ಗಂಡ ಬೇಡ, ಜೀವನಾಂಶ ಮಾತ್ರ ಬೇಕೇಬೇಕು! ಕ್ರಿಕೆಟಿಗ ಶಮಿಯ ಪತ್ನಿ ಮುಂದಿಟ್ಟಿರುವ ಜೀವನಾಂಶದ ಬೇಡಿಕೆ ಕೇಳಿದರೆ ಎದೆಯೊಡೆಯುತ್ತದೆ : ಮದುವೆಯಾದ ನಾಲ್ಕು ವರ್ಷಗಳಲ್ಲಿ ಪತ್ನಿಯಿಂದಲೇ ನಾನಾ ಆರೋಪಗಳನ್ನು ಎದುರಿಸಿದ್ದರು ಶಮಿ. ಅದಾದ ನಂತರ ಪತ್ನಿ ಹಸಿನ್ ಜಹಾನ್‌ʼನಿಂದ ದೂರವಾಗುವ ನಿರ್ಧಾರ ತೆಗೆದುಕೊಂಡ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಆದರೆ :2023 ರ ವಿಶ್ವಕಪ್‌ʼನಲ್ಲಿ ಮೊಹಮ್ಮದ್ ಶಮಿ ಆಡಿದ 7 ಪಂದ್ಯಗಳಲ್ಲಿ ಪ್ರಮುಖ ವಿಕೆಟ್‌ ಆಗಿ ಹೊರಹೊಮ್ಮಿದ್ದರು. ಟೀಂ ಇಂಡಿಯಾ ಫೈನಲ್‌ ತಲುಪುವಲ್ಲಿ ಶಮಿ ಮಹತ್ವದ ಕೊಡುಗೆ ನೀಡಿದ್ದರು. ಆದರೆ ಇಷ್ಟೆಲ್ಲಾ ಸಾಧನೆ ತೋರುತ್ತಿರುವ ಕ್ರಿಕೆಟಿಗ ಶಮಿ ವೈಯಕ್ತಿಕ ಬದುಕು ಮಾತ್ರ ಸವಾಲಿನಿಂದ ಕೂಡಿದೆ. ಇದನ್ನೂ ಓದಿ: ಮದುವೆಯಾದ ನಾಲ್ಕು ವರ್ಷಗಳಲ್ಲಿ ಪತ್ನಿಯಿಂದಲೇ ನಾನಾ ಆರೋಪಗಳನ್ನು ಎದುರಿಸಿದ್ದರು ಶಮಿ. ಅದಾದ ನಂತರ ಪತ್ನಿ ಹಸಿನ್ ಜಹಾನ್‌ʼನಿಂದ ದೂರವಾಗುವ ನಿರ್ಧಾರ ತೆಗೆದುಕೊಂಡ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಆದರೆ 2018 ರಲ್ಲಿ ಶಮಿ ಅವರ ಪತ್ನಿ ಕೌಟುಂಬಿಕ ಹಿಂಸಾಚಾರ ಮತ್ತು ವಿವಾಹೇತರ ಸಂಬಂಧದ ಆರೋಪದ ಜೊತೆಗೆ, ಶಮಿ ಮ್ಯಾಚ್ ಫಿಕ್ಸಿಂಗ್‌ʼನಲ್ಲಿ ತೊಡಗಿದ್ದಾರೆ ಎಂದು ಆರೋಪ ಮಾಡಿದ್ದರು. ಅಷ್ಟೇ ಅಲ್ಲದೆ, ಪೊಲೀಸ್ ದೂರು ಕೂಡ ದಾಖಲಿಸಿದ್ದರು. ಅದಾದ ನಂತರ ಶಮಿಯ ಕೇಂದ್ರ ಒಪ್ಪಂದವನ್ನು ಕೇಂದ್ರ ಕ್ರಿಕೆಟ್ ಮಂಡಳಿಯು ತಡೆಹಿಡಿಯಿತು. ಹಸಿನ್ ಜಹಾನ್ ಮಾಡೆಲ್ ಮತ್ತು ಚೀರ್‌ ಲೀಡರ್. ಮಾಧ್ಯಮ ವರದಿಗಳ ಪ್ರಕಾರ, ಶಮಿ ಮತ್ತು ಹಸಿನ್ ಜಹಾನ್ 2012 ರಲ್ಲಿ ಭೇಟಿಯಾಗಿದ್ದು, ಅದಾದ ನಂತರ ಪ್ರೀತಿಸಿ ಜೂನ್ 2014 ರಲ್ಲಿ ವಿವಾಹವಾದರು. ಈ ದಂಪತಿಗೆ 2015 ರಲ್ಲಿ ಮಗಳು ಜನಿಸಿದ್ದಳು. ಆದರೆ ಸುಂದರ ಜೀವನದಲ್ಲಿ ಬಿರುಗಾಳಿಯೇ ಎಬ್ಬಿತ್ತು. ಇದನ್ನೂ ಓದಿ: ಇನ್ನು ವಿಚ್ಛೇದನ ಅರ್ಜಿಯನ್ನು ವಿಚಾರಣೆ ನಡೆಸಿದ ಕೋಲ್ಕತ್ತಾ ನ್ಯಾಯಾಲಯವು ಮಾಸಿಕ 1 ಲಕ್ಷ 30 ಸಾವಿರ ರೂ. ಜೀವನಾಂಶ ನೀಡುವಂತೆ ಶಮಿಗೆ ಸೂಚಿಸಿತು. ಇದರಲ್ಲಿ 50 ಸಾವಿರ ಹಸಿನ್ ಜಹಾನ್ʼಗೆ ನೀಡಿದರೆ, ಉಳಿದದ್ದು ಪುತ್ರಿಗೆ ನೀಡಬೇಕೆಂದು ಆದೇಶಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...