ಗೆಳೆಯರ ಪತ್ನಿಯರನ್ನೇ ಮದುವೆಯಾಗಿ ಮಡದಿಯಾಗಿಸಿಕೊಂಡ ಸ್ಟಾರ್‌ ಕ್ರಿಕೆಟಿಗರಿವರು!! : ಕ್ರಿಕೆಟ್ ಜಗತ್ತಿಗೂ ಗ್ಲಾಮರ್‌ ಲೋಕಕ್ಕೂ ಅವಿನಾಭಾವ ಸಂಬಂಧವೊಂದಿದೆ.. ಕ್ರಿಕೆಟಿಗರ ಪತ್ನಿಯರು ಕೂಡ ಅನೇಕ ಕಾರಣಗಳಿಗಾಗಿ ಜನಮನದಲ್ಲಿ ಉಳಿಯುತ್ತಾರೆ. ಇದೀಗ ಗೆಳೆಯನ ಹೆಂಡತಿಯರನ್ನೇ ಮದುವೆಯಾದ ಕ್ರಿಕೆಟಿಗರ ಬಗ್ಗೆ ತಿಳಿದುಕೊಳ್ಳೋಣ.. : ಕ್ರಿಕೆಟಿಗರ ಪತ್ನಿಯರು ಕೂಡ ಅನೇಕ ಕಾರಣಗಳಿಗಾಗಿ ಜನಮನದಲ್ಲಿ ಉಳಿಯುತ್ತಾರೆ. ಇದೀಗ ಗೆಳೆಯನ ಹೆಂಡತಿಯರನ್ನೇ ಮದುವೆಯಾದ ಕ್ರಿಕೆಟಿಗರ ಬಗ್ಗೆ ತಿಳಿದುಕೊಳ್ಳೋಣ.. ಮುರಳಿ ವಿಜಯ್: ಈ ಪಟ್ಟಿಯಲ್ಲಿ ಮೊದಲ ಮತ್ತು ದೊಡ್ಡ ಹೆಸರು ಭಾರತದ ಆರಂಭಿಕ ಆಟಗಾರ ಮುರಳಿ ವಿಜಯ್ ಅವರದು. ಭಾರತದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರ ಮೊದಲ ಪತ್ನಿ ನಿಕಿತಾ ಬಂಜಾರಾ ಅವರನ್ನು ಮುರಳಿ ವಿವಾಹವಾಗಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳೂ ಇದ್ದಾರೆ. ನಿಕಿತಾ ಬಂಜಾರ: ದಿನೇಶ್ ಕಾರ್ತಿಕ್ ಕೇವಲ 22 ನೇ ವಯಸ್ಸಿನಲ್ಲಿ ನಿಕಿತಾ ಬಂಜಾರಾ ಅವರನ್ನು ವಿವಾಹವಾದರು. ಆದರೆ, ಮದುವೆಯಾದ ಕೇವಲ 5 ವರ್ಷಗಳ ನಂತರ, ನಿಕಿತಾ ಮತ್ತು ಕಾರ್ತಿಕ್ ಪರಸ್ಪರ ವಿಚ್ಛೇದನ ಪಡೆಯಲು ನಿರ್ಧರಿಸಿದರು.. ದಿನೇಶ್ ಕಾರ್ತಿಕ್: ಕಾರ್ತಿಕ್ ಮತ್ತು ನಿಕಿತಾ ಬಂಜಾರಾ ನಡುವಿನ ವಿಚ್ಛೇದನಕ್ಕೆ ಪ್ರಮುಖ ಕಾರಣವೆಂದರೆ ನಿಕಿತಾ ಮತ್ತು ಮುರಳಿ ವಿಜಯ್ ನಡುವಿನ ಸಂಬಂಧ. ನಿಕಿತಾ ಕಾರ್ತಿಕ್‌ನಿಂದ ಬೇರ್ಪಟ್ಟು ಮುರಳಿ ವಿಜಯ್ ಅವರನ್ನು ವಿವಾಹವಾದರು. ಕಾರ್ತಿಕ್ ಕೂಡ ನಂತರ ದೀಪಿಕಾ ಪಳ್ಳಿಕಲ್ ಅವರನ್ನು ಎರಡನೇ ಬಾರಿಗೆ ವಿವಾಹವಾದರು.. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಯೋಗರಾಜ್ ಸಿಂಗ್: ಯೋಗರಾಜ್ ಸಿಂಗ್ ಈ ಹಿಂದೆ ಶಬ್ನಮ್ ಅವರನ್ನು ಮದುವೆಯಾಗಿದ್ದರು. ಆದರೆ ನಂತರ ಇಬ್ಬರೂ ಪರಸ್ಪರ ಬೇರ್ಪಟ್ಟರು. ಯೋಗರಾಜ್ ನಂತರ ಸತ್ವೀರ್ ಕೌರ್ ಅವರನ್ನು ವಿವಾಹವಾದರು. ಇದನ್ನೂ ಓದಿ- ಉಪುಲ್ ತರಂಗ: ಈ ಪಟ್ಟಿಯಲ್ಲಿ ಶ್ರೀಲಂಕಾದ ಆರಂಭಿಕ ಬ್ಯಾಟ್ಸ್‌ಮನ್ ಉಪುಲ್ ತರಂಗ ಹೆಸರೂ ಸೇರಿದೆ. ತರಂಗ ಅವರು ತಮ್ಮ ಆರಂಭಿಕ ಬ್ಯಾಟ್ಸ್‌ಮನ್ ತಿಲಕರತ್ನೆ ದಿಲ್ಶಾನ್ ಅವರ ಪತ್ನಿ ನೀಲಂಕಾ ಅವರನ್ನು ವಿವಾಹವಾದರು. ದಿಲ್ಶನ್ ಮತ್ತು ನೀಲಂಕಾ: ಮದುವೆಯಾದ ಕೆಲವೇ ದಿನಗಳಲ್ಲಿ ದಿಲ್ಶನ್ ಮತ್ತು ನೀಲಂಕಾ ನಡುವೆ ಬಿರುಕು ಶುರುವಾಗಿತ್ತು. ವರದಿಗಳ ಪ್ರಕಾರ, ತರಂಗಾ ಜೊತೆ ನೀಲಂಕಾಗೆ ಇದ್ದ ಸಂಬಂಧವೇ ಮನಸ್ತಾಪಕ್ಕೆ ಕಾರಣ. ಇದರಿಂದಾಗಿ ದಿಲ್ಶನ್ ನೀಲಂಕಾಗೆ ವಿಚ್ಛೇದನ ನೀಡಿದರು. ನೀಲಂಕಾಳ ವಿಚ್ಛೇದನದ ನಂತರ ತರಂಗ ಅವಳನ್ನು ಮದುವೆಯಾದರು.. ತಿಲಕರತ್ನೆ ದಿಲ್ಶನ್: ದಿಲ್ಶನ್ ಕೂಡ ತನ್ನ ಬಾಲ್ಯದ ಗೆಳತಿ ಮಂಜುಳಾಳನ್ನು ಎರಡನೇ ಮದುವೆಯಾದ. ಮಂಜುಳಾ ತೆಲುಗು ನಟಿ. ದಿಲ್ಶಾನ್ ದಂಪತಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...