ವಿಚ್ಛೇದನದ ಬಳಿಕ ಸಿಹಿ ಸುದ್ದಿ ನೀಡಿದ ಸಾನಿಯಾ ಮಿರ್ಜಾ! ಟೆನಿಸ್ ತಾರೆಯ ಮನೆಗೆ ಪುಟ್ಟ ಅಥಿತಿ ಆಗಮನ!! : ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಗೆ ವಿಚ್ಛೇದನ ನೀಡಿದ ದಿನದಿಂದಲೂ ಅವರು ಸುದ್ದಿಯಲ್ಲಿದ್ದಾರೆ. ವಿಚ್ಛೇದನದ ನಂತರ, ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾದಾಗ, ಸಾನಿಯಾ ಮಿರ್ಜಾ ಅವರ ಹೆಸರು ಅನೇಕ ಬಾಲಿವುಡ್ ನಟರೊಂದಿಗೆ ತಳುಕುಹಾಕಿಕೊಂಡಿದೆ.. : ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ಅವರು ಮತ್ತೆ ಯಾವುದೇ ಹೊಸ ಸಂಬಂಧವನ್ನು ಕಂಡುಕೊಳ್ಳಲು ಆಸಕ್ತಿ ಹೊಂದಿಲ್ಲ.. ಮಗನಿಗೆ ಸಂಪೂರ್ಣ ಸಮಯ ನೀಡಲು ಅವರು ಬಯಸುತ್ತಾರೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಸಾನಿಯಾ ಮಿರ್ಜಾ ಕೂಡ ಬಾಲಿವುಡ್ ಪ್ರವೇಶಿಸಬಹುದು ಎಂದು ಹಲವು ವರದಿಗಳಲ್ಲಿ ಹೇಳಲಾಗಿದೆ. ಆದರೆ ಟೆನಿಸ್ ಆಟಗಾರ್ತಿ ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಆದರೆ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ್ಗೆ ಚರ್ಚೆಗೆ ಬರುತ್ತಾರೆ. ಇತ್ತೀಚೆಗೆ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.. ಅದನ್ನು ನೋಡಿದ ಮೇಲೆ ಜನ ಕೂಡ ಗೊಂದಲಕ್ಕೀಡಾಗಿದ್ದಾರೆ.. ಇದನ್ನೂ ಓದಿ- ಸಾನಿಯಾ ಮಿರ್ಜಾ ಅವರು ತಮ್ಮ ಪ್ರೀತಿಯ ಮಗ ಇಜಾನ್ ಮಿರ್ಜಾ ಮಲಿಕ್ ಅವರ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ನವಜಾತ ಶಿಶುವನ್ನು ತನ್ನ ಮಡಿಲಲ್ಲಿ ಹಿಡಿದುಕೊಂಡಿದ್ದಾರೆ. ಈ ಪೋಸ್ಟ್‌ ನೋಡಿದ ಜನ ಕೂಡ ಬೆಚ್ಚಿ ಬಿದ್ದಿದ್ದಾರೆ. ಬಹುಶಃ ಟೆನಿಸ್ ಆಟಗಾರ್ತಿ ಮತ್ತೆ ತಾಯಿಯಾಗಿದ್ದಾಳೆ ಎಂದು ಜನರು ಊಹಿಸಲು ಪ್ರಾರಂಭಿಸಿದ್ದಾರೆ.. ಆದರೆ ಪೋಟೋದಲ್ಲಿ ಕಾಣುತ್ತಿರುವ ಮಗು ಸಾನಿಯಾ ಅವರದ್ದಲ್ಲ, ಅವರ ಸಹೋದರಿ ಅನಮ್ ಮಿರ್ಜಾ ಅವರದ್ದು. ಸಾನಿಯಾ ಮಿರ್ಜಾ ಇತ್ತೀಚಿನ ದಿನಗಳಲ್ಲಿ ತಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಿದ್ದಾರೆ. ಅವರ ಸಂಪೂರ್ಣ ಗಮನವು ಅವರ ಕುಟುಂಬ ಮತ್ತು ಮಗನ ಮೇಲೆ ಮಾತ್ರ ಇದೆ... ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್‌ನಿಂದ ವಿಚ್ಛೇದನದ ನಂತರ ಸಾನಿಯಾ ಹೈದರಾಬಾದ್‌ನಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ವಾಸಿಸುತ್ತಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...