ಒಂದೇ ಒಂದು ಅವಕಾಶ ಕೊಡಿ ಅಂತಿದ್ದವರಿಗೆ ಕೊನೆಗೂ ಖುಲಾಯಿಸಿತು ಲಕ್‌; ಮೊದಲ ಬಾರಿಗೆ ವಾರ್ಷಿಕ ಒಪ್ಪಂದದಲ್ಲಿ ಈ ಇಬ್ಬರು ಕ್ರಿಕೆಟಿಗರಿಗೆ ಸ್ಥಾನ ಕಳೆದ ವರ್ಷ ಡ್ಯುನೆಡಿನ್‌ʼನಲ್ಲಿ ಬಾಂಗ್ಲಾದೇಶ ವಿರುದ್ಧ ಪಾದಾರ್ಪಣೆ ಮಾಡಿದ ಕ್ಲಾರ್ಕ್‌ʼಸನ್, ನ್ಯೂಜಿಲೆಂಡ್‌ʼಗಾಗಿ ಮೂರು ಮತ್ತು ಆರು T20 ಪಂದ್ಯಗಳನ್ನು ಆಡಿದ್ದಾರೆ. ಸ್ಮಿತ್ ನ್ಯೂಜಿಲೆಂಡ್‌ʼನಲ್ಲಿ ದೇಶೀಯ ಕ್ರಿಕೆಟ್‌ʼನಲ್ಲಿ ವೆಲ್ಲಿಂಗ್‌ಟನ್ ಪರ ಆಡುವಾಗ ಅದ್ಭುತ ಪ್ರದರ್ಶನ ನೀಡಿದ್ದರು. :ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಇಬ್ಬರು ಆಟಗಾರರನ್ನು ಮೊದಲ ಬಾರಿಗೆ ವಾರ್ಷಿಕ ಒಪ್ಪಂದದಲ್ಲಿ ಸೇರ್ಪಡೆಗೊಳಿಸಿ ಶುಭಸುದ್ದಿ ನೀಡಿದೆ. ‌ ಇದನ್ನೂ ಓದಿ: ಆಲ್‌ರೌಂಡರ್‌ʼಗಳಾದ ನಾಥನ್ ಸ್ಮಿತ್ ಮತ್ತು ಜೋಶ್ ಕ್ಲಾರ್ಕ್ಸನ್ ನ್ಯೂಜಿಲೆಂಡ್‌ʼನ ವಾರ್ಷಿಕ ಒಪ್ಪಂದದಲ್ಲಿ ಮೊದಲ ಬಾರಿಗೆ ಸೇರ್ಪಡೆಗೊಂಡಿದ್ದಾರೆ. ಈ ಇಬ್ಬರು ಯುವ ಆಟಗಾರರು ವಾರ್ಷಿಕ ಒಪ್ಪಂದಗಳನ್ನು ಪಡೆದ ಕ್ರಿಕೆಟಿಗರ 20 ಸದಸ್ಯರ ಪಟ್ಟಿಯಲ್ಲಿ ಡೆವೊನ್ ಕಾನ್ವೇ ಮತ್ತು ಫಿನ್ ಅಲೆನ್ ಬದಲಿಗೆ ಸೇರ್ಪಡೆಗೊಂಡಿದ್ದಾರೆ. ಅಂದಹಾಗೆ ಕಾನ್ವೇ ಮತ್ತು ಅಲೆನ್ ಕಳೆದ ತಿಂಗಳಷ್ಟೇ ವಾರ್ಷಿಕ ಒಪ್ಪಂದವನ್ನು ತಿರಸ್ಕರಿಸಿದ್ದರು. ಇದನ್ನೂ ಓದಿ: ಕಳೆದ ವರ್ಷ ಡ್ಯುನೆಡಿನ್‌ʼನಲ್ಲಿ ಬಾಂಗ್ಲಾದೇಶ ವಿರುದ್ಧ ಪಾದಾರ್ಪಣೆ ಮಾಡಿದ ಕ್ಲಾರ್ಕ್‌ʼಸನ್, ನ್ಯೂಜಿಲೆಂಡ್‌ʼಗಾಗಿ ಮೂರು ಮತ್ತು ಆರು T20 ಪಂದ್ಯಗಳನ್ನು ಆಡಿದ್ದಾರೆ. ಸ್ಮಿತ್ ನ್ಯೂಜಿಲೆಂಡ್‌ʼನಲ್ಲಿ ದೇಶೀಯ ಕ್ರಿಕೆಟ್‌ʼನಲ್ಲಿ ವೆಲ್ಲಿಂಗ್‌ಟನ್ ಪರ ಆಡುವಾಗ ಅದ್ಭುತ ಪ್ರದರ್ಶನ ನೀಡಿದ್ದರು. ಇಬ್ಬರೂ ಆಟಗಾರರು ಅಂಡರ್ 19 ರಲ್ಲಿ ನ್ಯೂಜಿಲೆಂಡ್ ಅನ್ನು ಪ್ರತಿನಿಧಿಸಿದ್ದಾರೆ. ಈ ಇಬ್ಬರು ಆಲ್‌ರೌಂಡರ್‌ʼಗಳು ಬಾಂಗ್ಲಾದೇಶದಲ್ಲಿ 2016 ರ ಐಸಿಸಿ ಅಂಡರ್-19 ವಿಶ್ವಕಪ್‌ʼನಲ್ಲಿ ಒಪ್ಪಂದದ ಸಹ ಆಟಗಾರರಾದ ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ ಮತ್ತು ಬೆನ್ ಸಿಯರ್ಸ್ ಅವರ ಜೊತೆ ಆಡಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...