ಐಪಿಎಲ್‌ 2025ರಲ್ಲಿ ಈ ತಂಡದ ಹೆಡ್‌ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಅಧಿಕೃತ: ಆ ಲಕ್ಕಿ ಟೀಂ ಯಾವುದು? ರಾಜಸ್ಥಾನ್ ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ ಸಿಇಒ ಜೇಕ್ ಲುಶ್ ಮೆಕ್ರಂ ಅವರು ಈವೆಂಟ್‌ʼನಲ್ಲಿ ರಾಹುಲ್ ದ್ರಾವಿಡ್‌ʼಗೆ ತಂಡದ ಜೆರ್ಸಿಯನ್ನು ನೀಡಿದರು. ಫ್ರಾಂಚೈಸಿಯ ಅಧಿಕೃತ ಖಾತೆಯಲ್ಲಿ ದ್ರಾವಿಡ್ ಜರ್ಸಿ ತೆಗೆದುಕೊಳ್ಳುತ್ತಿರುವ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. 2025: ಟಿ20 ವಿಶ್ವಕಪ್ 2024 ರಲ್ಲಿ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿದ ರಾಹುಲ್ ದ್ರಾವಿಡ್ ಈಗ ಹೊಸ ಮಿಷನ್ ಪಡೆದಿದ್ದಾರೆ. ಐಪಿಎಲ್ 2025 ರ ಮೊದಲು, ರಾಜಸ್ಥಾನ ರಾಯಲ್ಸ್ ರಾಹುಲ್ ದ್ರಾವಿಡ್ ಅವರನ್ನು ತನ್ನ ತಂಡದ ಮುಖ್ಯ ಕೋಚ್ ಆಗಿ ಮಾಡಿಕೊಂಡಿದೆ. ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ ಸಿಇಒ ಜೇಕ್ ಲುಶ್ ಮೆಕ್ರಂ ಅವರು ಈವೆಂಟ್‌ʼನಲ್ಲಿ ರಾಹುಲ್ ದ್ರಾವಿಡ್‌ʼಗೆ ತಂಡದ ಜೆರ್ಸಿಯನ್ನು ನೀಡಿದರು. ಫ್ರಾಂಚೈಸಿಯ ಅಧಿಕೃತ ಖಾತೆಯಲ್ಲಿ ದ್ರಾವಿಡ್ ಜರ್ಸಿ ತೆಗೆದುಕೊಳ್ಳುತ್ತಿರುವ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಈ ಜವಾಬ್ದಾರಿಯನ್ನು ಹೊತ್ತುಕೊಂಡ ರಾಹುಲ್ ದ್ರಾವಿಡ್ ಮಾತನಾಡಿ, "ವಿಶ್ವಕಪ್ ನಂತರ, ಮತ್ತೊಂದು ಸವಾಲನ್ನು ತೆಗೆದುಕೊಳ್ಳಲು ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ. ರಾಯಲ್ಸ್ ನನ್ನ ಸವಾಲನ್ನು ಅನುಷ್ಠಾನಗೊಳಿಸಲು ಸೂಕ್ತ ಸ್ಥಳವಾಗಿದೆ" ಎಂದು ಹೇಳಿದರು. ಇದನ್ನೂ ಓದಿ: ಐಪಿಎಲ್ 2025 ರ ಮೆಗಾ ಹರಾಜಿಗೆ ಕೆಲವೇ ತಿಂಗಳು ಮಾತ್ರ ಉಳಿದಿವೆ. ರಾಜಸ್ಥಾನ ತಂಡ ತನ್ನ ಪಾಳಯದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಮಾಡುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...