ಹಾರ್ದಿಕ್‌ ವಿರುದ್ಧ ಸೇಡು ತೀರಿಸಿಕೊಂಡ ನತಾಶ? . ಜೊತೆಗಿನ ಜಿಮ್‌ ಫೋಟೋ ವೈರಲ್‌! : ಸೆರ್ಬಿಯಾದ ನಟಿ ಹಾಗೂ ಮಾಡೆಲ್‌ ನತಾಸಾ ಸ್ಟಾಂಕೋಕ್‌ ಮತ್ತು ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ಜುಲೈನಲ್ಲಿ ಅಧಿಕೃತವಾಗಿ ತಮ್ಮ ವಿಚ್ಛೆದನವನ್ನು ಘೋಷಿಸಿದರು. ಇದರ ನಂತರ, ನತಾಸಾ ಮತ್ತು ಆಕೆಯ ಮಗ ಅಗಸ್ತ್ಯ ಸೆರ್ಬಿಯಾಕ್ಕೆ ಪ್ರಯಾಣ ಬೆಳೆಸಿದರು, ಅಲ್ಲಿ ಅವರು ಅಗಸ್ತ್ಯರ ನಾಲ್ಕನೇ ಹುಟ್ಟುಹಬ್ಬವನ್ನು ಆಚರಿಸಿದರು. ಹಾರ್ದಿಕ್ ಬ್ರಿಟಿಷ್‌ ಗಾಯಕಿಯೊಂದಿಗೆ ಡೇಟ್‌ ಅಮಡುತ್ತಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ನಟಿ ಮಸ್ಟ್ರಿ ವ್ಯಕ್ತಿಯೊಂದಿಗೆ ಫೋಟೊ ಹಂಚಿಕೊಂಡಿದ್ದಾರೆ. :ಸೆರ್ಬಿಯಾದ ನಟಿ ಹಾಗೂ ಮಾಡೆಲ್‌ ನತಾಶ ಸ್ಟಾಂಕೋಕ್‌ ಮತ್ತು ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ಜುಲೈನಲ್ಲಿ ಅಧಿಕೃತವಾಗಿ ತಮ್ಮ ವಿಚ್ಛೆದನವನ್ನು ಘೋಷಿಸಿದರು. ಇದರ ನಂತರ, ನತಾಶ ಮತ್ತು ಆಕೆಯ ಮಗ ಅಗಸ್ತ್ಯ ಸೆರ್ಬಿಯಾಕ್ಕೆ ಪ್ರಯಾಣ ಬೆಳೆಸಿದರು, ಅಲ್ಲಿ ಅವರು ಅಗಸ್ತ್ಯರ ನಾಲ್ಕನೇ ಹುಟ್ಟುಹಬ್ಬವನ್ನು ಆಚರಿಸಿದರು. ಹಾರ್ದಿಕ್ ಬ್ರಿಟಿಷ್‌ ಗಾಯಕಿಯೊಂದಿಗೆ ಡೇಟ್‌ ಅಮಡುತ್ತಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ನಟಿ ಮಸ್ಟ್ರಿ ವ್ಯಕ್ತಿಯೊಂದಿಗೆ ಫೋಟೊ ಹಂಚಿಕೊಂಡಿದ್ದಾರೆ. ಪ್ರಸ್ತುತ ತನ್ನ ಮಗ ಅಗಸ್ತ್ಯನೊಂದಿಗೆ ಮುಂಬೈನಲ್ಲಿರುವ ನತಾಶ ಸ್ಟಾಂಕೋವಿಕ್ ಮಂಗಳವಾರ ತನ್ನ ಮಗನನ್ನು ಹಾರ್ದಿಕ್‌ ಪಾಂಡ್ಯ ಅವರ ಮನೆಗೆ ಡ್ರಾಪ್‌ ಮಾಡಿದ್ದಾರೆ. ಹಾರ್ದಿಕ್ ಅವರ ಚಿಕ್ಕಮ್ಮ, ಪಂಖುರಿ ಶರ್ಮಾ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಸ್ಟೋರಿಗಳನ್ನು ಹಂಚಿಕೊಂಡಿದ್ದು, ಕುಟುಂಬ ಸದಸ್ಯರು ಅಗಸ್ತಯ ಜೊತೆ ಉತ್ತಮವಾಗಿ ಸಮಯ ಕಳೆಯುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಈಗಿರುವಾಗ ನತಾಶ, ಈಗ ದಿಶಾ ಪಟಾನಿಯ ವದಂತಿಯ ಗೆಳೆಯ ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಜೊತೆಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ನಟಿ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ದಿಶಾ ಪಟಾನಿ ಅವರ ರೂಮರ್ಡ್‌ ಬಾಯ್‌ಫ್ರೆಂಡ್‌ ಅಲೆಕ್ಸಾಂಡರ್‌ನೊಂದಿಗೆ ಮಿರರ್‌ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. ತನ್ನ ವ್ಯಾಯಾಮದ ನಂತರದ ಚಿತ್ರದಲ್ಲಿ, ನತಾಶ ಕಪ್ಪು ಬಿಗಿಯುಡುಪು ಮತ್ತು ಕನ್ನಡಕಗಳೊಂದಿಗೆ ನಿಯಾನ್ ಕ್ರಾಪ್ ಟಾಪ್ ಧರಿಸಿರುವುದನ್ನು ಕಾಣಬಹುದು. ಮುಂಬೈಗೆ ಆಗಮಿಸಿದ ಕೆಲವೇ ಗಂಟೆಗಳ ನಂತರ, ನತಾಶ ಸೋಮವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿಸಂಗೀತವನ್ನು ಕೇಳುತ್ತಾ ನಗರದ ಮೂಲಕ ಚಾಲನೆ ಮಾಡುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋ ಜೊತೆಗೆ, "ಮುಂಬೈ ರೈನ್ಸ್ (ಮಳೆ ಎಮೋಜಿ)" ಎಂದು ಬರೆದುಕೊಂಡು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಸ್ಟೋರಿ ಪೋಸ್ಟ್‌ ಮಾಡಿದ್ದಾರೆ. ನಟಾಸಾ ಹಾರ್ದಿಕ್‌ನಿಂದ ಬೇರ್ಪಟ್ಟು ತಿಂಗಳಿನಿಂದ ಸುದ್ದಿಯಲ್ಲಿದ್ದಾರೆ. ಮೇ 31, 2020 ರಂದು, ನತಾಸಾ ಮತ್ತು ಹಾರ್ದಿಕ್ ವಿವಾಹವಾಗಿದ್ದರು, ಅದೇ ವರ್ಷದ ಜುಲೈ 30 ರಂದು, ಅವರ ಮಗ ಅಗಸ್ತ್ಯ ಜನಿಸಿದನು. ಹಲವು ದಿನಗಲಿಂದ ಈ ಇಬ್ಬರ ವಿಚ್ಛೆದನ ವದಂತಿಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ದವು, ಇದರ ಬೆನ್ನಲ್ಲೆ ಈ ಜೋಡಿ ತಮ್ಮ ಇನ್ಸ್ಟಾಗ್ರಾಮ್‌ ಕಾತೆಯಲ್ಲಿ ತಮ್ಮ ವಿಚ್ಛದನದ ಕುರಿತು ಅಧಿಕೃತವಾಗಿ ಹಂಚಿಕೊಂಡಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...