ಒಬ್ರಲ್ಲ, ಇಬ್ರಲ್ಲ... ಈ ನಾಲ್ವರು ಸುರಸುಂದರಿಯರ ಜೊತೆ ಶುಭ್ಮನ್‌ ಗಿಲ್‌ ಡೇಟಿಂಗ್!! ಗಿಲ್‌ ದಿಲ್‌ ಗೆದ್ದ ಆ ಮಣಿಯರು ಯಾರು? : ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ಮಾಡಿರುವ ಗಿಲ್ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲದೆ ಪ್ರೇಮನಗರಿಯಲ್ಲೂ ಬಹಳ ಫೇಮಸ್. ಅವರ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಶುಭ್ಮನ್ ಹೆಸರು ಅನೇಕ ಯುವತಿಯರೊಂದಿಗೆ ತಳುಕು ಹಾಕುತ್ತಿರುವುದು ಆಗಾಗ್ಗೆ ಗಮನಿಸಬೇಕಾದ ಸಂಗತಿ. ಅದರಲ್ಲಿ ನಾಲ್ವರು ಯುವತಿಯರ ಬಗ್ಗೆ ಮಾಹಿತಿ ನೀಡಲಿದ್ದೇವೆ : ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಇಂದು 24 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಟೀಂ ಇಂಡಿಯಾದ 'ಪ್ರಿನ್ಸ್' ಎಂದೇ ಕರೆಸಿಕೊಳ್ಳುವ ಶುಭ್‌ಮನ್ ಕಡಿಮೆ ಸಮಯದಲ್ಲಿ ತಮ್ಮ ಸ್ಟೈಲಿಶ್ ಬ್ಯಾಟಿಂಗ್‌ʼನಿಂದ ಫೇಮಸ್ ಆದವರು. ಭಾರತ ತಂಡದ ಪರ 25 ಟೆಸ್ಟ್ ಪಂದ್ಯಗಳಲ್ಲಿ 35.5 ಸರಾಸರಿಯಲ್ಲಿ 1492 ರನ್ ಗಳಿಸಿದ್ದಾರೆ. 47 ಏಕದಿನ ಪಂದ್ಯಗಳಲ್ಲಿ 2328 ರನ್ ಗಳಿಸಿದ್ದಾರೆ. ಅವರ ಸರಾಸರಿ 58.1. ಇನ್ನು 21 ಅಂತರಾಷ್ಟ್ರೀಯ T20 ಪಂದ್ಯಗಳಲ್ಲಿ 30.4 ರ ಸರಾಸರಿಯಲ್ಲಿ 587 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ಮಾಡಿರುವ ಗಿಲ್ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲದೆ ಪ್ರೇಮನಗರಿಯಲ್ಲೂ ಬಹಳ ಫೇಮಸ್. ಅವರ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಶುಭ್ಮನ್ ಹೆಸರು ಅನೇಕ ಯುವತಿಯರೊಂದಿಗೆ ತಳುಕು ಹಾಕುತ್ತಿರುವುದು ಆಗಾಗ್ಗೆ ಗಮನಿಸಬೇಕಾದ ಸಂಗತಿ. ಅದರಲ್ಲಿ ನಾಲ್ವರು ಯುವತಿಯರ ಬಗ್ಗೆ ಮಾಹಿತಿ ನೀಡಲಿದ್ದೇವೆ ರಿದ್ಧಿಮಾ ಪಂಡಿತ್: ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಅವರ ಹೆಸರು ಇತ್ತೀಚೆಗೆ ಟಿವಿ ನಟಿ ರಿದ್ಧಿಮಾ ಪಂಡಿತ್‌ ಜೊತೆ ತಳುಕು ಹಾಕಿತ್ತು. ಮದುವೆಯ ವದಂತಿಗಳು ಕೂಡ ಹುಟ್ಟಿಕೊಂಡವು. ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ನಂತರ ರಿದ್ಧಿಮಾ ಪಂಡಿತ್ ಈ ಬಗ್ಗೆ ಸ್ಪಷ್ಟನೆ ನೀಡಿ, ಸುದ್ದಿಯಲ್ಲಿ ಅಲ್ಲಗಳೆದಿದ್ದರು. ಸಾರಾ ಅಲಿ ಖಾನ್:ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಪುತ್ರಿ ಸಾರಾ ಅಲಿ ಖಾನ್ ಜೊತೆಗೆ ಶುಭ್‌ಮನ್ ಗಿಲ್ ಅವರ ಹೆಸರು ಕೂಡ ಸೇರಿಕೊಂಡಿದೆ. ಇಬ್ಬರೂ ಒಟ್ಟಿಗೆ ರೆಸ್ಟೋರೆಂಟ್‌ʼನಲ್ಲಿ ಊಟ ಮಾಡುತ್ತಿರುವುದು ಕಂಡುಬಂದಿತ್ತು. ಅವರಿಬ್ಬರೂ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಇಬ್ಬರೂ ಕೆಲವು ದಿನಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಆದರೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಮಾರಿಯಾ ಅರೋಯೋಗ್‌:ಮಾಧ್ಯಮ ವರದಿಗಳ ಪ್ರಕಾರ, ಸ್ಪೇನ್‌ʼನ ಮಾರಿಯೋ ಅರೋಯೋಗ್‌ʼನೊಂದಿಗೆ ಶುಭಮನ್ ಗಿಲ್ ಅವರ ಸಂಬಂಧವೂ ಕೆಲವು ದಿನಗಳವರೆಗೆ ಇತ್ತು. ಸಾರಾ ತೆಂಡೂಲ್ಕರ್ ಅವರೊಂದಿಗಿನ ಸಂಬಂಧಕ್ಕೆ ವಿದಾಯ ಹೇಳಿದ ನಂತರ, ಶುಭಮಾನ್ ಮಾರಿಯಾ ಜೊತೆ ಸುತ್ತಾಡಿದ್ದರು ಎಂದು ಹೇಳಲಾಗಿದೆ. ಸದ್ಯ ಇವರಿಬ್ಬರು ಒಟ್ಟಿಗೆ ಇದ್ದಾರೋ ಇಲ್ಲವೋ ಎಂಬುದು ತಿಳಿದಿಲ್ಲ. ಇದನ್ನೂ ಓದಿ: ಸಾರಾ ತೆಂಡೂಲ್ಕರ್:ಸಾರಾ ತೆಂಡೂಲ್ಕರ್ ಮತ್ತು ಶುಭಮನ್ ಗಿಲ್ ನಡುವಿನ ಪ್ರೇಮಪುರಾಣ ಭಾರೀ ಚರ್ಚೆಯ ವಿಷಯವಾಗಿತ್ತು. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ 2020 ರಲ್ಲಿ ಐಪಿಎಲ್ ಪಂದ್ಯದ ಸಂದರ್ಭದಲ್ಲಿ ಶುಭ್‌ಮಾನ್ ಅವರನ್ನು ಹೊಗಳಿದ್ದರು. ಇದಾದ ನಂತರ ಡೇಟಿಂಗ್‌ ವದಂತಿ ಸೃಷ್ಟಿಯಾಗಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...