4 ವರ್ಷಗಳ ಪ್ರೀತಿ... ಈಕೆ ಜೊತೆ ಪ್ರೀತಿ ನಿಜವೆಂದ ರಿಷಬ್‌ ಪಂತ್! ಟೀಂ ಇಂಡಿಯಾ ಸ್ಟಾರ್‌ ಪ್ರೀತಿಸ್ತಿರೋ ಚೆಲುವೆ ಯಾರು? : ಈ ಸಂದರ್ಭದಲ್ಲಿ ರಿಷಬ್ ಪಂತ್ ಗೆಳತಿ ಇಶಾ ನೇಗಿ ಜೊತೆಗಿನ ಸಂಬಂಧದ ಬಗ್ಗೆ ಚರ್ಚೆ ನಡೆದಿದೆ. ರಿಷಬ್ ಪಂತ್ ಗೆಳತಿ ಇಶಾ ನೇಗಿ ಎಂತೆಂಥಾ ನಟಿಯರನ್ನೂ ಮೀರಿಸುವಷ್ಟೂ ಸುಂದರವಾಗಿದ್ದಾಳೆ ಎಂಬ ಮಾತು ಕೇಳಿಬರುತ್ತಿದೆ. : ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಉಭಯ ದೇಶಗಳ ನಡುವಿನ ಟೆಸ್ಟ್ ಸರಣಿಯು ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 1 ರವರೆಗೆ ನಡೆಯಲಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಲಿದ್ದಾರೆ. ಇದನ್ನೂ ಓದಿ: ಇನ್ನು ಈ ಸಂದರ್ಭದಲ್ಲಿ ರಿಷಬ್ ಪಂತ್ ಗೆಳತಿ ಇಶಾ ನೇಗಿ ಜೊತೆಗಿನ ಸಂಬಂಧದ ಬಗ್ಗೆ ಚರ್ಚೆ ನಡೆದಿದೆ. ರಿಷಬ್ ಪಂತ್ ಗೆಳತಿ ಇಶಾ ನೇಗಿ ಎಂತೆಂಥಾ ನಟಿಯರನ್ನೂ ಮೀರಿಸುವಷ್ಟೂ ಸುಂದರವಾಗಿದ್ದಾಳೆ ಎಂಬ ಮಾತು ಕೇಳಿಬರುತ್ತಿದೆ. ಅಂದಹಾಗೆ ಇಶಾ ಡೆಹ್ರಾಡೂನ್ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಉದ್ಯಮಿ ಮತ್ತು ಇಂಟೀರಿಯರ್ ಡಿಸೈನರ್ ಆಗಿದ್ದಾರೆ. ಡೆಹ್ರಾಡೂನ್‌ʼನ ಕಾನ್ವೆಂಟ್ ಆಫ್ ಜೀಸಸ್ ಆಂಡ್ ಮೇರಿ ಮತ್ತು ನೋಯ್ಡಾದ ಅಮಿಟಿ ವಿಶ್ವವಿದ್ಯಾಲಯದಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. 2020 ರ ಆರಂಭದಲ್ಲಿ, ರಿಷಬ್ ಪಂತ್ ಇಶಾ ನೇಗಿ ಜೊತೆಗಿನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆಗ ಪಂತ್ ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಬಾಲಿವುಡ್ ನಟಿ ಊರ್ವಶಿ ರೌಟೇಲಾ ಜೊತೆಗೆ ರಿಷಬ್ ಪಂತ್ ಹೆಸರು ಕೂಡ ತಳುಕು ಹಾಕಿಕೊಂಡಿದೆ. ಇದನ್ನೂ ಓದಿ: 2019 ರಲ್ಲಿ, ರಿಷಬ್ ಪಂತ್ ಮತ್ತು ಊರ್ವಶಿ ರೌಟೇಲಾ ಅವರು ಜುಹುದಲ್ಲಿನ ಎಸ್ಟೆಲ್ಲಾ ಹೋಟೆಲ್‌ʼನಲ್ಲಿ ತಡರಾತ್ರಿ ಡಿನ್ನರ್ ಡೇಟ್‌ʼಗೆ ಹೋಗುತ್ತಿರುವುದು ಕಂಡುಬಂದಿತ್ತು. ನಂತರ ಅವರ ಸಂಬಂಧದ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆದರೆ ನಂತರ ಊರ್ವಶಿ ಮತ್ತು ರಿಷಬ್ ಪಂತ್ ಬೇರೆಯಾದರು ಜೊತೆಗೆ ಪಂತ್ ಊರ್ವಶಿಯನ್ನು ವಾಟ್ಸಾಪ್‌ʼನಲ್ಲಿ ಬ್ಲಾಕ್‌ ಕೂಡ ಮಾಡಿದ್ದರೆನ್ನಲಾಗಿದೆ. ರಿಷಬ್ ಪಂತ್ ಪ್ರಸ್ತುತ ಇಶಾ ನೇಗಿ ಜೊತೆ ಸಂಬಂಧದಲ್ಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...