದರು. ನನ್ನ ಸಂಬಂಧಿಕರು ನಾನು ತಂದೆಯಾಗಬಾರದಿತ್ತು ಎಂದಿದ್ದರು. ಯುವರಾಜ್​ ಸಿಂಗ್​ ಬಳಿ ಅಷ್ಟು ಕಠಿಣವಾಗಿ ಇರುತ್ತಿದ್ದೆ. ಯುವರಾಜ್​ ಸಿಂಗ್​ ನಾನು ಹೇಳಿದ ಮಾರ್ಗ ಅನುಸರಿಸಿದರು. ದೇವರ ದಯೆಯಿಂದ ಯುವರಾಜ್​ ಸಿಂಗ್​ ನಿಮಗೆ ಸಿಕ್ಕಿದ್ದಾರೆʼ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೆಲ ದಿನಗಳ ಹಿಂದೆ ಯೋಗರಾಜ್​ ಸಿಂಗ್​, ಭಾರತೀಯ ದಂತಕಥೆಗಳಾದ ಕಪಿಲ್ ದೇವ್ ಮತ್ತು ಎಂ.ಎಸ್.ಧೋನಿ ಬಗ್ಗೆ ಹೇಳಿಕೆ ನೀಡಿ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದರು. ಯುವರಾಜ್ ಸಿಂಗ್ ಅವರ ವೃತ್ತಿಜೀವನದ ಅಂತ್ಯದ ಹಿಂದೆ ಧೋನಿ ಇದ್ದಾರೆಂದು ಅವರು ಆರೋಪಿಸಿದ್ದರು. ಇದನ್ನು ನಾನು ಧೋನಿಗೆ ನೇರವಾಗಿಯೇ ಹೇಳಿದ್ದೇನೆ. ನಾನು ಎಂದಿಗೂ ಅವನನ್ನು ಕ್ಷಮಿಸುವುದಿಲ್ಲವೆಂದು ಯೋಗರಾಜ್‌ ಆಕ್ರೋಶ ವ್ಯಕ್ತಪಡಿಸಿದ್ದರು. ಇದಲ್ಲದೆ ಕಪಿಲ್​​ ದೇವ್​​ ಕುರಿತು ಮಾತನಾಡಿ, ʼನನ್ನ ಮಗಒಟ್ಟು 13 ಟ್ರೋಫಿಗಳನ್ನು ಗೆದ್ದಿದ್ದಾರೆ. ಆದರೆ ನಮ್ಮ ಕಾಲದ ಶ್ರೇಷ್ಠ ನಾಯಕ ಕಪಿಲ್ ದೇವ್ ಕೇವಲ ಒಂದೇ ಒಂದು ಟ್ರೋಫಿ ಗೆದ್ದಿದ್ದಾರೆ. 1983ರಲ್ಲಿ ಭಾರತ ಗೆದ್ದ ಮೊದಲ ವಿಶ್ವಕಪ್​ನ ಟ್ರೋಫಿ ಗೆದ್ದಿದ್ದಷ್ಟೇ ಅವರ ಸಾಧನೆʼ ಅಂತಾ ಟೀಕಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...