ಸ್ಟಾರ್‌ ನಟಿಯರ ಜೊತೆ ಡೇಟಿಂಗ್‌! ಬಾಲಿವುಡ್‌ ಬೆಡಗಿಯರನ್ನು ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡಿದ್ದ ಟೀಂ ಇಂಡಿಯಾದ ಆಟಗಾರರು ಯಾರು ಗೊತ್ತಾ? : ಬಾಲಿವುಡ್‌ ಹಾಗೂ ಕ್ರಿಕೆಟ್‌ಗೂ ಅಘಾದವಾದ ಸಂಬಂಧ ಇದೆ. ನಟಿಯರ ಜೊತೆ ಸ್ಟಾರ್‌ ಆಟಗಾರರು ಡೇಟ್‌ ಮಾಡುವುದು ಬ್ರೇಕ್‌ಅಪ್‌ ಮಾಡಿಕೊಳ್ಳುವುದು ಇವೆಲ್ಲಾ ಸಾಮಾನ್ಯ. ಈಗಿರುವಾಗ. ಟೀಂ ಇಂಡಿಯಾದ ಯಾವ ಯಾವ ಆಟಗಾರರು ನಟಿಯರ ಜೊತೆ ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡಿದ್ದಾರೆ ಗೊತ್ತಾ? :ಬಾಲಿವುಡ್‌ ಹಾಗೂ ಕ್ರಿಕೆಟ್‌ಗೂ ಅಘಾದವಾದ ಸಂಬಂಧ ಇದೆ. ನಟಿಯರ ಜೊತೆ ಸ್ಟಾರ್‌ ಆಟಗಾರರು ಡೇಟ್‌ ಮಾಡುವುದು ಬ್ರೇಕ್‌ಅಪ್‌ ಮಾಡಿಕೊಳ್ಳುವುದು ಇವೆಲ್ಲಾ ಸಾಮಾನ್ಯ. ಈಗಿರುವಾಗ. ಟೀಂ ಇಂಡಿಯಾದ ಯಾವ ಯಾವ ಆಟಗಾರರು ನಟಿಯರ ಜೊತೆ ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡಿದ್ದಾರೆ ಗೊತ್ತಾ? ಬಾಲಿವುಡ್‌ ನಟಿಯರನ್ನು ಟೀಂ ಇಂಡಿಯಾದ ಆಟಗಾರರು ಲವ್‌ ಮಾಡಿ ಬ್ರೇಕ್‌ ಅಪ್‌ ಆದ ಹಲವು ಉದಾಹರಣೆಗಳಿವೆ, ಲವ್‌ ಮಾಡಿದವರಲ್ಲಿ ಮದುವೆಯಾಗುವವರ ಸಂಖ್ಯೆ ಕಡಿಮೆ, ಉದಾಹರನೆಗೆ ಅಥಿಯಾ ಶೆಟ್ಟಿ- ಕೆ ಎಲ್‌ ರಾಹುಲ್‌, ಅನುಷ್ಕಾ ಶರ್ಮಾ- ವಿರಾಟ್‌ ಕೊಹ್ಲಿ. ಆದರೆ ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡ ಹಲವು ಉದಾಹರಣೆಗಳು ಸಹ ಇದೆ. ಯುವರಾಜ್ ಸಿಂಗ್ - ಕಿಮ್ ಶರ್ಮಾಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಹೆಸರು ಬಾಲಿವುಡ್ ವಲಯದಲ್ಲಿ ಆಗಾಗ ಕೇಳಿಬರುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಯುವರಾಜ್ ಮತ್ತು ಕಿಮ್ ಶರ್ಮಾ ದೀರ್ಘಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಆದರೆ ಈ ಸಂಬಂಧದ ಕುರಿತು ಜೋಡಿ ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಇಶಾ ಶರ್ವಾನಿ - ಜಹೀರ್ ಖಾನ್ಭಾರತೀಯ ಕ್ರಿಕೆಟಿಗರಾದ ಜಹೀರ್ ಖಾನ್ ಮತ್ತು ಇಶಾ ಶರ್ವಾನಿ ಸುಮಾರು ಎಂಟು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದಾರೆ. ಬಹಳ ದಿನಗಳ ನಂತರ ಇಬ್ಬರೂ ಬೇರೆಯಾಗಲು ನಿರ್ಧರಿಸಿದರು. ಅದರ ನಂತರ, ಜಹೀರ್ ಖಾನ್ 2017 ರಲ್ಲಿ ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಅವರನ್ನು ವಿವಾಹವಾದರು. ಶಾರುಖ್ ಖಾನ್ ಅಭಿನಯದ ಚಕ್ ದೇ ಇಂಡಿಯಾ ಚಿತ್ರದ ಮೂಲಕ ಸಾಗರಿಕಾ ಬಾಲಿವುಡ್ ಪ್ರವೇಶಿಸಿದ್ದರು. ರವಿಶಾಸ್ತ್ರಿ - ಅಮೃತಾ ಸಿಂಗ್ರವಿಶಾಸ್ತ್ರಿ ಮತ್ತು ಅಮೃತಾ ಸಿಂಗ್ ಒಂದಾನೊಂದು ಕಾಲದಲ್ಲಿ ಪರಸ್ಪರ ಪ್ರೀತಿ ಮಾಡಿ ಆಗಿನ ಕಾಲಕ್ಕೆ ತಮ್ಮ ಪ್ರೇಮ ಪ್ರಕರನದ ಮೂಲಕ ಸುದ್ದಿಯಲ್ಲಿದ್ದ ಜೋಡಿ. ಈ ಇಬ್ಬರು ಜೋಡಿ ಮದುವೆಯಾಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು, ಆದರೆ ರವಿ ಶಾಸ್ತರಿಯವರಿಗೆ ಅಮೃತಾ ಸಿಂಗ್‌ ಮದುವೆಯ ನಂತರ ನಟಿಸುವುದು ಇಷ್ಟವಿಲ್ಲದ ಕಾರಣ ಈ ಪ್ರೀತಿಯ ಸಂಬಂಧವನ್ನು ಜೋಡಿ ಮುರಿದುಕೊಂಡಿದ್ದರು. 1990 ರಲ್ಲಿ, ರವಿಶಾಸ್ತ್ರಿ ರಿತು ಸಿಂಗ್ ಅವರನ್ನು ವಿವಾಹವಾದರು ಮತ್ತು ಅಮೃತಾ ಸಿಂಗ್ ಅವರು ನಟ ಸೈಫ್ ಅಲಿ ಖಾನ್ ಅವರನ್ನು ವಿವಾಹವಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...