ಸ್ಟಾರ್‌ ಆಟಗಾರನಿಗೆ ಬೆದರಿಕೆ ಹಾಕಿದ್ದ ಮುಂಬೈ ತಂಡ! ಖಿನ್ನತೆಗೆ ಒಳಗಾಗಿ ಕರಿಯರ್‌ ಹಾಳು ಮಾಡಿಕೊಂಡ ಈತ ಯಾರು ಗೊತ್ತಾ? : ರಾಯಲ್ ಚಾಲೆಂಜರ್ಸ್ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರನ್ನು ಬೆದರಿಸಿ ಐಪಿಎಲ್‌ನ ಮುಂಬೈ ಫ್ರಾಂಚೈಸಿ ಮಾಲೀಕರು ವರ್ಗಾವಣೆ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದ ಶಾಕಿಂಗ್‌ ಸತ್ಯ ಇದೀಗ ಬೆಳಕಿಗೆ ಬಂದಿದೆ. ಹಲವಾರು ದಿನಗಳ ಕಾಲ ಇದನ್ನು ಗುಟ್ಟಾಗಿ ಇಟ್ಟುಕೊಂಡಿದ್ದ ಸ್ಟಾರ್‌ ಆಟಗಾರ ಇದೀಗ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. :ರಾಯಲ್​ ಚಾಲೆಂಜರ್ಸ್​ ತಂಡದ ಮಾಜಿ ಆಟಗಾರ​​ ರಾಬಿನ್ ಉತ್ತಪ್ಪ ಅವರನ್ನು ಬೆದರಿಸಿ ಐಪಿಎಲ್‌ನ ಮುಂಬೈ ಫ್ರಾಂಚೈಸಿ ಮಾಲೀಕರು ವರ್ಗಾವಣೆ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದ ಶಾಕಿಂಗ್‌ ಸತ್ಯ ಇದೀಗ ಬೆಳಕಿಗೆ ಬಂದಿದೆ. ಹಲವಾರು ದಿನಗಳ ಕಾಲ ಇದನ್ನು ಗುಟ್ಟಾಗಿ ಇಟ್ಟುಕೊಂಡಿದ್ದ ಸ್ಟಾರ್‌ ಆಟಗಾರ ಇದೀಗ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ರಾಬಿನ್‌ ಉತ್ತಪ್ಪ ಇತ್ತೀಚೆಗೆ ಕ್ರಿಕೆಟ್‌ನಿಂದ ಹೊರಗುಳಿದಿರುವುದು ಗೊತ್ತೇ ಇದೆ, ಈ ನಡುವೆ ತಮಗೆ ಆದ ಕಹಿ ಘಟನೆಯನ್ನು ನೆನೆದು ಈತ ಭಾವುಕರಾಗಿದ್ದಾರೆ. 2009 ರ ಐಪಿಎಲ್‌ ಸಮಯದಲ್ಲಿ ಮುಂಬೈ ಫ್ರಾಂಚೈಸಿ ತಮಗೆ ಬೆದರಿಕೆ ಒಡ್ಡಿ ಟ್ರಾನ್ಸ್‌ಫರ್‌ ಪೇಪರ್ಸ್‌ಗೆ ಸಹಿ ಹಾಕಿಸಿಕೊಂಡಿದ್ದರು ಎಂದು ರಾಬಿನ್‌ ಉತ್ತಪ್ಪ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: 2009ರಲ್ಲಿ ತನಗೆ ಇಷ್ಟ ಇಲ್ಲದಿದ್ದರು ಮುಂಬೈ ಫ್ರಾಂಚೈಸಿ ಉಸ್ತುವಾರಿ ಬೆದರಿಕೆ ಹಾಕಿ ಟ್ರೇಡ್‌ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದರಂತೆ, ಸಹಿ ಹಾಕಲು ಆಗಲ್ಲ ಎಂದಾಗ ಈ ಟ್ರಾನ್ಸ್‌ಫರ್‌ ಪೇಪರ್ಸ್‌ಗೆ ಸಹಿ ಹಾಕದಿದ್ದರೆ ತಂಡದಲ್ಲಿ ಆಡುವ ಅವಕಾಸ ಕೊಡುವುದಿಲ್ಲ ಎಂದಿದ್ದರಂತೆ, ಇದಕ್ಕೆ ಭಯ ಪಟ್ಟು, ಇನ್ನೆಲ್ಲಿ ತನಗೆ ತಂಡದಲ್ಲಿ ಆಡಲು ಅವಕಾಶ ಸಿಗದೇ ಹೋಗುವುದೇ ಎಂದು ತಿಳಿದು ಮುಂಬೈ ತಂಡದ ಉಸ್ತುವಾರಿ ಹಾಕಿದ ಬೆದರಿಕೆಗೆ ಮಣಿದು ರಾಬಿನ್‌ ಉತ್ತಪ್ಪ ಈ ಪತ್ರಗಳಿಗೆ ಸಹಿ ಹಾಕಿದ್ದರಂತೆ. ಈ ಘಟನೆ ನನ್ನನ್ನು ಖಿನ್ನತೆಗೆ ಒಳಗಾಗುವಂತೆ ಮಾಡಿತ್ತು, 2009ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ನಾನು 2011 ನಿಂದ ಸರಿಯಾಗಿ ಆಟದ ಮೇಲೆ ಗಮನ ಹರಿಸಲು ಸಾಧ್ಯವಾಗಲಿಲ್ಲ, ನನ್ನ ಮೇಲೆ ನನಗೆ ಕಂಟ್ರೋಲ್‌ ತಪ್ಪಿತ್ತು, ಮೈಂಡ್‌ ನನಗೆ ಸಾಥ್‌ ಕೊಟ್ಟಿಲ್ಲ, ಈ ಸಂದರ್ಭದಲ್ಲಿ ನನಗೆ ಸಹಾಯ ಮಾಡಿದ್ದು ನನ್ನ ತಾಯಿ, ನಾನು ಖಿನ್ನತೆಗೆ ಒಳಗಾದಾಗ ನನ್ನ ತಾಯಿ ನನ್ನ ನೆರವಿಗೆ ನಿಂತರು, ಇದರಿಂದ ನಾನು ಇಂದು ಗುಣವಾಗುವುದಕ್ಕೆ ಸಾದ್ಯವಾಯಿತು ಎಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...