ಸಾರಾ ತೆಂಡೂಲ್ಕರ್‌ ಬಿಟ್ಟು ಅನನ್ಯಾ ಪಾಂಡೆ ಜೊತೆ ಎಂಗೇಜ್‌ ಆದ ಶುಭಮನ್‌ ಗಿಲ್‌? ಒಡೆದು ಚೂರಾಯ್ತು ರಿಯಾನ್‌ ಪರಾಗ್‌ ಹೃದಯ : ಟೀಮ್ ಇಂಡಿಯಾದ ಉಪನಾಯಕ ಶುಭಮನ್ ಗಿಲ್ ಮತ್ತು ಬಾಲಿವುಡ್ ನಟಿ ಅನನ್ಯಾ ಪಾಂಡೆ 'ಬೀಟ್ಸ್ ಇಂಡಿಯಾ' ಕಂಪನಿಯ ಪ್ರವರ್ತಕರಾಗಿ ಸಹಿ ಹಾಕಿದ್ದಾರೆ. ಈ ಜೋಡಿಯ ಕೆಲವು ಫೋಟೋಗಳನ್ನು ಬೀಟ್ಸ್‌ ಕಂಪನಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. :ಟೀಮ್ ಇಂಡಿಯಾದ ಉಪನಾಯಕ ಶುಭಮನ್ ಗಿಲ್ ಮತ್ತು ಬಾಲಿವುಡ್ ನಟಿ ಅನನ್ಯಾ ಪಾಂಡೆ 'ಬೀಟ್ಸ್ ಇಂಡಿಯಾ' ಕಂಪನಿಯ ಪ್ರವರ್ತಕರಾಗಿ ಸಹಿ ಹಾಕಿದ್ದಾರೆ. ಈ ಜೋಡಿಯ ಕೆಲವು ಫೋಟೋಗಳನ್ನು ಬೀಟ್ಸ್‌ ಕಂಪನಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಟೀಂ ಇಂಡಿಯಾದ ಭವಿಷ್ಯದ ನಾಯಕನಾಗಿ ಶುಭಮನ್ ಗಿಲ್ ಹೊರಹೊಮ್ಮುತ್ತಿದ್ದಾರೆ. ಇದೇ ಕಾರಣಕ್ಕೆ ಇವರೊಂದಿಗೆ ಹಲವು ಕಂಪನಿಗಳು ಪ್ರವರ್ತಕರಾಗಿ ಒಪ್ಪಂದ ಮಾಡಿಕೊಳ್ಳುತ್ತಿವೆ. ಈ ಕ್ರಮದಲ್ಲಿ, ಪ್ರಮುಖ ಮೊಬೈಲ್ ಹೆಡ್‌ಫೋನ್ ಕಂಪನಿ ಬೀಟ್ಸ್ ಶುಭಮನ್ ಗಿಲ್ ಮತ್ತು ಅನನ್ಯಾ ಪಾಂಡೆ ಅವರೊಂದಿಗೆ ಬ್ರ್ಯಾಂಡ್ ಅಂಬಾಸಿಡರ್‌ಗಳಾಗಿ ಒಪ್ಪಂದಕ್ಕೆ ಸಹಿ ಹಾಕಿದೆ. ಶುಭಮನ್ ಗಿಲ್ ಮತ್ತು ಅನನ್ಯಾ ಪಾಂಡೆ ಬೀಟ್ಸ್ ಹೆಡ್‌ಫೋನ್ ಧರಿಸಿರುವ ಫೋಟೋಗಳು ಸಾಮಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿವೆ. ಆದರೆ ಅನನ್ಯ ಪಾಂಡೆ ಜೊತೆ ಶುಭಮನ್ ಗಿಲ್ ಜೋಡಿಯಾದ ನಂತರ ನೆಟಿಜನ್‌ಗಳು ಟೀಮ್ ಇಂಡಿಯಾದ ಯುವ ಆಲ್‌ರೌಂಡರ್ ರಿಯಾನ್ ಪರಾಗ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. 2024 ರ ಋತುವಿನ ನಂತರ, ರಿಯಾನ್ ಪರಾಗ್, ಆನ್‌ಲೈನ್ ಗೇಮಿಂಗ್ ಲೈವ್ ಸ್ಟ್ರೀಮಿಂಗ್ ಸೆಷನ್‌ನಲ್ಲಿ ಭಾಗವಹಿಸಿದರು. ಈ ಸ್ಟ್ರೀಮಿಂಗ್ ಸಮಯದಲ್ಲಿ ಅವರು ಅನ್ನು ತೆರೆದರು. ಅವರ ಸರ್ಚ್ ಹಿಸ್ಟರಿ ನೋಡಿ ನೆಟ್ಟಿಗರು ಶಾಕ್ ಆಗಿದ್ದರು. ಸ್ಟಾರ್ ಹೀರೋಯಿನ್ ಗಳ ಹಾಟ್ ವೀಡಿಯೋಗಳಿಗಾಗಿ ಹುಡುಕಾಡಿದ್ದು, ಅವರ ಯೂಟ್ಯೂಬ್ ಸರ್ಚ್‌ ಹಿಸ್ಟರಿಯಲ್ಲಿ ಕಂಡುಬಂತು. ಅನ್ಯನಾ ಪಾಂಡೆ ಹಾಟ್, ಸಾರಾ ಅಲಿ ಖಾನ್ ಹಾಟ್ ಎನ್ನುವ ಹುಡುಕಾಟ ಸರ್ಚ್‌ ಹಿಸ್ಟರಿಯಲ್ಲಿತ್ತು. ಇದನ್ನೂ ಓದಿ: ಈ ಹೀರೋಯಿನ್ ಗಳ ಅಂದವನ್ನು ಹುಡುಕಿದ ರಿಯಾನ್ ಪರಾಗ್, ವಿರಾಟ್ ಕೊಹ್ಲಿ ಹೆಸರನ್ನೂ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿದ್ದು ಕಾಣಿಸಿತು. ತನ್ನ ಸರ್ಚ್‌ ಹಿಸ್ಟರಿಯನ್ನು ಮರೆಮಾಡಲು ವಿಫಲವಾದ ನಂತರ ರಯಾನ್ ಅವರ ವೈಯಕ್ತಿಕ ಇತಿಹಾಸವು ಸಾರ್ವಜನಿಕರಿಗೆ ಸೋರಿಕೆಯಾಯಿತು. ಇದರಿಂದಾಗಿ ಪರಾಗ್ ಮೇಲೆ ಅಂದು ತೀವ್ರ ಟೀಕೆ ವ್ಯಕ್ತವಾಗಿತ್ತು. ಇತ್ತೀಚೆಗಷ್ಟೇ ಅನನ್ಯಾ ಪಾಂಡೆ ಜೊತೆ ಶುಬ್‌ಮನ್ ಗಿಲ್ ಒಪ್ಪಂದಕ್ಕೆ ಸಹಿ ಮಾಡಿಕೊಂಡಿದ್ದನ್ನು ನೆಟ್ಟಿಗರು ರಿಯಾನ್ ಪರಾಗ್ ಅವರಿಗೆ ನೆನಪಿಸಿ ಟ್ರೋಲ್ ಮಾಡುತ್ತಿದ್ದಾರೆ. ಐಪಿಎಲ್ 2024 ರ ಋತುವಿನಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದ ರಿಯಾನ್ ಪರಾಗ್, ಜಿಂಬಾಬ್ವೆ ಪ್ರವಾಸದೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ನಂತರ ಶ್ರೀಲಂಕಾ ಪ್ರವಾಸದ ವೇಳೆ ಟಿ20 ಹಾಗೂ ಏಕದಿನ ಸರಣಿಯಲ್ಲಿ ಅಸಾಧಾರಣ ಪ್ರದರ್ಶನ ತೋರಿದ್ದರು. ಐಪಿಎಲ್ 2025 ರ ಸೀಸನ್ ಮೆಗಾ ಹರಾಜಿಗೆ ಹೋದರೆ, ಅವರು ದೊಡ್ಡ ಬೆಲೆಗೆ ಸೇಲ್‌ ಆಗುವ ಅವಕಾಶವಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...