ವಾಮಿಕಾ ಜನಿಸಿದ ಬಳಿಕ ನಮ್ಮ ಬದುಕಲ್ಲಿ ಹೀಗಾಯ್ತು... ಮಗಳ ಬಗ್ಗೆ ಅನುಷ್ಕಾ ಶರ್ಮಾ ಹೇಳಿಕೆ ವೈರಲ್ : ಇತ್ತೀಚೆಗೆಯಷ್ಟೇ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅನುಷ್ಕಾ ಪೋಷಕರಾದ ಬಳಿಕ ತಮ್ಮ ಜೀವನ ಹೇಗಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. :ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ದೇಶದ ಅತ್ಯಂತ ಪ್ರಸಿದ್ಧ ಜೋಡಿ ಎಂಬುದು ತಿಳಿದ ಸಂಗತಿ. ಅವರ ಪರಸ್ಪರ ತಿಳುವಳಿಕೆಯೇ ಅಭಿಮಾನಿಗಳು ಅವರನ್ನು ತುಂಬಾ ಪ್ರೀತಿಸಲು ಕಾರಣ. ಇನ್ನು ಅನುಷ್ಕಾ ಶರ್ಮಾ ಪೋಷಕರಾದ ನಂತರ ತನ್ನ ಜೀವನದಲ್ಲಿ ಆದ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಇತ್ತೀಚೆಗೆಯಷ್ಟೇ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅನುಷ್ಕಾ ಪೋಷಕರಾದ ಬಳಿಕ ತಮ್ಮ ಜೀವನ ಹೇಗಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ವಿರಾಟ್ ಮತ್ತು ನಾನು ತಂದೆ-ತಾಯಿಯಾಗಿ ನಮ್ಮ ಮಕ್ಕಳಿಗೆ ಎಷ್ಟು ಸಾಧ್ಯವೋ ಅಷ್ಟು ಮಾಡಲು ಪ್ರಯತ್ನಿಸುತ್ತಿದ್ದೇವೆ. ನಾವಿಬ್ಬರೂ ಅಡುಗೆ ಮಾಡಿ ಅವರಿಗೆ ಕೊಡುತ್ತೇವೆ, ನನ್ನ ತಾಯಿಯ ಸೂಚನೆಯಂತೆ ಮಕ್ಕಳಿಗೆ ಕೆಲವು ಹಳೆಯ ಕಾಲದ ಆಹಾರಗಳನ್ನು ತಯಾರಿಸಿಯೂ ಕೊಡುತ್ತಿದ್ದೇನೆ ಎಂದು ಅನುಷ್ಕಾ ಹೇಳಿದ್ದಾರೆ. ಮಕ್ಕಳ ಆಗಮನದ ನಂತರ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗಿವೆ ಎಂದು ಅನುಷ್ಕಾ ಹೇಳಿದ್ದಾರೆ. "ನಾವು ಹೇಗೆ ಬದುಕುತ್ತೇವೆ ಎಂಬುದನ್ನು ಮಕ್ಕಳು ಕಲಿಯುತ್ತಾರೆ. ಮಕ್ಕಳು ಏನು ನೋಡುತ್ತಾರೆ ಮತ್ತು ಗಮನಿಸುತ್ತಾರೆ.. ಅದನ್ನೇ ಅನುಸರಿಸುತ್ತಾರೆ. ನನ್ನ ಮಗಳು ತುಂಬಾ ಚಿಕ್ಕವಳು. ಹಾಗಾಗಿ ಆಕೆಗೆ ಈಗ ಏನನ್ನೂ ಕಲಿಸಬೇಕೆಂದು ನನಗೆ ತಿಳಿದಿಲ್ಲ. ನಾವು ನಮ್ಮ ಜೀವನವನ್ನು ಹೇಗೆ ನಡೆಸುತ್ತೇವೆ ಎಂಬುದು ಮುಖ್ಯ" ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ. ಇದನ್ನೂ ಓದಿ: ಮಕ್ಕಳು ಸ್ವಂತವಾಗಿ ಕಲಿಯಲು ಅವಕಾಶ ಮಾಡಿಕೊಡಿ ಮತ್ತು ಅಗತ್ಯವಿದ್ದಾಗ ಅವರಿಗೆ ಮೃದುವಾಗಿ ಮಾರ್ಗದರ್ಶನ ನೀಡಿ. ಪೋಷಕರು ತಮ್ಮ ಮಕ್ಕಳಿಗೆ ಮಾದರಿಯಾಗಿ ಬದುಕುವುದು ಬಹಳ ಮುಖ್ಯ ಎಂದು ಅನುಷ್ಕಾ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...