ಟಿ20 ಸ್ವರೂಪದಲ್ಲಿ ತ್ರಿಶತಕ ಬಾರಿಸಿದ ವಿಶ್ವದ ಏಕೈಕ ಕ್ರಿಕೆಟಿಗ ಯಾರು ಗೊತ್ತಾ? ಇವರು ಭಾರತದವರೇ... 39 ಸಿಕ್ಸ್‌, 14 ಬೌಂಡರಿ ಸಿಡಿಸಿದ್ದ ದಾಂಡಿಗನೀತ : ಭಾರತೀಯ ಬ್ಯಾಟ್ಸ್‌ʼಮನ್ ಮೋಹಿತ್ ಅಹ್ಲಾವತ್ 7 ಫೆಬ್ರವರಿ 2017 ರಂದು ದೆಹಲಿಯಲ್ಲಿ ನಡೆದ T20 ಕ್ರಿಕೆಟ್‌ʼನಲ್ಲಿ ತ್ರಿಶತಕ ಗಳಿಸಿದರು. ವಿಕೆಟ್ ಕೀಪರ್ ಬ್ಯಾಟ್ಸ್‌ʼಮನ್ ಮೋಹಿತ್ ಅಹ್ಲಾವತ್ 39 ಸಿಕ್ಸರ್ ಮತ್ತು 14 ಬೌಂಡರಿಗಳ ಸಹಾಯದಿಂದ ಈ ಸಾಧನೆ ಮಾಡಿದ್ದರು. :ಕ್ರಿಕೆಟ್‌ʼನಲ್ಲಿ ಯಾವ ಸಮಯದಲ್ಲಿ, ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಅದಕ್ಕೆ ತಕ್ಕ ಉದಾಹರಣೆ T20 ಕ್ರಿಕೆಟ್‌ʼನಲ್ಲಿ ತ್ರಿಶತಕ ಬಾರಿಸಿರುವುದು. ಇದು ಅಚ್ಚರಿ ಎನಿಸಿದ್ರೂ ನಿಜ. ಈ 20 ಓವರ್‌ʼಗಳ ಸ್ವರೂಪದಲ್ಲಿ, ಅಸಾಧ್ಯವಾದ ದಾಖಲೆಯನ್ನು ಸೃಷ್ಟಿ ಮಾಡಿರುವುದು ಭಾರತದ ಓರ್ವ ಆಟಗಾರ. ಇದನ್ನೂ ಓದಿ: ಭಾರತೀಯ ಬ್ಯಾಟ್ಸ್‌ʼಮನ್ ಮೋಹಿತ್ ಅಹ್ಲಾವತ್ 7 ಫೆಬ್ರವರಿ 2017 ರಂದು ದೆಹಲಿಯಲ್ಲಿ ನಡೆದ T20 ಕ್ರಿಕೆಟ್‌ʼನಲ್ಲಿ ತ್ರಿಶತಕ ಗಳಿಸಿದರು. ವಿಕೆಟ್ ಕೀಪರ್ ಬ್ಯಾಟ್ಸ್‌ʼಮನ್ ಮೋಹಿತ್ ಅಹ್ಲಾವತ್ 39 ಸಿಕ್ಸರ್ ಮತ್ತು 14 ಬೌಂಡರಿಗಳ ಸಹಾಯದಿಂದ ಈ ಸಾಧನೆ ಮಾಡಿದ್ದರು. ಅಂದು ದೆಹಲಿಯಲ್ಲಿ ಮಾವಿ ಮತ್ತು ಫ್ರೆಂಡ್ಸ್ ನಡುವೆ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಈ ಪಂದ್ಯದಲ್ಲಿ ಮಾವಿ ಇಲೆವೆನ್ ಪರ ಆಡುತ್ತಿದ್ದ ದೆಹಲಿ ಬ್ಯಾಟ್ಸ್‌ಮನ್ ಮೋಹಿತ್ ಅಹ್ಲಾವತ್ ಫ್ರೆಂಡ್ಸ್ ಇಲೆವೆನ್ ವಿರುದ್ಧ 72 ಎಸೆತಗಳಲ್ಲಿ 300 ರನ್ ಪೇರಿಸಿದ್ದರು. ಮೋಹಿತ್ ಅಹ್ಲಾವತ್ ದೆಹಲಿ ಪರ ರಣಜಿ ಪಂದ್ಯಗಳನ್ನೂ ಆಡಿದ್ದಾರೆ. ರಿಷಬ್ ಪಂತ್‌ಗಿಂತ ಮೊದಲು ದೆಹಲಿ ಪರ ರಣಜಿ ಆಡುವ ಅವಕಾಶ ಪಡೆದಿದ್ದರು. 21ನೇ ವಯಸ್ಸಿನಲ್ಲಿ ಮೋಹಿತ್ ಅಹ್ಲಾವತ್ ಟಿ20 ಕ್ರಿಕೆಟ್‌ʼನಲ್ಲಿ ತ್ರಿಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಇದನ್ನೂ ಓದಿ: ದೆಹಲಿಯ ಬ್ಯಾಟ್ಸ್‌ಮನ್ ಮೋಹಿತ್ ಅಹ್ಲಾವತ್ ಈಗ ಅನಾಮಧೇಯತೆಯ ಕತ್ತಲೆಯಲ್ಲಿ ಕಳೆದುಹೋಗಿದ್ದಾರೆ. ಮೋಹಿತ್ ಅವರ ತಂದೆ ಪವನ್ ಅಹ್ಲಾವತ್ ಕೂಡ ಕ್ರಿಕೆಟ್ ಆಡಿದ್ದಾರೆ. ಆದರೆ ಆರ್ಥಿಕ ಅಡಚಣೆಯಿಂದಾಗಿ ಕ್ರಿಕೆಟ್ ಬಿಟ್ಟು ಟೆಂಪೋ ಓಡಿಸಬೇಕಾಯಿತು. ಮೋಹಿತ್ ಅಹ್ಲಾವತ್ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಕ್ರಿಕೆಟ್ ಅಕಾಡೆಮಿಯ ಪದವೀಧರರಾಗಿದ್ದಾರೆ. ಅಲ್ಲಿ ಗೌತಮ್ ಗಂಭೀರ್ ಮತ್ತು ಅಮಿತ್ ಮಿಶ್ರಾ ಅವರಂತಹ ದಿಗ್ಗಜ ಕ್ರಿಕೆಟಿಗರು ಸಹ ತರಬೇತಿ ಪಡೆದಿರುವುದು ಉಲ್ಲೇಖನೀಯ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...